Mangaluru; ಗಮನಿಸಿ.. ಫೆ.6ರಂದು ಮಂಗಳೂರಿನ ಹಲವೆಡೆ ನೀರು ಸರಬರಾಜಿಲ್ಲ
Team Udayavani, Feb 4, 2024, 3:00 PM IST
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ-ಬೆಂದೂರ್ವೆಲ್-ಪಣಂಬೂರು 1000 ಎಂ.ಎಂ. ವ್ಯಾಸದ ಕೊಳವೆಯನ್ನು ಬೆಂದೂರ್ವೆಲ್ ಬಳಿ ಕೆಯುಐಡಿಎಫ್ಸಿ ವತಿಯಿಂದ ಬಲ್ಕ್ ಪ್ಲೋ ಮೀಟರ್ ಅಳವಡಿಕೆ ಕಾಮಗಾರಿ ಇರುವುದರಿಂದ ಫೆ.6 ರಂದು ಬೆಳಗ್ಗೆ 6 ಗಂಟೆಯಿಂದ ಫೆ.7 ಬೆಳಗ್ಗೆ 6 ಗಂಟೆಯವರೆಗೆ ನಗರದ ಕೆಲವೊಂದು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಲೋ ಲೆವೆಲ್ ಪ್ರದೇಶಗಳಾದ ಪಿ.ವಿ.ಎಸ್, ಲೇಡಿಹಿಲ್, ಬಂದರು, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲಬೈಲು, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ, ಕಾನ, ಕುಳಾಯಿ, ಮುಕ್ಕ, ಪಣಂಬೂರು ಮುಂತಾದ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳ್ಳಲಿದೆ ಎಂದು ಮಂಗಳೂರು ಪಾಲಿಕೆ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.