ಎರಡು ವರ್ಷ ಕಳೆದರೂ ಪ್ರಸ್ತಾವನೆ ಕಡತದಲ್ಲೇ !
Team Udayavani, Aug 10, 2018, 3:55 AM IST
ಮಹಾನಗರ: ನಗರಕ್ಕೆ ಮಹತ್ತರ ಕೊಡುಗೆ ಕೊಟ್ಟಿರುವ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ ಹೆಸರನ್ನು ಪುರಭವನಕ್ಕೆ ಇಡುವ ವಿಚಾರದಲ್ಲಿ ಮಹಾನಗರ ಪಾಲಿಕೆಯು ನಿರಾಸಕ್ತಿ ಮಾಡಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದ್ದು, ಮಹಾಪುರುಷರೊಬ್ಬರ ಸೇವೆಯನ್ನು ಸ್ಮರಿಸುವ ವಿಚಾರದರಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಾಣಿಸಿದೆ. ಪಾಲಿಕೆಯ ಅಧೀನದಲ್ಲಿರುವ ಪುರ ಭವನಕ್ಕೆ ಕುದ್ಮುಲ್ ರಂಗರಾವ್ ಹೆಸರು ಇಡಬೇಕೆಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ 2016ರಲ್ಲಿ ಮಹಾನಗರ ಪಾಲಿಕೆಯಲ್ಲಿ ಪಕ್ಷಭೇದ ಮರೆತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ವಿಪರ್ಯಾಸ ಅಂದರೆ, ಎರಡು ವರ್ಷಗಳು ಕಳೆದರೂ ಇನ್ನು ಕೂಡ ಸರಕಾರದ ನಿಯ ಮಾನುಸಾರ ಪುರಭವನಕ್ಕೆ ಕುದ್ಮುಲ್ ರಂಗರಾವ್ ಅವರ ಹೆಸರು ಇಡಲು ಪಾಲಿಕೆಗೆ ಸಾಧ್ಯವಾಗಿಲ್ಲ ಎನ್ನುವುದು ಬೇಸರದ ಸಂಗತಿ. ಸರಕಾರದ ಒಡೆತನದಲ್ಲಿರುವ ಕಟ್ಟಡವೊಂದಕ್ಕೆ ಈ ರೀತಿ ಮಹಾನ್ ಪುರುಷರೊಬ್ಬರ ಹೆಸರನ್ನು ನಾಮಕರಣಗೊಳಿಸುವುದು ಸುಮಾರು ಮೂರರಿಂದ ಆರು ತಿಂಗಳಲ್ಲಿ ಮುಗಿದು ಹೋಗುವ ಪ್ರಕ್ರಿಯೆ. ಆದ್ದರಿಂದ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಇದೀಗ ಅವರ ಅಭಿಮಾನಿಗಳಿಂದ ಕೇಳಿಬರುತ್ತಿವೆ.
ಕಾನೂನು ಜ್ಞಾನದ ಕೊರತೆ
ಯಾವ ಕಾರಣಕ್ಕೆ ರಂಗರಾವ್ ಅವರ ಹೆಸರನ್ನು ಸೂಚಿಸುವುದಕ್ಕೆ ಪಾಲಿಕೆ ಇಷ್ಟೊಂದು ವಿಳಂಬ ಮಾಡಿದೆ ಎಂಬುದನ್ನು ಹುಡುಕುತ್ತ ಹೋದ ‘ಸುದಿನ’ಕ್ಕೆ ಕಾನೂನಿನ ಅರಿವಿನ ಕೊರತೆಯಿಂದಾಗಿ ಪಾಲಿಕೆಯೇ ಮಾಡಿಕೊಂಡಿರುವ ಎಡವಟ್ಟು ಬಯಲಾಗಿದೆ. ಪಾಲಿಕೆಯು ಈ ವಿಚಾರದಲ್ಲಿ ನಿಯಮಾನುಸಾರ ಪ್ರಕ್ರಿಯೆ ಗಳನ್ನು ಪೂರ್ಣಗೊಳಿಸಿಲ್ಲ. ಹಾಗಾಗಿ ಹೆಸರಿಡುವ ಕಡತವು ಪಾಲಿಕೆಯಲ್ಲಿ ಮೂಲೆ ಸೇರಿದೆ. ಇದೀಗ, ಈ ಬಗ್ಗೆ ವಿಪಕ್ಷದ ಕೆಲವು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬೀದಿಗಿಳಿದು ಹೋರಾಟ ಮಾಡಲು ಮುಂದಾಗುತ್ತಿದ್ದಂತೆ ಈಗ ತರಾತುರಿಯಲ್ಲಿ ಕಡತವನ್ನು ವಿಲೇವಾರಿಗೆ ಪಾಲಿಕೆ ಮುಂದಾಗಿದೆ.
ಕಾನೂನಾತ್ಮಕ ತೊಡಕು
2016 ಜು. 29ರಂದು ಅಂದಿನ ಮೇಯರ್ ಹರಿನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರಿಡುವ ಬಗ್ಗೆ ನಿರ್ಣಯ ಕೈಗೊಂಡಿತ್ತು. ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಕಾರ್ಯಸೂಚಿ ಮಂಡಿಸಿದ್ದರು. 2016 ಡಿಸೆಂಬರ್ 8ರಂದು ಈ ಸಂಬಂಧ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಿ, ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಬಳಿಕ, ಈ ರೀತಿಯ ನಾಮಕರಣ ಪ್ರಕ್ರಿಯೆಗೆ ಸರಕಾರದ ಅನುಮತಿ ಪಡೆಯಬೇಕೇ ಎಂದು ತಿಳಿದುಕೊಳ್ಳಲು ಪಾಲಿಕೆ ಆಯುಕ್ತರು, ಪಾಲಿಕೆ ಕಾನೂನು ತಜ್ಞರಿಂದ ಅಭಿಪ್ರಾಯ ಕೋರಿ 2017ರ ಅ. 20ರಂದು ಮಾಹಿತಿ ಕಳುಹಿಸಿದ್ದರು. ಅದನ್ನು ಆಧರಿಸಿ ಕಾನೂನು ಸಲಹೆಗಾರರು 2017ರ ನ. 23ರಂದು (ಒಂದು ತಿಂಗಳೊಳಗೆ) ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ವಾಸ್ತವದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದ ಅನಂತರ ಈ ಕಡತವು ಮೂಲೆ ಸೇರಿತ್ತು ಎನ್ನುವುದು ಈಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಕಾನೂನು ತಜ್ಞರು ‘ಪಾಲಿಕೆಯು ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರು ಇಡುವ ವಿಚಾರದಲ್ಲಿ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ’ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ.
ಪ್ರಕ್ರಿಯೆ ಹೇಗೆ ?
‘ಪುರಭವನಕ್ಕೆ ಕುದ್ಮುಲ್ ರಂಗರಾವ್’ ಹೆಸರಿಡುವ ವಿಚಾರವು ಮೊದಲು ಪಾಲಿಕೆಯ ಪಟ್ಟಣ ಮತ್ತು ಅಭಿವೃದ್ಧಿ ಸ್ಥಾಯೀ ಸಮಿತಿಯಲ್ಲಿ ಚರ್ಚೆ ಮಾಡಬೇಕು. ಆ ಬಳಿಕ ಈ ವಿಚಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು, ಆಕ್ಷೇಪಣೆ-ಸಲಹೆ ಆಹ್ವಾನಿಸಲು ಎರಡು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟನೆ ನೀಡಬೇಕು. ಒಂದು ವೇಳೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಆದಾದ ಅನಂತರ ಮತ್ತೆ ಕೌನ್ಸೆಲ್‌ನಲ್ಲಿ ಮಂಡಿಸಿ ಬರಬೇಕು. ಅದುಬಿಟ್ಟು ನೇರವಾಗಿ ಕೌನ್ಸೆಲ್ ನಲ್ಲಿ ವಿಷಯ ಪ್ರಸ್ತಾವಿಸುವುದು ಸರಿಯಲ್ಲ. ಇನ್ನು ಪುರಭವನ ಮಹಾನಗರ ಪಾಲಿಕೆ ಸೊತ್ತು. ಹಾಗಾಗಿ, ಅದಕ್ಕೆ ನಾಮಕರಣ ಮಾಡಲು ಸರಕಾರದ ಅನುಮತಿ ಪಡೆಯಬೇಕಾಗಿಲ್ಲ ಎಂಬುದಾಗಿ ಕಾನೂನು ತಜ್ಞರು ಸಲಹೆ ನೀಡಿದ್ದರು. ಅದಾದ ಬಳಿಕ ಚುನಾವಣೆ ಸೇರಿದಂತೆ ಇನ್ನಿತರ ಕಾರಣಗಳನ್ನಿಟ್ಟು ಪಾಲಿಕೆ ಪುರಭವನಕ್ಕೆ ಕುದ್ಮುಲ್ ರಂಗರಾವ್ ನಾಮಕರಣ ಮಾಡುವ ಪ್ರಸ್ತಾವವನ್ನೇ ಮೂಲೆಗುಂಪು ಮಾಡಲಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ‘ಸುದಿನ’ಕ್ಕೆ ತಿಳಿಸಿದ್ದಾರೆ.
ನಿರ್ಲಕ್ಷ್ಯದಿಂದ ಕೆಲಸ ನಿಧಾನ
‘ಪುರಭವನಕ್ಕೆ ಕುದ್ಮುಲ್ ರಂಗರಾವ್’ ಅವರ ಹೆಸರು ನಾಮಕರಣ ಮಾಡುವಲ್ಲಿ ಪಾಲಿಕೆಯ ನಿರ್ಲಕ್ಷ್ಯತನ, ಉದಾಸೀನತೆ ಎದ್ದು ಕಾಣುತ್ತಿದೆ. ಕೇವಲ 3-4 ತಿಂಗಳಲ್ಲಿ ಆಗಬಹುದಾದ ಕೆಲಸವನ್ನು ಎರಡು ವರ್ಷಗಳ ಕಾಲ ಮುಂದೂಡಿದ್ದಾರೆ. ವಿಪಕ್ಷಗಳು ಈ ಬಗ್ಗೆ ಸದನದಲ್ಲಿ ಅನೇಕ ಬಾರಿ ದನಿ ಎತ್ತಿದ್ದವು.
– ಪ್ರೇಮಾನಂದ ಶೆಟ್ಟಿ, ಮನಪಾ ವಿಪಕ್ಷ ನಾಯಕ
ಬೇಗ ಈ ಪ್ರಕ್ರಿಯೆ ಪೂರ್ಣ
‘ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರು ಇಡುವ ವಿಚಾರವು ಚುನಾವಣೆ ಹಾಗೂ ಇತರೆ ಕೆಲವು ಕಾರಣಗಳಿಂದಾಗಿ ವಿಳಂಬವಾಗಿರುವುದು ನಿಜ. ಆದರೆ, ಕಾನೂನು ಸಲಹೆಗಾರರು, ಕುದ್ಮುಲ್ ರಂಗರಾವ್ ಹೆಸರು ಸೂಚಿಸುವ ವಿಚಾರದಲ್ಲಿ ನೀಡಿರುವ ಅಭಿಪ್ರಾಯ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.
– ಮಹಮ್ಮದ್ ನಝೀರ್, ಪಾಲಿಕೆ ಆಯುಕ್ತ
— ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.