Mangaluru University; ಆ್ಯತ್ಲೆಟಿಕ್ಸ್, ಖೋ ಖೋ ಕ್ರೀಡಾಪಟುಗಳಿಗೆ ಜರ್ಸಿ ವಿತರಣೆ
ಮಂಗಳೂರು ವಿ.ವಿ.ಯ 102 ಕ್ರೀಡಾಪಟುಗಳ ಪೈಕಿ 82 ಮಂದಿ ಆಳ್ವಾಸ್ ಕಾಲೇಜಿನವರು
Team Udayavani, Dec 24, 2023, 11:22 PM IST
ಮೂಡುಬಿದಿರೆ: ಮಹಿಳೆಯರ ಹಾಗೂ ಪುರುಷರ ಅ. ಭಾ. ಅಂತರ್ ವಿಶ್ವವಿದ್ಯಾನಿಲಯ ಆ್ಯತ್ಲೆಟಿಕ್ಸ್ ಹಾಗೂ ದಕ್ಷಿಣ ವಲಯ ಅಂತರ ವಿ.ವಿ. ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸುವ 102 ಕ್ರೀಡಾಪಟುಗಳಿಗೆ ಆಳ್ವಾಸ್ ಕಾಲೇಜಿನಲ್ಲಿ ಜರ್ಸಿ ವಿತರಿಸಲಾಯಿತು.
ಆ್ಯತ್ಲೆಟಿಕ್ಸ್‌ನಲ್ಲಿ 72 ಮಂದಿಯ ಪೈಕಿ 59 ಹಾಗೂ ಖೋ ಖೋ ಪಂದ್ಯಾಟದ 30 ಮಂದಿಯ ಪೈಕಿ 23 ಸೇರಿದಂತೆ ವಿ.ವಿ.ಯ 102 ಕ್ರೀಡಾಳುಗಳ ಪೈಕಿ 82 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಆಗಿದ್ದಾರೆ. ತಮಿಳುನಾಡಿನಲ್ಲಿ ನಡೆಯಲಿರುವ ಪುರುಷರ ರಾಷ್ಟ್ರೀಯ ಮಟ್ಟದ ಅಂತರ್ ವಿ.ವಿ. ಆ್ಯತ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಳ್ಳಲಿರುವ ಮಂಗಳೂರು ವಿ.ವಿ.ಯ 39 ಸ್ಪರ್ಧಿಗಳಲ್ಲಿ 33 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.
ಒಡಿಶಾದಲ್ಲಿ ನಡೆಯಲಿರುವ ಮಹಿಳೆಯರ ಅ.ಭಾ. ಅಂತರ್ ವಿ.ವಿ. ಆ್ಯತ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಳ್ಳಲಿರುವ ವಿ.ವಿ.ಯ 33 ಮಂದಿಯಲ್ಲಿ 26 ಮಂದಿ ಆಳ್ವಾಸ್‌ನವರು.
ಕೋಯಿಕ್ಕೋಡ್‌ನಲ್ಲಿ ನಡೆಯಲಿರುವ ಪುರುಷರ ದ. ವಲಯ ಅಂತರ್‌ವಿ.ವಿ. ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ಮಂ.ವಿ.ವಿ. ತಂಡದ 15 ಆಟಗಾರರಲ್ಲಿ 12 ಮಂದಿ ಆಳ್ವಾಸ್‌ನವರು.
ತಿರುವನಂತಪುರದಲ್ಲಿ ನಡೆಯಲಿರುವ ಮಹಿಳೆಯರ ದ.ವ. ಅಂತರ್ ವಿ.ವಿ. ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ಮಂಗಳೂರು ವಿ.ವಿ. ತಂಡದ 15 ಆಟಗಾರರಲ್ಲಿ 11 ಮಂದಿ ಆಳ್ವಾಸ್‌ನವರು ಎಂದು ಪ್ರಕಟಿಸಲಾಯಿತು.
ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಜೆರಾಲ್ಡ್ ಸಂತೋಷ ಡಿ’ಸೋಜಾ, ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ| ಪ್ರಸನ್ನ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಜಿ.ಆರ್., ಆ್ಯತ್ಲೆಟಿಕ್ಸ್ ಪುರುಷರ ತಂಡದ ತರಬೇತುದಾರ ಡಾ| ರಾಧಾಕೃಷ್ಣ ಎಚ್., ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಅವಿನ್ ಕುಮಾರ್, ತಿಲಕ್ ಕುಮಾರ್ ಇದ್ದರು.
ಸಾಧನೆಗೈದ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಶುಭ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.