Mangaluru University; ಆಗಸ್ಟ್ 23ರಿಂದ ಪದವಿ ತರಗತಿ ಆರಂಭಕ್ಕೆ ಶತಪ್ರಯತ್ನ
ಮತ್ತಷ್ಟು ಮುಂದೂಡಿಕೆಯಾದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ
Team Udayavani, Aug 21, 2023, 7:15 AM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿರುವ ಪದವಿ ಕಾಲೇಜುಗಳಲ್ಲಿ 2023-24ನೇ ಸಾಲಿನ ತರಗತಿ ಗಳನ್ನು ಆ. 23ರಿಂದ ಆರಂಭಿಸಲು ವಿ.ವಿ.ಯು ಶತಪ್ರಯತ್ನ ನಡೆಸುತ್ತಿದೆ.
ಈಗಾಗಲೇ ನಡೆದಿರುವ ಪದವಿ ಪರೀಕ್ಷೆ ಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ ಯಾದರೂ ಪದವಿ ತರಗತಿಗಳ ಆರಂಭವನ್ನು ಇನ್ನಷ್ಟು ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಆ. 23ರಿಂದ ಪದವಿ ತರಗತಿಗಳ ಆರಂಭಕ್ಕೆ ಸರ್ವ ಸಿದ್ಧತೆ ನಡೆಸುವಂತೆ ವಿ.ವಿ.ಯು ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದೆ.
ಮೊದಲಿಗೆ 2023-24ನೇ ಸಾಲಿನ ಪದವಿ ತರಗತಿಗಳನ್ನು ಆ. 1ರಿಂದ ಆರಂಭಿಸಲು ನಿರ್ಧರಿಸ ಲಾಗಿತ್ತು. ಆದರೆ ಪದವಿ ಪರೀಕ್ಷೆಗಳು ನಡೆಯುವ ಕಾರಣ ಇದನ್ನು ಆ. 17ಕ್ಕೆ ಮುಂದೂಡಲಾಗಿತ್ತು. ಕೊನೆಗೆ ಅದೂ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಆ. 8ರಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಆ. 23ರಿಂದ ಪದವಿ ತರಗತಿ ಆರಂಭದ ಬಗ್ಗೆ ತಿಳಿಸಲಾಗಿತ್ತು.
ಮೌಲ್ಯಮಾಪನ ಸವಾಲು
ಈಗಾಗಲೇ ನಡೆದ ಪದವಿ ಪರೀಕ್ಷೆಯ ಮೌಲ್ಯಮಾಪನ ಸದ್ಯ ಕೊನೆಯ ಹಂತದಲ್ಲಿದೆ. ಕೆಲವು ಉಪನ್ಯಾಸಕರು ಮೌಲ್ಯಮಾಪನದಲ್ಲಿ ತೊಡಗಿಕೊಂಡಿದ್ದು, ಆ. 23ಕ್ಕೆ ಕಾಲೇಜು ಆರಂಭವಾದರೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಕಾಲೇಜು ಆರಂಭದ ಸಂದರ್ಭ ಸಂಬಂಧಪಟ್ಟ ಕಾಲೇಜಿನವರು ಈ ಸವಾಲನ್ನು ಎದುರಿಸಬೇಕಾಗಿದೆ.
ಮಂಗಳೂರು ವಿ.ವಿ. ಕುಲಸಚಿವ ರಾಜು ಚಲ್ಲಣ್ಣವರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಪದವಿ ತರಗತಿಗಳು ಆ. 23ರಿಂದ ಆರಂಭವಾಗಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ಮೌಲ್ಯಮಾಪನ ಬಹುತೇಕ ಮುಕ್ತಾಯ ಹಂತದಲ್ಲಿದೆ. ಆದರೆ ಯುಯುಸಿಎಂಎಸ್ ಸರ್ವರ್ ಸ್ವಲ್ಪ ನಿಧಾನಗತಿಯಲ್ಲಿದ್ದು, ಅಂಕ ಅಪ್‌ಲೋಡ್ ಮಾಡಲು ಕೊಂಚ ಸಮಸ್ಯೆ ಆಗುತ್ತಿದೆ. ಅದರ ಬಗ್ಗೆ ನಿಗಾ ಇರಿಸಲಾಗುವುದು. ತರಗತಿ ಆರಂಭವನ್ನು ಮತ್ತೆ ಮುಂದೂಡುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.
ಮಂಗಳೂರು ವಿ.ವಿ.ವ್ಯಾಪ್ತಿಯಲ್ಲಿ ಆ. 23ರಿಂದ ಪದವಿ ತರಗತಿ ಆರಂಭಿಸಲೇ ಬೇಕಿದೆ. ಒಂದು ವೇಳೆ ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತದೆ. ಹೀಗಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಕ್ಷಿಪ್ರವಾಗಿ ಮೌಲ್ಯಮಾಪನ ಕಾರ್ಯವೂ ನಡೆಯುತ್ತಿದೆ.
-ಪ್ರೊ| ಜಯರಾಜ್ ಅಮೀನ್
ಕುಲಪತಿ (ಪ್ರಭಾರ), ಮಂಗಳೂರು ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.