Mangaluru ಈಜುಕೊಳದಲ್ಲಿ ಮುಳುಗಿ ಸಾವು
Team Udayavani, Dec 12, 2023, 9:52 PM IST
ಮಂಗಳೂರು: ನಗರದ ಮಂಗಳಾ ಈಜುಕೊಳದಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಹರ್ಯಾಣ ಮೂಲದ ಅಭಿಷೇಕ್ (30) ಮೃತಪಟ್ಟವರು. ಈಜುಕೊಳದಲ್ಲಿ ಸಂಜೆ 4.45ರಿಂದ 5.30ರ ವರೆಗೆ ಸಾರ್ವಜನಿಕರಿಗೆ ಈಜಲು ಪ್ರವೇಶಾವಕಾಶವಿದ್ದು ಅಭಿಷೇಕ್ 4.30ರ ವೇಳೆಗೆ ಟಿಕೆಟ್ ಪಡೆದುಕೊಂಡು ನೀರಿಗೆ ಇಳಿದಿದ್ದಾರೆ. ಸುಮಾರು 15 ನಿಮಿಷದ ಬಳಿಕ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಸುಮಾರು 30 ಮಂದಿ ಈಜಾಡುತ್ತಿದ್ದರು. ಆದರೆ ಅವರ ಗಮನಕ್ಕೆ ಬಂದಿರಲಿಲ್ಲ. ಹುಡುಗನೋರ್ವ ಗಮನಿಸಿ ಲೈಫ್ಗಾರ್ಡ್‌ಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಬದುಕಿಸುವ ಯತ್ನ ವಿಫಲ
ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ಲೈಫ್ಗಾರ್ಡ್‌ಗಳಾದ ರಾಜೇಂದ್ರ ಮತ್ತು ಪುಂಡಲೀಕ ಅವರು ಕಾರ್ಯಾಚರಣೆ ನಡೆಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈಜಾಡಲು ಬಂದಿದ್ದ ಡಾ| ನರೇಂದ್ರ ನಾಯಕ್ ಮತ್ತು ಲೈಫ್‌ಗಾರ್ಡ್ ರಾಜೇಂದ್ರ ಅವರು ಅಭಿಷೇಕ್ ಅವರಿಗೆ ಕೃತಕ ಉಸಿರಾಟ ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ. ಅಭಿಷೇಕ್ ಅವರು ಈಜುಕೊಳಕ್ಕೆ ಯುವಕ ಬಂದಿರುವುದು, ಈಜುಕೊಳಕ್ಕೆ ಇಳಿದು ಈಜಾಡುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೃದಯಾಘಾತ?
ಅಭಿಷೇಕ್ ಅವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾಗ ಆಹಾರ ಹಾಗೂ ರಕ್ತ ವಾಂತಿ ಮಾಡಿರುವುದಾಗಿ ಈಜುಕೊಳದ ಸಿಬಂದಿ ತಿಳಿಸಿದ್ದಾರೆ. ಏಕಾಏಕಿ ನೀರಿನಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೂರನೇ ಸಾವು
ಮಂಗಳಾ ಈಜುಕೊಳದಲ್ಲಿ 2013ರ ಅ. 25ರಂದು ಬೋಳೂರಿನ ವಿದ್ಯಾರ್ಥಿ ಸೋಹನ್ (13) ಮೃತಪಟ್ಟಿದ್ದ. 2019 ಮಾ. 24ರಂದು ಜೋಡುಕಟ್ಟೆ ನಿವಾಸಿ ಯಜ್ಞೇಶ್ (19) ಮೃತಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.