![KND-Amber-greece](https://www.udayavani.com/wp-content/uploads/2024/12/KND-Amber-greece-415x249.jpg)
Mangaluru ದೇವಸ್ಥಾನ ಶಕ್ತಿ ಕೇಂದ್ರ: ಆನೆಗುಂದಿ ಶ್ರೀ
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವಕ್ಕೆ ಚಾಲನೆ
Team Udayavani, Feb 12, 2024, 11:30 PM IST
![MangaluruMangaluru ದೇವಸ್ಥಾನ ಶಕ್ತಿ ಕೇಂದ್ರ: ಆನೆಗುಂದಿ ಶ್ರೀ](https://www.udayavani.com/wp-content/uploads/2024/02/Mangaluru-1-620x303.jpg)
ಮಂಗಳೂರು: ದೇವಸ್ಥಾನಗಳು ಸಮಾಜದ ಶಕ್ತಿ ಕೇಂದ್ರ. ಕುಲಶೇಖರದ ಶಿಖರ ಪ್ರಾಯವಾಗಿ ವೀರ ನಾರಾಯಣ ದೇಗುಲ ಮೂಡಿ ಬಂದಿದೆ ಎಂದು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜಾತ್ರೆ, ಕುಂಭ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವರನ್ನು ಶ್ರದ್ಧೆ ಮತ್ತು ಭಕ್ತಿ ಪ್ರಾರ್ಥಿಸಬೇಕು. ನಾವು ಭಕ್ತಿ-ಶ್ರದ್ಧೆಯಿಂದ ಮಾಡುವ ಸೇವೆ ದೇವರಿಗೆ ತಲು
ಪುತ್ತದೆ, ಭಗವಂತನ ಅನುಗ್ರಹ ಲಭಿಸುತ್ತದೆ. ಅದಕ್ಕೆ ಕುಲಾಲ ಸಮುದಾಯ ಅದ್ಯತೆ ನೀಡಿದೆ. ವೈದಿಕ ಕಾಲದಿಂದಲೂ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎಂದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ನಮ್ಮ ಪಾಪ ಕ್ಷಯಿಸಿ, ಪುಣ್ಯ ಸಂಚಯಿಸಲು ದೇವ ಸ್ಥಾನ ಮಠ ಮಂದಿರಗಳಲ್ಲಿ ಜಾತ್ರಾ ಮಹೋತ್ಸವಗಳ ಆಚರಿಸಲಾಗುತ್ತದೆ. ಆ ಮೂಲಕ ಪಡೆಯುವ ಪುಣ್ಯ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ. ಎಲ್ಲರೂ ಒಟ್ಟಾಗಿ ಮುಂದಿನ ಪೀಳಿಗೆ ಭವಿಷ್ಯಕ್ಕಾಗಿ ಧರ್ಮ ಶಿಕ್ಷಣ, ಆಚಾರ ವಿಚಾರಗಳನ್ನು ತಿಳಿಸುವ ಕೆಲಸ ಮಾಡೋಣ. ಕ್ಷೇತ್ರದ ಮಹಿಮೆ ಇನ್ನಷ್ಟು ಬೆಳಗಲಿ. ಯತಿ ಪರಂಪರೆ ಮತ್ತು ಕೃಷಿ ಪರಂಪರೆಗೆ ಇನ್ನಷ್ಟು ಶಕ್ತಿ ಸಿಗುವಂತಾಗಲಿ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲಾºವಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ
ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಲಯನ್ಸ್ ಉಪಗವರ್ನರ್ ಬಿ.ಎಂ. ಭಾರತಿ, ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕ ಡಾ| ದುರ್ಗಾಪ್ರಸಾದ್ ಎಂ.ಆರ್., ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲಕ ಎಂ. ರವೀಂದ್ರ
ಶೇಟ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಬಾಲಕೃಷ್ಣ ಕುಂಜತ್ತೂರು ಪದವು, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ರಘು ಎ. ಮೂಲ್ಯ, ಬೆಂಗಳೂರು ಸಂಘದ ಅಧ್ಯಕ್ಷ ವಿಟ್ಠಲ್ ಕನೀರ್‌ತೋಟ, ದೇವಳದ ಜೀರ್ಣೋದ್ಧಾರ ಸಮಿತಿ ಬೆಂಗಳೂರು ಅಧ್ಯಕ್ಷ ಮಾಧವ ಕುಲಾಲ್, ಪ್ರಮುಖ ರಾದ ಸನೀಲ್ ಆರ್. ಸಾಲ್ಯಾನ್ ಮುಂಬಯಿ, ಎಸ್.ಆರ್. ಬಂಜನ್, ಗಿರೀಶ್ ಬಿ. ಸಾಲ್ಯಾನ್, ಡಾ| ಸುರೇಖಾ ರತನ್ ಕುಮಾರ್, ದಿವಾಕರ ಮೂಲ್ಯ, ರಾಮಚಂದ್ರ ಬಡಾಜೆ, ಸುಕುಮಾರ್ ಕುಂಪಲ, ಕೆ.ಟಿ. ಹರೀಶ್ ಮೂಡಿಗೆರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಎ., ಸುಂದರ ಕುಲಾಲ್ ಶಕ್ತಿನಗರ, ಬಿ. ಪ್ರೇಮಾನಂದ ಕುಲಾಲ್ ಕೋಡಿಕಲ್, ಗೀತಾ ಮನೋಜ್ ಮರೋಳಿ, ಜಲಜಾಕ್ಷಿ ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ: ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಸುರೇಶ್ ನಾವೂರ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೆàಶ್ವರ ಬರ್ಕೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಕುಮಾರ ಬಂಟ್ವಾಳ, ಶ್ರೀನಿವಾಸ ಸಾಲ್ಯಾನ್ ಬೋಂದೆಲ್, ಶಕ್ತಿ ನಗರ ಹಿಂದೂ ರುದ್ರಭೂಮಿಯ ನಿರ್ವಾಹಕ ಪದ್ಮನಾಭ ಶಕ್ತಿನಗರ, ಕ್ಷೇತ್ರದ ಕಚೇರಿ ಸಹಾಯಕ ವಿಶ್ವನಾಥ ಕೈಕಂಬ ಮತ್ತು ಬಾಲಪ್ರತಿಭೆ ಸಮೃದ್ಧಿ ಎಂ.ಕೆ. ಅವರನ್ನು ಸಮ್ಮಾನಿಸಲಾಯಿತು.ದ.ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ ಸ್ವಾಗತಿಸಿದರು. ರವೀಂದ್ರ ಮನ್ನಿಪ್ಪಾಡಿ ಸಮ್ಮಾನಿತರ ವಿವರ ನೀಡಿದರು.
ಟಾಪ್ ನ್ಯೂಸ್
![KND-Amber-greece](https://www.udayavani.com/wp-content/uploads/2024/12/KND-Amber-greece-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Surthkal-Spota](https://www.udayavani.com/wp-content/uploads/2024/12/Surthkal-Spota-150x90.jpg)
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
![Traffic-UPI](https://www.udayavani.com/wp-content/uploads/2024/12/Traffic-UPI-150x90.jpg)
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
![Gold-saffron](https://www.udayavani.com/wp-content/uploads/2024/12/Gold-saffron-150x90.jpg)
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
![Fake-Gold](https://www.udayavani.com/wp-content/uploads/2024/12/Fake-Gold-150x90.jpg)
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
![money](https://www.udayavani.com/wp-content/uploads/2024/12/money-4-150x90.jpg)
Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ
MUST WATCH
ಹೊಸ ಸೇರ್ಪಡೆ
![KND-Amber-greece](https://www.udayavani.com/wp-content/uploads/2024/12/KND-Amber-greece-150x90.jpg)
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
![Vidhana-Parishat](https://www.udayavani.com/wp-content/uploads/2024/12/Vidhana-Parishat-150x90.jpg)
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
![GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?](https://www.udayavani.com/wp-content/uploads/2024/12/ZOMETO-150x94.jpg)
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
![R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…](https://www.udayavani.com/wp-content/uploads/2024/12/ashwin-150x100.jpg)
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
![Surthkal-Spota](https://www.udayavani.com/wp-content/uploads/2024/12/Surthkal-Spota-150x90.jpg)
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.