Mangaluru University: ಗಣೇಶ ಹಬ್ಬಕ್ಕೆ ಬಂದ “ವಿಘ್ನ’ ನಿವಾರಣೆ
Team Udayavani, Sep 13, 2023, 12:42 AM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿಯೇ ಗಣೇಶ ಚತುರ್ಥಿ ಆಚರಿಸುವ ಮಹತ್ವದ ತೀರ್ಮಾನವನ್ನು ವಿ.ವಿ. ಕೈಗೊಂಡಿದ್ದು, “ವಿವಾದ’ಕ್ಕೆ ಸದ್ಯ ತೆರೆಬಿದ್ದಿದೆ.
ಕುಲಪತಿ ಪ್ರೊ| ಜಯರಾಜ್ ಅಮೀನ್ “ಉದಯವಾಣಿ’ಗೆ ಪ್ರತಿಕ್ರಿ ಯಿಸಿ, ವಿ.ವಿ. ಆವರಣದಲ್ಲಿ ಗಣೇಶ ಚತುರ್ಥಿ ಆಚರಣೆಗೆ ನಮ್ಮ ವಿರೋಧ ಇರಲಿಲ್ಲ. ಪ್ರತೀ ವರ್ಷದಂತೆ ಮಂಗಳಾ ಸಭಾಂಗಣದಲ್ಲಿಯೇ ಈ ಬಾರಿಯೂ ಆಯೋಜಿಸಲಿದ್ದೇವೆ. ವಿ.ವಿ.ಯ ಹೊರಗಿನ ಭಕ್ತರೂ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದರು.
ಏನಿದು ವಿವಾದ?: ಈ ಹಿಂದೆ ವಿ.ವಿ.ಯ ಹಾಸ್ಟೆಲ್‌ನಲ್ಲಿ ಆಚರಿಸ ಲಾಗುತ್ತಿದ್ದ ಚೌತಿ ಹಬ್ಬವನ್ನು ಕೊರೊನಾ ಬಳಿಕ 2 ವರ್ಷಗಳಿಂದ ಮಂಗಳಾ ಸಭಾಂಗಣದಲ್ಲಿ ಆಚರಿಸ ಲಾಗುತ್ತಿದೆ. ಇದರ ವೆಚ್ಚವನ್ನು ವಿ.ವಿ. ಭರಿಸಿರುವುದಕ್ಕೆ ಲೆಕ್ಕಪತ್ರ ಪರಿಶೋಧನೆಯಲ್ಲಿ ಸರಕಾರದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಮಂಗಳಾ ಸಭಾಂಗಣದಲ್ಲಿ ಆಚರಣೆ ಕುರಿತಂತೆ ಸೂಕ್ತ ನಿರ್ದೇಶನ ಕೋರಿ ಕುಲಪತಿಯವರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಆ ಪತ್ರ ವೈರಲ್ ಆಗಿದ್ದರಿಂದ ಗಣೇಶ ಚತುರ್ಥಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಪರ-ವಿರೋಧ ಚರ್ಚೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.