Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್ಗೆ ಪ್ರವೇಶ
Team Udayavani, Dec 28, 2024, 6:32 AM IST
ಮಂಗಳೂರು: ನಗರದ ಬೀಚ್ಗಳನ್ನು ರಾತ್ರಿ ವೇಳೆಯೂ ಸಾರ್ವಜನಿಕರಿಗೆ ತೆರೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಬೀಚ್ಗಳಲ್ಲಿ ಪ್ರವಾಸಿಗರಿಗೆ ಸುರಕ್ಷೆ ದೃಷ್ಟಿಯಿಂದ ಲೈಫ್ಗಾರ್ಡ್, ಬೀದಿದೀಪ ಸಹಿತ ಅಗತ್ಯ ಸೌಕರ್ಯ ಒದಗಿಸಲು ಸಿದ್ಧತೆ ಮಾಡಲಾಗಿದೆ. ಶೀಘ್ರದಲ್ಲಿ ನಗರದ ಪಣಂಬೂರು ಬೀಚ್ನಲ್ಲಿ ಈ ವ್ಯವಸ್ಥೆ ಜಾರಿಯಾಗಲಿದ್ದು, ಅಗತ್ಯ ಕಾಮಗಾರಿಗಳು ನಡೆಯಬೇಕು. ತಣ್ಣೀರುಬಾವಿ ಬೀಚ್ ಬ್ಲೂಫ್ಲಾಗ್ ಮಾನ್ಯತೆ ದೃಷ್ಟಿಯಿಂದ ಕೆಲಸ ಆಗುತ್ತಿದೆ. ಬೀಚ್ಗಳು ರಾತ್ರಿ 1 ಗಂಟೆಯವರೆಗೆ ಪ್ರವಾಸಿಗರಿಗೆ ಮುಕ್ತ ಮಾಡುವ ಉದ್ದೇಶ ಜಿಲ್ಲಾಡಳಿತಕ್ಕಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಸುರಕ್ಷೆ ಸಹಿತ ಅಗತ್ಯ ಸೌಕರ್ಯ ನೀಡಿದ ಬಳಿಕವಷ್ಟೇ ಪ್ರವಾಸಿಗರಿಗೆ ರಾತ್ರಿ ವೇಳೆ ಅವಕಾಶ ನೀಡಲಾಗುತ್ತದೆ. ಆದರೆ, ಪಬ್, ಬಾರ್, ರೆಸ್ಟೋರೆಂಟ್ಗಳು ರಾತ್ರಿ 1 ಗಂಟೆ ವರೆಗೆ ತೆರೆದಿಡುವ ನಿಯಮವನ್ನು ಸದ್ಯಕ್ಕೆ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.