ಮಂಗಳೂರು ವಿ.ವಿ. ಕಾಲೇಜುಗಳಲ್ಲಿ ಗಡಿಬಿಡಿ!


Team Udayavani, Apr 15, 2022, 6:55 AM IST

Untitled-1

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ಪದವಿ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್‌ ಪರೀಕ್ಷೆ ಎ. 18ರಂದು ಆರಂಭವಾಗಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕೊನೆಯ ಹಂತದಲ್ಲಿ ಗಡಿಬಿಡಿ ಆರಂಭವಾಗಿದೆ.

ಎನ್‌ಇಪಿ ಸೆಮಿಸ್ಟರ್‌ ಪರೀಕ್ಷೆ ಇದೇ ಮೊದಲ ಬಾರಿಗೆ ನಡೆಯುವುದರಿಂದ ಯುಯುಸಿಎಂಎಸ್‌ ಸಾಫ್ಟ್ವೇರ್‌ನ ಸರ್ವರ್‌ ಸಮಸ್ಯೆ, ವಿದ್ಯಾರ್ಥಿಗಳ ದಾಖಲೆಗಳು ಅಪ್‌ಲೋಡ್‌ ಆಗದಿರುವುದು, ಪರೀಕ್ಷಾ ಶುಲ್ಕ ಪಾವತಿಯಲ್ಲಿ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಒತ್ತಡ ಸೃಷ್ಟಿಯಾಗಿದೆ. ಪರೀಕ್ಷೆ ಎದುರಿಸಲು ಕೊನೆಯ ಹಂತದಲ್ಲಿ ತಯಾರಿ ಮಾಡಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಕೈಕೊಟ್ಟ ಸರ್ವರ್‌! :

ಈ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಿದಾಗಲೇ ಕಾಲೇಜಿನಿಂದ “ಪ್ರವೇಶ ಪತ್ರ’ ಸಿಗುತ್ತಿತ್ತು. ಎನ್‌ಇಪಿ ಜಾರಿಯ ಬಳಿಕ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ಬಳಿಕ ಕಾಲೇಜಿನವರು ಆತನ ಹಾಜರಾತಿ ದೃಢೀಕರಣ ಹಾಗೂ ಆಂತರಿಕ ಅಂಕಗಳನ್ನು ಯುಯುಸಿಎಂಎಸ್‌ ಸಾಫ್ಟ್ವೇರ್‌ಗೆ ಅಪ್‌ಲೋಡ್‌ ಮಾಡಬೇಕಿದ್ದು ಬಳಿಕ “ಪ್ರವೇಶ ಪತ್ರ’ ಲಭಿಸುತ್ತದೆ. ಪರೀಕ್ಷಾ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಎಲ್ಲ ವಿ.ವಿ./ಕಾಲೇಜುಗಳಲ್ಲಿಯೂ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸರ್ವರ್‌ ಸಮಸ್ಯೆ ತಲೆದೋರುತ್ತಿದೆ. ಕೆಲವು ವಿದ್ಯಾರ್ಥಿಗಳ ದಾಖಲೆ ಅಪ್‌ಲೋಡ್‌ ಇನ್ನೂ ಆಗಿಲ್ಲ. ಅದಾಗದೆ ಪ್ರವೇಶ ಪತ್ರ ಸಿಗುವುದು ಕಷ್ಟ.

ಸಾಮಾನ್ಯವಾಗಿ ಮೊದಲ ಸೆಮಿಸ್ಟರ್‌ ಪರೀಕ್ಷೆ ನವೆಂಬರ್‌ನಲ್ಲಿ ನಡೆಯುತ್ತದೆ. ಆದರೆ ಕೊರೊನಾ ಸಂದರ್ಭ ಪರೀಕ್ಷೆ ವೇಳಾಪಟ್ಟಿಯಲ್ಲಿ ಆದ ಬದಲಾವಣೆಯ ಪರಿಣಾಮ ಈ ಪರೀಕ್ಷೆಯ ಮೇಲೂ ಆಗಿದೆ. ಕೆಲವೇ ದಿನಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಫಲಿತಾಂಶ ಬಂದು ಅವರು ಪದವಿ ಸೇರ್ಪಡೆಗೆ ಬರುವುದರಿಂದ ಶೀಘ್ರದಲ್ಲಿ ಮತ್ತೂಂದು ಒತ್ತಡ ಸೃಷ್ಟಿಯಾಗಲಿದೆ.

ಆನ್‌ಲೈನ್‌ ಮೂಲಕ ಪಾವತಿಗೆ ವಿನಾಯಿತಿ? :

ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಒಟ್ಟು 31,358 ವಿದ್ಯಾರ್ಥಿಗಳು ಎನ್‌ಇಪಿ ಮೊದಲ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಆರಂಭಕ್ಕೆ ಕೆಲವು  ಹಿಂದೆಯಷ್ಟೇ ವಿದ್ಯಾರ್ಥಿಗಳ ದಾಖಲಾತಿ ಸಲ್ಲಿಕೆ, ಪದವಿ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಸರಣಿ ರಜೆ ಇತ್ಯಾದಿಗಳಿಂದಾಗಿ ಕೊನೆಯ ಹಂತದಲ್ಲಿ ಕಾಲೇಜುಗಳಲ್ಲಿ ಗಡಿಬಿಡಿ ಆರಂಭವಾಗಿದೆ. ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ನೀಡಬೇಕೆಂಬ ನಿಯಮದಿಂದಾಗಿ ಸಮಸ್ಯೆಯಾಗುತ್ತಿರುವುದನ್ನು ಮನಗಂಡ ಮಂಗಳೂರು ವಿ.ವಿ. ಈ ಬಾರಿ ಹಿಂದಿನಂತೆಯೇ ಪರೀಕ್ಷಾ ಶುಲ್ಕವನ್ನು ಪಡೆದು ಬಳಿಕ ಆನ್‌ಲೈನ್‌ ಅಪ್‌ಡೇಟ್‌ ಮಾಡಿಸುವ ಕುರಿತಂತೆಯೂ ಚಿಂತನೆ ನಡೆಸುತ್ತಿದೆ. ಈ ಮೂಲಕ ಯಾವುದೇ ವಿದ್ಯಾರ್ಥಿಗೂ ಪರೀಕ್ಷೆ ಬರೆಯಲು ಸಮಸ್ಯೆಯಾಗದಂತೆ ವಿ.ವಿ. ಕ್ರಮ ಕ್ರಗೊಳ್ಳಲಿದೆ.

ಈಗಾಗಲೇ ಪದವಿ ಕಾಲೇಜಿನ ಪರೀಕ್ಷೆ ನಡೆಯುತ್ತಿದೆ. ಈ ಮಧ್ಯೆ ಎನ್‌ಇಪಿಯ ಮೊದಲ ಸೆಮಿಸ್ಟರ್‌ ಪರೀಕ್ಷೆಗೆ ಸರ್ವ ಸಿದ್ಧತೆ ನಡೆಸಲಾಗಿದೆ. ಸರ್ವರ್‌ ಸಮಸ್ಯೆಯಿಂದ ಕೊನೆಯ ಹಂತದಲ್ಲಿ ಒತ್ತಡ ಎದುರಾಗಿದ್ದರೂ  ಎಲ್ಲ ಕಾಲೇಜಿನಲ್ಲಿಯೂ ಸೂಕ್ತವಾಗಿ ಸ್ಪಂದಿಸಿ ಸಾಂಗವಾಗಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.ಪ್ರೊ| ಪಿ.ಎಲ್‌. ಧರ್ಮ, ಕುಲಸಚಿವರು (ಪರೀಕ್ಷಾಂಗ), ಮಂಗಳೂರು ವಿ.ವಿ. 

 

-ದಿನೇಶ್‌ ಇರಾ

Udayavani Tags

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.