Cake: ಆರ್ಡರ್‌ ಕೊಟ್ಟು ಅಂಗಡಿಯವರಿಂದಲೇ ಹಣ ವರ್ಗಾಯಿಸಿಕೊಳ್ಳಲು ಯತ್ನಿಸಿದರು!

ಆನ್‌ಲೈನ್‌ ವಂಚನೆ: ವ್ಯಾಪಾರಸ್ಥರು ಟಾರ್ಗೆಟ್‌

Team Udayavani, Sep 30, 2024, 7:30 AM IST

fraudd

ಮಂಗಳೂರು: ಕೇಕ್‌ ಶಾಪ್‌ ಮಾಲಕರೋರ್ವರಿಗೆ ಕರೆ ಮಾಡಿ ಕೇಕ್‌ಗೆ ಆರ್ಡರ್‌ ಕೊಟ್ಟು ಗೂಗಲ್‌ ಪೇ ಮೂಲಕ ಹಣ ಪಾವತಿಸುವ ನಾಟಕವಾಡಿ ಮಾಲಕರಿಂದಲೇ ಹಣ ವರ್ಗಾಯಿಸಿಕೊಂಡು ವಂಚಿಸುವ ಯತ್ನವೊಂದು ನಡೆದಿದೆ.

ಬಜಪೆಯ ಕೇಕ್‌ ಶಾಪ್‌ವೊಂದರ ಮಾಲಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಹಿಂದಿಯಲ್ಲಿ ಮಾತನಾಡಿ ಆತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುತ್ತಿರುವ ಸಿಐಎಸ್‌ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬಂದಿ ಎಂದು ಪರಿಚಯಿಸಿಕೊಂಡು ‘ಕೂಡಲೇ ವಿಮಾನ ನಿಲ್ದಾಣಕ್ಕೆ 4 ಕೆಜಿ ಕೇಕ್‌ ತುರ್ತಾಗಿ ಬೇಕಾಗಿದೆ. ಎಷ್ಟು ಬಿಲ್‌ ಆಗುತ್ತದೆ ಎಂದು ಪ್ರಶ್ನಿಸಿದ್ದಾನೆ. ಮಾಲಕರು ‘2,800 ರೂ. ಆಗುತ್ತದೆ’ ಎಂದು ತಿಳಿಸಿದ್ದಾರೆ. ಕರೆ ಮಾಡಿದವನು ‘ನೀವು ಲೈನ್‌ನಲ್ಲಿಯೇ ಇರಿ. ಆ ಹಣವನ್ನು ನಿಮಗೆ ಗೂಗಲ್‌ ಪೇ ಮಾಡುತ್ತೇನೆ. ನಿಮ್ಮ ಗೂಗಲ್‌ ಪೇ ನಂಬರ್‌ ಕಳುಹಿಸಿ. ನಾನು ಕೇಕ್‌ ತೆಗೆದುಕೊಂಡು ಬರಲು ಓರ್ವ ಹುಡುಗನನ್ನು ಕಳುಹಿಸುತ್ತೇನೆ’ ಎಂದ. ಮಾಲಕರು ಲೈನ್‌ನಲ್ಲಿ ಇದ್ದುದರಿಂದ ತನ್ನ ಪತ್ನಿಯ ಗೂಗಲ್‌ ಪೇ ಸಂಖ್ಯೆ ನೀಡಿದ್ದರು. ಬಳಿಕ ಕರೆ ಕಡಿತವಾಯಿತು. ಸ್ವಲ್ಪ ಹೊತ್ತಿನಲ್ಲಿ ಮಾಲಕರ ಪತ್ನಿ ಕರೆ ಮಾಡಿ ‘ಯಾರೋ 28,000 ರೂ. ಕಳುಹಿಸಿರುವ ಮೆಸೇಜ್‌ ಬಂದಿದೆ’ ಎಂದು ತಿಳಿಸಿದರು.

2,800ರ ಬದಲು 28,000 ರೂ!
ಮಾಲಕರಿಗೆ ಅವರ ಪತ್ನಿ ಕರೆ ಮಾಡಿದ ಅನಂತರ ಮತ್ತೆ ಮಾಲಕರಿಗೆ ಕರೆ ಮಾಡಿದ ಆ ಅಪರಿಚಿತ ವ್ಯಕ್ತಿ ‘ಕ್ಷಮಿಸಿ… ನಾನು ನಿಮಗೆ 2,800 ರೂ. ಹಾಕುವ ಬದಲು 28,000 ರೂ. ಹಾಕಿದ್ದೇನೆ. ಅದು ನಾನು ಔಷಧಕ್ಕಾಗಿ ತೆಗೆದಿಟ್ಟ ಹಣ. ನಿಮಗೆ ಕೊಡಬೇಕಾದ 2,800 ಇಟ್ಟುಕೊಂಡು ಉಳಿದ ಮೊತ್ತ ವಾಪಸ್‌ ನೀಡಿ ಎಂದ. ಮಾಲಕರು ಅದಕ್ಕೆ ಒಪ್ಪಿದರು. ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಆಕೆ ‘ಮೆಸೇಜ್‌ ಬಂದಿದೆ. ಆದರೆ ಖಾತೆಗೆ ಹಣ ಜಮೆ ಆಗಿಲ್ಲ’ ಎಂದು ತಿಳಿಸಿದ್ದಾರೆ. ಇದನ್ನು ಮಾಲಕರು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದಾಗ ಆತ ‘ಮೆಸೇಜ್‌ ಬಂದಿರುವಾಗ ಹಣ ಕೂಡ ಜಮೆಯಾಗಿರುತ್ತದೆ’ ಎಂದ. ಯಾವುದಕ್ಕೂ ನೋಡುವ ಎಂದು ಮಾಲಕರು ಪತ್ನಿ ಮತ್ತು ಆ ಅಪರಿಚಿತ ವ್ಯಕ್ತಿಯೊಂದಿಗೆ ಕಾನ್ಫರೆನ್ಸ್‌ ಕರೆ ಮಾಡಿ ಮಾತನಾಡಿದರು. ಆಗ ಕೂಡ ಅಪರಿಚಿತ ವ್ಯಕ್ತಿ 28,000 ರೂ. ಜಮೆ ಮಾಡಿರುವುದಾಗಿ ತಿಳಿಸಿದ. ಅಳುತ್ತಲೇ ‘ಮೇಡಂ, ಅದು ನನ್ನ ಮೆಡಿಸಿನ್‌ ಹಣ… ದಯವಿಟ್ಟು ವಾಪಸ್‌ ಮಾಡಿ’ ಎಂದು ಕೇಳಿಕೊಂಡ. ಬಳಿಕ ಪತ್ನಿ ಕಾನ್ಫರೆನ್ಸ್‌ ಕರೆ ಕಡಿತ ಮಾಡಿ ಪತಿಗೆ ನೇರವಾಗಿ ಕರೆ ಮಾಡಿ ಮೆಸೇಜ್‌ ಅನ್ನು ಇನ್ನೊಮ್ಮೆ ಪರಿಶೀಲಿಸುವುದಾಗಿ ತಿಳಿಸಿದರು.

ಮೆಸೇಜ್‌ ಬಂದಿದ್ದು ಬ್ಯಾಂಕಿನಿಂದ ಅಲ್ಲ !
ಮಾಲಕರ ಪತ್ನಿ ಮೆಸೇಜ್‌ ಪರಿಶೀಲಿಸುವಾಗ ಮೊದಲು ಆಕೆಯ ಖಾತೆಗೆ 1 ರೂ. ಜಮೆಯಾಗಿರುವ ಮೆಸೇಜ್‌ ಬಂದಿತ್ತು. ಅನಂತರ 28,000 ರೂ. ಬಂದಿರುವುದಾಗಿ ಮೆಸೇಜ್‌ ಬಂದಿತ್ತು. ಆದರೆ ಆ ಮೆಸೇಜ್‌ ಕರೆ ಮಾಡಿದ ವ್ಯಕ್ತಿಯಿಂದಲೇ ಬಂದಿತ್ತೇ ಹೊರತು ಬ್ಯಾಂಕ್‌ನಿಂದ ಬಂದಿರಲಿಲ್ಲ. ಇದನ್ನು ಆಕೆ ಪತಿಗೆ ತಿಳಿಸಿದರು. ಈ ವಿಷಯವನ್ನು ಮಾಲಕರು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದರು. ಆಗ ಆತ ಕರೆ ಕಟ್‌ ಮಾಡಿದ್ದಾನೆ. ಇಲ್ಲಿ ಮಹಿಳೆಯ ಸಮಯಪ್ರಜ್ಞೆಯಿಂದ ವಂಚನೆಗೊಳಗಾಗುವುದು ತಪ್ಪಿದಂತಾಗಿದೆ.

ವ್ಯಾಪಾರಸ್ಥರೇ ಎಚ್ಚರ
ಈ ರೀತಿಯಾಗಿ ವ್ಯಾಪಾರಸ್ಥರನ್ನು ಗುರಿಯಾಗಿಸಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸರಿಯಾಗಿ ಪರಿಶೀಲಿಸದೆ ಯುಪಿಐ ಮೂಲಕ ಹಣ ವರ್ಗಾವಣೆಗೆ ಮುಂದಾಗಬಾರದು ಎಂದು ಬೇಕರಿಯ ಮಾಲಕರು ಮನವಿ ಮಾಡಿದ್ದಾರೆ. ಇಂತಹದ್ದೇ ಪ್ರಕರಣ ಜಿಲ್ಲೆಯ ಹಲವೆಡೆಗಳಲ್ಲಿ ನಡೆಯುತ್ತಲೇ ಇದೆ. ಯಾರೂ ದೂರು ಕೊಡಲು ಮುಂದೆ ಬರದ ಕಾರಣ ಇಂತಹ ಘಟನೆಗಳು ಬೆಳಕಿಗೆ ಬರುತ್ತಿಲ್ಲ.

ಟಾಪ್ ನ್ಯೂಸ್

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

Israel: ಹಮಾಸ್, ಹೆಜ್ಬುಲ್ಲಾ ದಾಳಿ ಬಳಿಕ ಯೆಮೆನ್ ಹೌಥಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ

Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

ಸರಕಾರಿ ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Social-Media

Social Networks Use: ಸಾಮಾಜಿಕ ಜಾಲತಾಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಡಿವಾಣ!

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರಿ ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Kaikamba: ಸವಾರನಿಗೆ ಕಚ್ಚಿದ ಸ್ಕೂಟರ್‌ ಸೀಟಿನಡಿ ಅವಿತಿದ್ದ ಕನ್ನಡಿಹಾವು

Kaikamba: ಸವಾರನಿಗೆ ಕಚ್ಚಿದ ಸ್ಕೂಟರ್‌ ಸೀಟಿನಡಿ ಅವಿತಿದ್ದ ಕನ್ನಡಿಹಾವು

Malavoor : ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು

Malavoor : ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು

Rain: ಕೆಲವು ಕಡೆ ಮಳೆ: ಸುಳ್ಯದಲ್ಲಿ ಉತ್ತಮ ಮಳೆ

Rain: ಕೆಲವು ಕಡೆ ಮಳೆ: ಸುಳ್ಯದಲ್ಲಿ ಉತ್ತಮ ಮಳೆ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

Israel: ಹಮಾಸ್, ಹೆಜ್ಬುಲ್ಲಾ ದಾಳಿ ಬಳಿಕ ಯೆಮೆನ್ ಹೌಥಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ

Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

ಸರಕಾರಿ ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.