Mangaluruಗ್ರಾಹಕ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆ: ಐವರು ಬಿಲ್ಡರ್ ಗಳಿಗೆ 3 ವರ್ಷ ಜೈಲು
Team Udayavani, Nov 18, 2023, 11:26 PM IST
ಮಂಗಳೂರು: ಮಂಗಳೂರು ಗ್ರಾಹಕ ನ್ಯಾಯಾಲಯ ತಾನು ನೀಡಿದ್ದ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ನಗರದ ಐವರು ಬಿಲ್ಡರ್‌ಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಮತ್ತು ತಲಾ ಒಂದು ಲಕ್ಷ ರೂ. ದಂಡ ಕಟ್ಟುವಂತೆ ಆದೇಶಿಸಿದೆ.
ನಗರದ ಮಾರಿಯನ್ ಇನ್‌ಫ್ರಾಸ್ಟ್ರಕ್ಚರ್ನ ಪಾಲುದಾರರಾಗಿರುವ ಉಜ್ವಲ ಡಿ’ಸೋಜಾ ಮತ್ತು ನವೀನ್ ಕಾರ್ಡೋಝಾ ಹಾಗೂ ಅವರೊಂದಿಗೆ ಡೆವಲಪ್‌ಮೆಂಟ್ ಪಾಲುದಾರರಾಗಿರುವ ವಿಲಿಯಂ ಸಾಲ್ಡಾನಾ, ಗಾಯತ್ರಿ ಮತ್ತು ಲೂಸಿ ಸಲ್ಡಾನಾ ಶಿಕ್ಷೆಗೆ ಒಳಗಾದವರು.
ಪ್ರಕರಣದ ಹಿನ್ನೆಲೆ
ಈ ಐವರು 2013ರಲ್ಲಿ ಗುಜ್ಜರೆಕೆರೆ ಬಳಿ ಬಹುಮಹಡಿ ಕಟ್ಟಡ ನಿರ್ಮಿಸಿ ಮಾರಾಟ ಮಾಡುತ್ತಿದ್ದರು. ಮಂಗಳೂರಿನ ಡಾ| ಲವೀನಾ ಇದರಲ್ಲಿ ಒಂದು ಫ್ಲಾಟನ್ನು ಕಾರ್ ಪಾರ್ಕಿಂಗ್ ಸೌಲಭ್ಯದ ಸಹಿತ 40 ಲಕ್ಷ ರೂ.ಗೆ ಖರೀದಿಸಲು ಒಪ್ಪಂದ ಮಾಡಿ ಹಣ ನೀಡಿದ್ದರು. ಆದರೆ ಕಾರ್ ಪಾರ್ಕಿಂಗ್ ಸ್ಥಳ ನೀಡಿರಲಿಲ್ಲ. ಈ ಬಗ್ಗೆ ವಿನಂತಿಸಿದಾಗ ನಿರಾಕರಿಸಿದ್ದರು. ಕೊನೆಗೆ ಲವೀನಾ 2014ರಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ 2017ರ ಜೂ.24ರಂದು ಅಂತಿಮ ತೀರ್ಪು ಪ್ರಕಟಿಸಿ, ದೂರುದಾರರಿಗೆ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದರೊಂದಿಗೆ 50,000 ರೂ. ಪರಿಹಾರ ಹಾಗೂ 10,000 ರೂ.ಪ್ರಕರಣದ ಖರ್ಚನ್ನು ನೀಡುವಂತೆ ಆದೇಶಿಸಿತ್ತು.
ಆರೋಪಿಗಳು ಇದನ್ನು ಪ್ರಶ್ನಿಸಿ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿ, ಮಂಗಳೂರು ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ಆದರೂ ಆರೋಪಿಗಳು ದೂರುದಾರರಿಗೆ ಪಾರ್ಕಿಂಗ್ ಸೌಲಭ್ಯ ಕೊಟ್ಟಿರಲಿಲ್ಲ. ಹೀಗಾಗಿ ಲವೀನಾ ಮತ್ತೆ 2022ರಲ್ಲಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಆರೋಪಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕಾರಣ ಅವರಿಗೆ ಗ್ರಾಹಕ ರಕ್ಷಣ ಕಾಯ್ದೆ 2019ರ ಅನ್ವಯ ಶಿಕ್ಷ ವಿಧಿಸಬೇಕೆಂದು ವಿನಂತಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.