ಗೂಗಲ್ ಪರೀಕ್ಷೆ ಮೊಬೈಲ್ ನಲ್ಲೇ ಬರೆದ ಮಂಗಳೂರು ವಿದ್ಯಾರ್ಥಿ
Team Udayavani, Mar 31, 2018, 9:05 AM IST
ಮಂಗಳೂರು: ಗೂಗಲ್ ಸಂಸ್ಥೆ ನಡೆಸಿದ ಆನ್‌ಲೈನ್ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಪೂರ್ಣಗೊಳಿಸಿದ ಮಂಗಳೂರಿನ ಕಾಲೇಜು ವಿದ್ಯಾರ್ಥಿಯೊಬ್ಬರನ್ನು ಗೂಗಲ್ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಿದೆ. ಈ ವಿದ್ಯಾರ್ಥಿ ಮೊಬೈಲ್ ಮೂಲಕವೇ ಪರೀಕ್ಷೆ ಬರೆದಿರುವುದು ವಿಶೇಷ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಬಿಬಿಎ ವಿದ್ಯಾರ್ಥಿ ಮೂಸಾ ಫಾಝಿಲ್ ಗೂಗಲ್‌ನಿಂದ ಪ್ರಮಾಣಪತ್ರ ಪಡೆದವರು. ಒಟ್ಟು 106 ಪಾಠಗಳನ್ನು ಹೊಂದಿರುವ ‘ಆನ್‌ಲೈನ್ ಮಾರ್ಕೆಟಿಂಗ್ ಫಂಡಮೆಂಟಲ್ ಕ್ವಾಲಿಫಿಕೇಶನ್’ ಪರೀಕ್ಷೆ ಇದಾಗಿದೆ. ಮೂಸಾ ಫಾಝಿಲ್ ಅವರು ನಿರಂತರ ಎರಡು ದಿನಗಳ ಕಾಲ ಪರೀಕ್ಷೆ ಎದುರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಗೂಗಲ್ ಡಿಜಿಟಲ್ ಆಲ್ ಲಾಕ್ಡ್ನ ಬ್ಯಾಚ್‌ಗಳನ್ನು ಯಶಸ್ವಿಯಾಗಿ ಅನ್‌ಲಾಕ್ ಮಾಡಿ, ಗೂಗಲ್ ಡಿಜಿಟಲ್ ಅನ್ ಲಾಕ್ಡ್ ಅಂತಿಮ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿ ಈ ಪ್ರಮಾಣಪತ್ರ ಗಳಿಸಿದ್ದಾರೆ.
ಮಾರ್ಕೆಟಿಂಗ್ ಫಂಡಮೆಂಟಲ್‌ನ ಸರ್ಚ್, ಇಮೇಲ್, ಸೋಶಿಯಲ್ ಮೀಡಿಯಾ, ಡಿಸ್‌ಪ್ಲೇ, ವೀಡಿಯೋ, ಇ-ಕಾಮರ್ಸ್, ಜಿಇಒ ಟಾರ್ಗೆಟಿಂಗ್ ಆ್ಯಂಡ್ ಎನಾಲಿಟಿಕ್ಸ್‌ನ 23 ಮೊಡ್ಯುಲ್‌ಗಳನ್ನು ಗೂಗಲ್ ಡಿಜಿಟಲ್ ಅನ್‌ಲಾಕ್ಡ್ ಕೋರ್ಸ್ ಒಳಗೊಂಡಿದೆ. ಫಾಝಿಲ್ ಅವರು ಫಾಝಿಲ್ ಕ್ರಿಯೇಶನ್ಸ್ ಗ್ರಾಫಿಕ್ ಡಿಸೈನ್ ಸಂಸ್ಥೆಯ ಸಿಇಒ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.