Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
ವಿಶ್ವ ಕೊಂಕಣಿ ಸಮಾರೋಹಕ್ಕೆ ಡಾ| ದಿಲೀಪ್ ಜಿ. ನಾಯಕ್ ಚಾಲನೆ
Team Udayavani, Nov 6, 2024, 6:45 AM IST
ಮಂಗಳೂರು: ದೇಶ ವಿದೇಶದಲ್ಲಿರುವ ಕೊಂಕಣಿ ಭಾಷಿಗರು ತಮ್ಮ ಮಾತೃ ಭಾಷೆಯ ಮೇಲೆ ಅಭಿಮಾನ ಹೊಂದಿದ್ದಾರೆ. ಭಾಷೆಯ ಬಗ್ಗೆ ಅವರಿಗೆ ಇರುವ ಮೋಹವೇ ವಿಶ್ವ ಕೊಂಕಣಿ ಸಮಾರೋಹಕ್ಕೆ ಸಾಕ್ಷಿ. ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಮಾತೃ ಭಾಷೆಯ ಮೇಲೆ ಮಮತೆ ಇರಿಸಿಕೊಂಡು ಕೊಂಕಣಿಗಾಗಿ ಕೆಲಸ ಮಾಡುತ್ತಿರುವುದು ಅಭಿಮಾನದ ವಿಚಾರ. ಅಂತಹ ಕೆಲಸ ಕಾರ್ಯಗಳಿಗೆ ಸದಾ ಬೆಂಬಲ ನೀಡಬೇಕಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹ ಕುಲಪತಿ ಡಾ| ದಿಲೀಪ್ ಜಿ. ನಾಯಕ್ ತಿಳಿಸಿದರು.
ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಂಗಳವಾರ “ವಿಶ್ವ ಕೊಂಕಣಿ ಸಮಾರೋಹ್’ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಕಟ್ಟಿದ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಮುಖ್ಯವಾಗಿದೆ. ವಿಶ್ವ ಕೊಂಕಣಿ ಕೇಂದ್ರವನ್ನು ಕಟ್ಟಿ ಯುವ ಜನತೆಯನ್ನು ಸಂಘಟಿತರನ್ನಾಗಿಸಿ ಸಂಸ್ಥೆ ಅತ್ಯುತ್ತಮವಾಗಿ ಮುನ್ನಡೆಸುತ್ತಿರುವುದು ಎಲ್ಲರಿಗೂ ಮಾರ್ಗದರ್ಶಿ ಎಂದರು.
ಸಮಾರಂಭದಲ್ಲಿ ಪುಂಡಲೀಕ ನಾಯಕ್ ಹಾಗೂ ಡಾ| ಹನುಮಂತ್ ಚೊಪ್ಡೆಕರ್ ಅವರ ಸಂಪಾದಕತ್ವದ “ಕೊಂಕಣಿ ರಂಗಭೂಮಿಯ ಇತಿಹಾಸ’ ಹಾಗೂ ಡಾ| ಬಿ. ದೇವದಾಸ್ ಪೈ ಅವರ “ಕೊಂಕಣಿ ಭಾಷಾ ವಿಜ್ಞಾನದ ದೀರ್ಘಾವಧಿ ಸಂಶೋಧನೆ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವಿಶ್ವ ಕೊಂಕಣಿಯಲ್ಲಿ ನೂರಕ್ಕೂ ಅಧಿಕ ನೇರ ಪ್ರಸಾರ ಕಾರ್ಯಕ್ರಮ ನಿರೂಪಕರಾದ ಶಕುಂತಳಾ ಕಿಣಿ, ಬಸ್ತಿ ಶೋಭಾ ಶೆಣೈ ಹಾಗೂ ಸುಚಿತ್ರಾ ಎಸ್. ಶೆಣೈ ಅವರನ್ನು ಸಮ್ಮಾನಿಸಲಾಯಿತು.
ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜಾ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಕೆ. ಜಗದೀಶ್ ಶೆಣೈ, ಡಾ| ಕಿರಣ್ ಬುಡುRಳೆ, ಗಿಲ್ಬರ್ಟ್ ಡಿ’ಸೋಜಾ, ಖಜಾಂಚಿ ಬಿ.ಆರ್. ಭಟ್, ಟ್ರಸ್ಟಿಗಳಾದ ರಮೇಶ್ ನಾಯಕ್, ಮೆಲ್ವಿನ್ ರೋಡ್ರಿಗಸ್ ಉಪಸ್ಥಿತರಿದ್ದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಕಸ್ತೂರಿ ಮೋಹನ್ ಪೈ ವಂದಿಸಿದರು.
ಎಲ್ಲರಿಗೂ ಶಿಕ್ಷಣ ದೊರೆತಲ್ಲಿ ಮಾತ್ರ ದೇಶದ ಅಭಿವೃದ್ಧಿ
ಸ್ವಾತಂತ್ರೊéàತ್ತರ ಭಾರತದ ಶಿಕ್ಷಣದಲ್ಲಿ ಕೊಂಕಣಿ ವಿಷಯದ ಬಗ್ಗೆ ನಡೆದ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಶಿಕ್ಷಣಾಧಿಕಾರಿ ಡಾ| ಅಶೋಕ್ ಕಾಮತ್ ಅವರು, ಶಿಕ್ಷಣ ಕ್ಷೇತ್ರ ಬೆಳೆದರೆ ದೇಶ ಅಭಿವೃದಿ§ ಹೊಂದುತ್ತದೆ. ದೇಶದಲ್ಲಿ ಶೇ. 80ರಷ್ಟು ಮಂದಿ ಉನ್ನತ ಶಿಕ್ಷಣ ಪಡೆದಿಲ್ಲ. ಶೇ. 70ರಷ್ಟು ಮಕ್ಕಳು ಮಾತ್ರವೇ ದೇಶದಲ್ಲಿ ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿ ಕ್ರಾಂತಿ ತರಲಿದ್ದು, ರಾಜ್ಯದಲ್ಲೂ ಅದರ ಅನುಷ್ಠಾನವಾಗಬೇಕಿದೆ ಎಂದರು.
ಫ್ಲೋರಾ ಕ್ಯಾಸ್ತಲಿನೋ ಮಾತನಾಡಿ, ಶಾಲೆ ಕಾಲೇಜಿನಲ್ಲಿ ಶಿಕ್ಷಣ ಪಡೆದದ್ದೇ ಸಂಪೂರ್ಣ ಶಿಕ್ಷಣವಲ್ಲ. ನಿತ್ಯ ಜೀವನದಲ್ಲಿ ನಾವು ಕಲಿಯುತ್ತಿರಬೇಕಾದ ವಿಚಾರಗಳು ಸಾಕಷ್ಟಿವೆ. ಶಿಕ್ಷಣಕ್ಕೆ ಮಿತಿ ಇರಿಸದೆ ಜೀವನ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಪ್ರಕಾಶ್ ಡಿ., ನಾಗರಾಜ್ ಖಾರ್ವಿ, ಪ್ರಶಾಂತ್ ಶೇಟ್, ಸರಸ್ವತಿ ಪ್ರಭು, ಡಾ| ಪಾಂಡುರಂಗ ನಾಯಕ್ ತಮ್ಮ ವಿಚಾರಗಳನ್ನು ಮಂಡಿಸಿದರು. ವೆಂಕಟೇಶ್ ಎನ್. ಬಾಳಿಗಾ ಗೋಷ್ಠಿ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.