ತೆಂಕುತಿಟ್ಟು ಯಕ್ಷಗಾನ ಕಲಾವಿದ ಶಂಭು ಕುಮಾರ್ ಆತ್ಮಹತ್ಯೆ
Team Udayavani, Aug 18, 2022, 6:20 PM IST
ಕಿನ್ನಿಗೋಳಿ: ಕಟೀಲು ಮೇಳದ ಕಲಾವಿದ ಕೊಡೆತ್ತೂರು ಶಂಭು ಕುಮಾರ್(46) ಉಲ್ಲಂಜೆಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆ. 18 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಂಭು ಕುಮಾರ್ ಅವರು ತನ್ನ ಶಾಲಾ ಜೀವನದಲ್ಲಿಯೇ ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿಕೊಂಡು ಹದಿನಾರನೆಯ ವಯಸ್ಸಿನಿಂದಲೇ ಮುಂಡ್ಕೂರು, ತಲಕಲ, ಮಂಗಳಾದೇವಿ, ಎಡನೀರು, ಪುತ್ತೂರು, ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಳೆದ ಏಳು ವರುಷಗಳಿಂದ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ , ಪುತ್ರ , ಪುತ್ರಿ, ತಂದೆ , ತಾಯಿಯನ್ನು ಕಳಕೊಂಡಿದ್ದಾರೆ.
ಮಧು ಕೈಟಭ, ರಕ್ತಬೀಜ, ಅರುಣಾಸುರ, ದೇವೇಂದ್ರ, ಅರ್ಜುನ, ಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ತುಳು ಯಕ್ಷಗಾನದಲ್ಲಿಯೂ, ಹಲವಾರು ಸಂಘ ಸಂಸ್ಥೆಯಲ್ಲಿ ಅವರ ಸಹಪಾಟಿ ದಿ. ಅಶೋಕ್ ಕೊಲೆಕಾಡಿ ಅವರ ಜೆತೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ನಡೆಸಿದ್ದು ಪ್ರಸ್ತುತ ಕಿನ್ನಿಗೋಳಿಯ ಯಕ್ಷಕೌಸ್ತುಭ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ಕಲಿಸುತ್ತಿದ್ದರು.
ಹೊಯಿಗೆಗುಡ್ಡೆ ದೇವಸ್ಥಾನದ ಹೆಸರಿನಲ್ಲಿ ಮೂರು ಚಿಕ್ಕಮೇಳಗಳನ್ನೂ ನಡೆಸುತ್ತಿದ್ದ ಅವರು ಯಕ್ಷಗಾನ ಧ್ವನಿಸುರುಳಿಗಳನ್ನೂ ಮಾಡಿದ್ದರು.. ಇವರ ಸಹೋದರ ಗಣೇಶ ಚಂದ್ರಮಂಡಲ ಕೂಡ ಯಕ್ಷಗಾನ ಕಲಾವಿದರಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.