Railway station ವರ್ಷದೊಳಗೆ 3 ನಿಲ್ದಾಣಗಳಿಗೆ ಅಮೃತ ಭಾಗ್ಯ
ಮಂಗಳೂರು ಜಂಕ್ಷನ್, ಬಂಟ್ವಾಳ, ಸುಬ್ರಹ್ಮಣ್ಯ ರೈಲು ನಿಲ್ದಾಣಗಳಿಗೆ ಹೊಸ ಸ್ವರೂಪ
Team Udayavani, Nov 21, 2023, 7:15 AM IST
ಮಂಗಳೂರು: ಅಮೃತ್ ಭಾರತ್ ಸ್ಟೇಶನ್ ಯೋಜನೆ (ಎಬಿಎಸ್‌ಎಸ್)ಯಡಿ ವಿಶ್ವದರ್ಜೆಯ ರೈಲು ನಿಲ್ದಾಣವಾಗಿ ಅಭಿವೃದ್ಧಿ ಹೊಂದಲಿರುವ ಮಂಗಳೂರು ಜಂಕ್ಷನ್, ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ಕಾಮಗಾರಿಗೆ ಚಾಲನೆ ದೊರೆತಿದ್ದು, ಆರಂಭಿಕ ಹಂತದ ಕೆಲಸಗಳು ಚುರುಕು ಪಡೆದಿವೆ.
2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವ ಘೋಷಣೆ ಮಾಡಲಾಗಿತ್ತು. ಅದರಂತೆ ಅಮೃತ್ ಭಾರತ್ ಸ್ಟೇಶನ್ ಸ್ಕೀಂನಡಿ ಮಂಗಳೂರು ಜಂಕ್ಷನ್ 19.32 ಕೋ.ರೂ., ಬಂಟ್ವಾಳ ರೈಲು ನಿಲ್ದಾಣ 26.18 ಕೋ.ರೂ. ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ 23.73 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಯಾಗಲಿದೆ. ವರ್ಷದೊಳಗೆ ಈ ಮೂರು ನಿಲ್ದಾಣಗಳು ಸಂಪೂರ್ಣ ಹೊಸ ಸ್ವರೂಪ ಪಡೆಯಲಿವೆ.
ಆಯ್ಕೆ ಹೇಗೆ?
ರೈಲು ನಿಲ್ದಾಣದ ಆದಾಯ, ನಿಲ್ದಾಣವನ್ನು ಬಳಸುತ್ತಿರುವ ಪ್ರಯಾಣಿಕರ ಸಂಖ್ಯೆ, ನಿಲ್ದಾಣ ವ್ಯಾಪ್ತಿಯ ಧಾರ್ಮಿಕ ಸ್ಥಳಗಳು, ಪ್ರವಾಸೋದ್ಯಮ ಮೊದಲಾದ ವಿಷಯ ಮತ್ತು ಬೆಳವಣಿಗೆಯನ್ನು ಗಮನಿಸಿ, ಅಭಿವೃದ್ಧಿಗೆ ಇರುವ ಅವಕಾಶಗಳನ್ನು ಆಧರಿಸಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ನಿಲ್ದಾಣವನ್ನು ಕೇವಲ ಪ್ರಯಾಣಿಕರ ಆಗಮನ- ನಿರ್ಗಮನಕ್ಕೆ ಸೀಮಿತವಾಗಿರಿಸದೆ ನಗರವನ್ನು ಕೇಂದ್ರೀಕರಿಸಿ ಹೆಚ್ಚಿನ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಒದಗಿಸಿ ಅಭಿವೃದ್ಧಿ ಪಡಿಸುವುದು ಯೋಜನೆಯ ಉದ್ದೇಶ. ಸ್ವಾತಂತ್ರÂದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರೈಲ್ವೇ ಸಚಿವಾಲಯದ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 508 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸುವ “ಅಮೃತ್ ಭಾರತ್ ನಿಲ್ದಾಣ ಯೋಜನೆ’ (ಎಬಿಎಸ್‌ಎಸ್)ಗೆ ಚಾಲನೆ ನೀಡಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಎಲ್ಲ ರೈಲು ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಏನೆಲ್ಲ ಅಭಿವೃದ್ಧಿ ?
ಪ್ರಸ್ತುತ ಇರುವ ರೈಲು ನಿಲ್ದಾಣದ ಕಟ್ಟಡವನ್ನು ಹಾಗೇ ಉಳಿಸಿಕೊಂಡು ಪಾರಂಪರಿಕ ಶೈಲಿಯ ಸ್ಪರ್ಶದೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರವೇಶದ್ವಾರ, ಗ್ರಾನೈಟ್ ಫ್ಲೋರಿಂಗ್, ಸುತ್ತಲಿನ ಪ್ರದೇಶದ ಅಭಿವೃದ್ಧಿಯ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ, ಬಸ್ ಬೇ ನಿರ್ಮಾಣ, ದ್ವಿಚಕ್ರ ಹಾಗೂ ಚತುಷcಕ್ರ ವಾಹನಗಳಿಗೆ ಪಾರ್ಕಿಂಗ್, ಹೊಸ ಪಾರ್ಸೆಲ್ ಕಚೇರಿ ಮತ್ತು ಎಸಿ ವೇಟಿಂಗ್ ಹಾಲ್, ಎಸ್ಕಲೇಟರ್, ವೈಫೈ ವ್ಯವಸ್ಥೆ ಇತ್ಯಾದಿ ನಿರ್ಮಾಣವಾಗಲಿವೆ.
ಮಂಗಳೂರು ಜಂಕ್ಷನ್ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಶನ್ ಸ್ಕೀಂನಲ್ಲಿ ಅಭಿವೃದ್ಧಿಗೊಳಿಸಲು ಈಗಾಗಲೇ ಶಂಕುಸ್ಥಾಪನೆ ನೆರವೇರಿಸ ಲಾಗಿದೆ. ಸುಮಾರು 19.32 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯಲ್ಲಿ ಈಗಾಗಲೇ ಆರಂಭಿಕ ಹಂತದ ಕೆಲಸಗಳು ಪ್ರಗತಿಯಲ್ಲಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಕಾಮಗಾರಿಯೂ ಆರಂಭವಾ ಗಿದ್ದು, ಶೀಘ್ರ ಅಭಿವೃದ್ಧಿಗೊಳ್ಳಲಿದೆ.
– ನಳಿನ್ ಕುಮಾರ್ ಕಟೀಲು,ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.