![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Sep 30, 2024, 7:51 PM IST
ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೋರ್ವರು ಸೆ. 28ರಂದು ಮೃತಪಟ್ಟಿದ್ದಾರೆ.
ನಗರದ ಕೊಂಚಾಡಿಯ ಕಟ್ಟಡವೊಂದರ ಎದುರು ಅನಾರೋಗ್ಯದಿಂದಿದ್ದ ಸುಮಾರು 55 ವರ್ಷ ಪ್ರಾಯದ ಈ ವ್ಯಕ್ತಿಯನ್ನು ಸಾರ್ವಜನಿಕರು ಸೆ.27ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು.
ಸುಮಾರು 5 ಅಡಿ ಎತ್ತರ, ಕೋಲುಮುಖ, ಸುಮಾರು 2 ಇಂಚು ಉದ್ದದ ಕಪ್ಪು ತಲೆ ಕೂದಲು, ಗಡ್ಡ ಮೀಸೆ ಹೊಂದಿದ್ದಾರೆ. ಮುಖದ ಎಡಭಾಗದಲ್ಲಿ ಹಳೆಯ ಗಾಯದ ಗುರುತು ಇದೆ. ಮಾಹಿತಿ ಇದ್ದವರು ಕಾವೂರು ಪೊಲೀಸ್ ಠಾಣೆ 0824-2220533 ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು: ಸೂಚನೆ
ಉಡುಪಿ, ಸೆ. 30: ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಒಳಾಂಗಣದಲ್ಲಿರುವ ಶೆಡ್ಡಿನೊಳಗೆ ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಕೆಲವು ದಿನಗಳ ಹಿಂದೆ ಅವರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಮೃತ ವ್ಯಕ್ತಿಯನ್ನು ಬಾಗಲಕೋಟೆಯ ಕೆಂಚಪ್ಪ (45) ಎಂದು ಗುರುತಿಸಲಾಗಿದೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ವಾರಸುದಾರರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬಹುದು.
ಇಬ್ಬರು ಅನಾಥರು ಸಾವು: ಸೂಚನೆ
ಉಡುಪಿ, ಸೆ.30: ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಕುಶ ಭಂಡಾರಿ (60) ಹಾಗೂ ರಾಘವೇಂದ್ರ (28) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಾರಸುದಾರರು ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ 0820-2520555, 9449827833ವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.