Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Team Udayavani, Nov 5, 2024, 7:45 PM IST
ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಒಡಿಶಾದಿಂದ ಪ್ರಾಣಿಗಳು ಆಗಮಿಸಿವೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಪ್ರಾಣಿಗಳನ್ನು ಪಿಲಿಕುಳಕ್ಕೆ ತರಲಾಗಿದೆ.
ವಿನಿಮಯದಲ್ಲಿ ಪಿಲಿಕುಳದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಳ ಮೃಗಾಲಯದಲ್ಲೇ ಜನಿಸಿದವುಗಳಾಗಿದೆ.
ಆರು ವರ್ಷದ “ಏಷ್ಯಾಟಿಕ್ ಗಂಡು ಸಿಂಹ’, “ತೋಳ’, ಎರಡು “ಘರಿಯಲ್ ಮೊಸಳೆ’ ಮತ್ತು ಅಪರೂಪದ ಪಕ್ಷಿಗಳಾದ ಎರಡು “ಸಿಲ್ವರ್ ಫೆಸೆಂಟ್’ ಎರಡು “ಯೆಲ್ಲೋ ಗೋಲ್ಡನ್ ಫೆಸೆಂಟ್’ಗಳು ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಪಿಲಿಕುಳ ಮೃಗಾಲಯಕ್ಕೆ ತರಲಾಗಿದೆ.
ಪಿಲಿಕುಳದಿಂದ ನಾಲ್ಕು “ಕಾಡು ನಾಯಿ/ ಧೋಲ್’, ಅಪರೂಪದ ನಾಲ್ಕು “ರೇಟಿಕುಲೆಟೆಡ್ ಹೆಬ್ಟಾವು’, ಎರಡು “ಬ್ರಾಹಿಣಿ ಗಿಡುಗಗಳು’, ಮೂರು “ಏಶಿಯನ ಪಾಮ್ ಸಿವೇಟ’, ಎರಡು “ಲಾರ್ಜ್ ಇಗರೇಟ್‌ಗಳನ್ನು’ ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುವುದು.
ಮೃಗಾಲಯದಲ್ಲಿ ಜತೆಯಿಲ್ಲದ ಪ್ರಾಣಿಗಳಿಗೆ ಜತೆಗಾಗಿ ಮತ್ತು ಶುದ್ಧ ರಕ್ತ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಪಿಲಿಕುಳದಲ್ಲಿ ಮೂರು ಸಿಂಹಗಳಿದ್ದು, ಜತೆಗಾರನಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತೀ ಕಡಿಮೆ ಇರುವುದರಿಂದ ದೂರದ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.
ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಎರಡು ಪಶು ವೈದ್ಯಾಧಿಕಾರಿ ಮತ್ತು ಎಂಟು ಪ್ರಾಣಿ ಪರಿಪಾಲಕರು, ಪ್ರಾಣಿಗಳೊಡನೆ ಅವುಗಳ ಆರೈಕೆ ನೋಡಿಕೊಂಡು ಆಗಮಿಸಿದ್ದರು. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ ಇರಿಸಿ ಆನಂತರ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.