Mangaluru ವರದಕ್ಷಿಣೆ ಕಿರುಕುಳ: ದೂರು ದಾಖಲು
Team Udayavani, Nov 17, 2023, 9:03 PM IST
ಮಂಗಳೂರು: ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಕೆಪಿಟಿ ವ್ಯಾಸ ನಗರದ ಕೀರ್ತಿ ಪೈ ಅವರು ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಮೂಲತಃ ಕಾಸರಗೋಡು ನಿವಾಸಿಗಳಾಗಿದ್ದು, ವ್ಯಾಸ ನಗರದ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಪತಿ ಚೇತನ್ ವಿ. ಭಕ್ತ, ಅವರ ನಾದಿನಿ, ಅತ್ತೆ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.
2022 ಡಿ. 18ರಂದು ವಿವಾಹವಾಗಿತ್ತು. ಹೆಚ್ಚು ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ ಎಂದು ಕೀರ್ತಿ ಪೈ ದೂರಿನಲ್ಲಿ ತಿಳಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.