Mangaluru ಕೂಳೂರು ಹಳೆ ಸೇತುವೆ ದುರಸ್ತಿ; ಆ. 19ರಿಂದ ಘನ ವಾಹನ ಸಂಚಾರ ನಿರ್ಬಂಧ
Team Udayavani, Aug 16, 2024, 7:15 AM IST
ಮಂಗಳೂರು: ಮಂಗಳೂರು – ಉಡುಪಿ ಸಂಪರ್ಕದ ಕೂಳೂರು ಹಳೆಯ ಕಮಾನು ಸೇತುವೆಯ ದುರಸ್ತಿ ಹಿನ್ನೆಲೆಯಲ್ಲಿ ಹಗಲು ವೇಳೆಯಲ್ಲಿ ಘನ ವಾಹನಗಳ ಸಂಚಾರವನ್ನು 3 ದಿನಗಳ ಕಾಲ ನಿರ್ಬಂಧಿಸಲು ದ.ಕ. ಜಿಲ್ಲಾಡಳಿತ ನಿರ್ಧರಿಸಿದೆ.
ಆ. 19, 20 ಹಾಗೂ 21ರಂದು ಘನ ವಾಹನಗಳು ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ಮಾತ್ರ ಪಕ್ಕದಲ್ಲಿರುವ ಹೊಸ ಸೇತುವೆಯಲ್ಲಿ ಸಂಚರಿಸಬಹುದು. ಈ ಅವಧಿಯಲ್ಲಿ ಹೊಸ ಸೇತುವೆಯನ್ನು ಘನ ವಾಹನಗಳ ದ್ವಿಮುಖ ಸಂಚಾರಕ್ಕೆ ಬಳಸಲಾಗುತ್ತದೆ.
ಈ ದಿನಗಳಲ್ಲಿ ಬೆಳಗ್ಗೆ 6ರಿಂದ 11ರ ವರೆಗೆ ಹಾಗೂ ಅಪರಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ಉಡುಪಿಯಿಂದ ಕೇರಳ ಕಡೆಗೆ ಸಂಚರಿಸುವ ಘನ ವಾಹನಗಳು ಮೂಲ್ಕಿ- ಸುರತ್ಕಲ್- ಎಂಆರ್‌ಪಿಎಲ್, ಬಜ್ಪೆ, ಕೆಪಿಟಿ, ನಂತೂರು ಮಾರ್ಗವಾಗಿ ಸಾಗಬಹುದು.
ಈ ಪ್ರಾಯೋಗಿಕ ಸಂಚಾರ ನಡೆಸಿದ ಅನಂತರ ಅಗತ್ಯ ಮಾರ್ಪಾ ಡುಗಳಿದ್ದಲ್ಲಿ ಈ ನಿರ್ಬಂಧವನ್ನು ಆ. 25ರಿಂದ ಮುಂದಿನ ತಿಂಗಳು ಅ. 25ರ ವರೆಗೆ ವಿಸ್ತರಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.