ಮಂಗಳೂರು-ಪುಣೆ ಕೆಎಸ್ಸಾರ್ಟಿಸಿ ಅಂಬಾರಿ ಬಸ್‌

ಮಂಗಳೂರು-ಕಾಸರಗೋಡು ವೋಲ್ವೋಗೆ ಚಾಲನೆ

Team Udayavani, Aug 4, 2019, 9:56 AM IST

AMBARI-BUS

ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ದಿಂದ ಮಂಗಳೂರು – ಪುಣೆ ನಡುವೆ ಸಂಚರಿಸಲಿರುವ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಲಿ ಆ್ಯಕ್ಸೆಲ್‌ ಎ.ಸಿ. ಸ್ಲೀಪರ್‌ ಮತ್ತು ಮಂಗಳೂರಿನಿಂದ ಕಾಸರ ಗೋಡಿಗೆ ಸಂಚರಿಸುವ ವೋಲ್ವೋ ಬಸ್‌ಗಳಿಗೆ ಶನಿವಾರ ಶಾಸಕ ವೇದ ವ್ಯಾಸ ಕಾಮತ್‌ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಜನರ ಬೇಡಿಕೆಗೆ ಅನುಗುಣವಾಗಿ ಕೆಎಸ್ಸಾರ್ಟಿಸಿ ಮಹತ್ವದ ಹೆಜ್ಜೆ ಇರಿಸಿದೆ. ಕಾಸರಗೋಡು ಮಂಗಳೂರಿನ ಗಡಿ ಪ್ರದೇಶವಾದ ಕಾರಣ ಅಲ್ಲಿನ ವ್ಯಾಪಾರ, ವಹಿವಾಟುಗಳಿಗೆ ಇದರಿಂದ ಉಪಯೋಗ ವಾಗಲಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ದಿಂದ ಮಂಜೇಶ್ವರ, ಗೋವಾಕ್ಕೆ ಬಸ್‌ಗಳ ಬೇಡಿಕೆ ಇದ್ದು, ಅಧಿಕಾರಿಗಳು ಗಮನಹರಿಸಬೇಕು ಎಂದರು.

ಮಂಗಳೂರು ವಿಭಾಗದಿಂದ ಇದೇ ಮೊದಲ ಬಾರಿಗೆ 14.2 ಮೀ. ಉದ್ದದ ವೋಲ್ವೋ ಸ್ಲೀಪರ್‌ ಬಸ್‌ ಪುಣೆಗೆ ಪ್ರಯಾಣ ಬೆಳೆಸಲಿದ್ದು, ಅಂಬಾರಿ ಡ್ರೀಮ್‌ ಬಸ್‌ ಹಲವಾರು ವೈಶಿಷ್ಟಗಳನ್ನು ಹೊಂದಿದೆ.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಕೆ.ಎಂ. ಅಶ್ರಫ್‌ ಮಾತನಾಡಿ, ಮಂಗಳೂರಿನಿಂದ ಪುಣೆಗೆ ತೆರಳುವ ಬಸ್‌ ಉಡುಪಿ, ಭಟ್ಕಳ, ಹೊನ್ನಾವರ, ಅಂಕೋಲ ಮಾರ್ಗವಾಗಿ ಸಂಚರಿಸುತ್ತದೆ. 1,350 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಪ್ರತೀ ದಿನ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6.45ಕ್ಕೆ ಪುಣೆ ತಲುಪಲಿದೆ. ಅಲ್ಲಿಂದ ಸಂಜೆ 6.30ಕ್ಕೆ ಹೊರಟು ಮರು ಬೆಳಗ್ಗೆ 9.15ಕ್ಕೆ ಮಂಗಳೂರು ತಲುಪಲಿದೆ ಎಂದರು.
ಮಂಗಳೂರಿನಿಂದ ಕಾಸರಗೋಡಿಗೆ ಮೊದಲ ಹಂತದಲ್ಲಿ 2 ಎ.ಸಿ. ವೋಲ್ವೋ
ಬಸ್‌ ಸಂಚರಿಸಲಿವೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಕೆ.ಎಂ. ಅಶ್ರಫ್‌, ವಿಭಾಗ ನಿಯಂತ್ರಣಾಧಿಕಾರಿ ಜಯಶಾಂತ್‌, ಅಧಿಕಾರಿಗಳು ಇದ್ದರು.

ಮಂಗಳೂರು-ಕಾಸರಗೋಡು ಪಾಸ್‌ ಸೌಲಭ್ಯ
ಮಂಗಳೂರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗದಿಂದ ಪ್ರತೀ ದಿನ 14 ಟ್ರಿಪ್‌ ಎ.ಸಿ. ವೋಲ್ವೋ ಬಸ್‌ ಸಂಚರಿಸಲಿದ್ದು, ಪ್ರಯಾಣಿಕರೊಬ್ಬರಿಗೆ 75 ರೂ. ದರ ನಿಗದಿಪಡಿಸಲಾಗಿದೆ. ದಿನದ ಪಾಸಿಗೆ 130 ರೂ. ದರ ನಿಗದಿಪಡಿಸಲಾಗಿದ್ದು, ದಿನದಲ್ಲಿ ಎರಡು ಬಾರಿ ಪ್ರಯಾಣ ಮಾಡಬಹುದಾಗಿದೆ.

ವೋಲ್ವೋ ವೇಳಾಪಟ್ಟಿ
ಮಂಗಳೂರಿನಿಂದ ಬೆಳಗ್ಗೆ 7.00, 7.30, 7.45, 8.00, 10.00, 10.30, 10.45, 11.15, 2, 2.30, 2.45, 3.15, 6.00, 6.30
ಕಾಸರಗೋಡಿನಿಂದ ಬೆಳಗ್ಗೆ 5.30, 5.55, 8.30, 9.00, 9.15, 9.45, 12.00, 12.30, 1.00, 1.30, 4.15, 4.45, 5.15, 5.30

ಟಾಪ್ ನ್ಯೂಸ್

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

ಫೆ.28ರಿಂದ 3 ದಿನ ಹಂಪಿ ಉತ್ಸವ: ಸಚಿವ ಜಮೀರ್‌ ಅಹ್ಮದ್‌

ಫೆ.28ರಿಂದ 3 ದಿನ ಹಂಪಿ ಉತ್ಸವ: ಸಚಿವ ಜಮೀರ್‌ ಅಹ್ಮದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangaluru: ಇ-ಖಾತಾ ವರ್ಗಾವಣೆ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆ

8

Mangaluru: ಸೆಂಟ್ರಲ್‌ ಮಾರ್ಕೆಟ್‌ ಬಳಿ ಅಡ್ಡಾದಿಡ್ಡಿ ಸಂಚಾರ

6(2

Surathkal: ಮಧ್ಯ ಗ್ರಾಮ ರಸ್ತೆಯಲ್ಲಿ; ದ್ವಿಚಕ್ರ ಸವಾರರು ಬಿದ್ದು ಎದ್ದು ಹೋಗಬೇಕಿದೆ

5

Mudbidri: ದುರ್ಬಲ ನೀರ್ಕೆರೆ ಸೇತುವೆ; ಹೊಸ ವರುಷಕ್ಕೆ ಹೊಸತು?

4

Mulki ರೈಲು ನಿಲ್ದಾಣಕ್ಕೆ ನಗರ ಪಂಚಾಯತ್ ಮೂಲ ಸೌಕರ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.