![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 28, 2023, 12:16 AM IST
ಮಂಗಳೂರು: ಕಾಶ್ಮೀರದ ರಜೌರಿಯಲ್ಲಿ ಉಗ್ರರರೊಂದಿಗೆ ನಡೆದ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಹೆಸರನ್ನು ಸುರತ್ಕಲ್‌ನ ಎಂಆರ್‌ಪಿಎಲ್ ರಸ್ತೆಗೆ ಇಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಸೋಮವಾರ “ಉದಯವಾಣಿ’ಯೊಂದಿಗೆ ಮಾತ ನಾಡಿದ ಅವರು, ಪ್ರಾಂಜಲ್ ಅವರ ತಂದೆ ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಪ್ರಾಂಜಲ್ ಬಾಲ್ಯದಲ್ಲಿ ಇದೇ ರಸ್ತೆಯಲ್ಲಿ ದಿನ ನಿತ್ಯ ಸಂಚಾರ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ರಸ್ತೆಗೆ ಅವರ ಹೆಸರು ಇಡುವುದು ಸೂಕ್ತ. ಮುಂದಿನ ಮನಪಾ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಸೇರಿಸಿ, ಸಭೆಯಲ್ಲಿ ಅಂಗೀಕಾರ ಪಡೆದು ಸರಕಾರಕ್ಕೆ ಕಳುಹಿಸಲಾಗುವುದು. ಕೊಟ್ಟಾರ ಚೌಕಿ ಸರ್ಕಲ್‌ಗೂ ಕ್ಯಾ| ಪ್ರಾಂಜಲ್ ಹೆಸರು ಇಡುವ ನಿಟ್ಟಿನಲ್ಲಿ ಶಾಸಕ ಡಾ| ವೈ. ಭರತ್ ಶೆಟ್ಟಿ ಪ್ರಸ್ತಾವಿಸಿದ್ದು, ವಿಚಾರವನ್ನೂ ಚರ್ಚೆ ಮಾಡಲಾಗುವುದು ಎಂದರು.
ಕಾಟಿಪಳ್ಳ – ಸುರತ್ಕಲ್ ವರ್ತುಲ ರಸ್ತೆಗೂ ಹೆಸರು?
ಸುರತ್ಕಲ್: ಸ್ಥಳೀಯವಾಗಿ ವಿದ್ಯಾಭ್ಯಾಸ ಮಾಡಿ ಸೈನ್ಯಕ್ಕೆ ಸೇರಿ ದೇಶ ಸೇವೆಯ ಸಂದರ್ಭ ವೀರಮರಣವನ್ನಪ್ಪಿದ ಕ್ಯಾ| ಪ್ರಾಂಜಲ್ ಅವರ ಹೆಸರನ್ನು ಗಣೇಶಪುರ ಕಾಟಿಪಳ್ಳ – ಸುರತ್ಕಲ್ ವರ್ತುಲ ರಸ್ತೆಗೆ ನಾಮಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದು ಸೂಚಿಸಿದ್ದೇನೆ ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.