Mangaluru; ಫಲ್ಗುಣಿ ನದಿಯಲ್ಲಿ ಅಪರಿಚಿತ ಶವ ಪತ್ತೆ
Team Udayavani, Jan 6, 2024, 12:49 AM IST
ಮಂಗಳೂರು: ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಂಜಲ್ಪಾದೆಯ ಫಲ್ಗುಣಿ ನದಿಯಲ್ಲಿ ಸುಮಾರು 25ರಿಂದ 32 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಜ. 2ರಂದು ಮಧ್ಯಾಹ್ನ 2.45ರ ಸುಮಾರಿಗೆ ಪತ್ತೆಯಾಗಿದೆ.
ಕಪ್ಪು ಮೈಬಣ್ಣ, ಸಾಧಾರಣ ಶರೀರ, ಸುಮಾರು 5.9 ಅಡಿ ಎತ್ತರ, ಕೋಲು ಮುಖ, ತಲೆಯಲ್ಲಿ ಸುಮಾರು 6ರಿಂದ 10 ಇಂಚು ಕಪ್ಪು ಕೂದಲು, ಕುರುಚಲು ಗಡ್ಡ, ಮೀಸೆ ಹೊದಿದ್ದು ಬಲಗಣ್ಣಿನ ಕೆಳಗೆ ಎಳ್ಳು ಗಾತ್ರದ ಕಪ್ಪು ಮಚ್ಚೆ, ಬಲಗೈ ಮೊಣಕೈ ಮುಂಭಾಗದಲ್ಲಿ ಎಳ್ಳು ಗಾತ್ರದ ಕಪ್ಪು ಮಚ್ಚೆ ಇದೆ. ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ತುಂಬು ತೋಳಿನ ಅಂಗಿ, ಹಸುರು ಬಣ್ಣದ ಒಳ ಉಡುಪು ಧರಿಸಿದ್ದು ಬಲಗಾಲಿನಲ್ಲಿ ಬಿಳಿ ಬಣ್ಣದ ಶೂ ಧರಿಸಿದ್ದಾರೆ.
ಮಾಹಿತಿ ಇದ್ದವರು ಕಾವೂರು ಪೊಲೀಸ್ ಠಾಣೆ (0824-2220533)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.