Kukke Subrahmanya, ಕೊಲ್ಲೂರಿನಲ್ಲಿ 11 ಜೋಡಿಗೆ ಮಾಂಗಲ್ಯ ಭಾಗ್ಯ
Team Udayavani, Feb 1, 2024, 2:13 AM IST
ಸುಬ್ರಹ್ಮಣ್ಯ/ ಕೊಲ್ಲೂರು: ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ಸರಳ ಸಾಮೂಹಿಕ ವಿವಾಹ “ಮಾಂಗಲ್ಯ ಭಾಗ್ಯ’ ನಡೆಯಿತು.
ಪೂರ್ವಾಹ್ನ 11.20ರಿಂದ 12.20ರ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಿತು. ಕುಕ್ಕೆಯ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಒಟ್ಟು 6 ಜೋಡಿಗಳು ಮತ್ತು ಕೊಲ್ಲೂರಿನಲ್ಲಿ 5 ಜೋಡಿಗಳು ಸಪ್ತಪದಿ ತುಳಿದರು. ಸುಬ್ರಹ್ಮಣ್ಯದಲ್ಲಿ ದೇಗುಲದ ಪುರೋಹಿತ ಮಧುಸೂದನ ಕಲ್ಲೂರಾಯ ಮತ್ತು ಕೊಲ್ಲೂರಿನಲ್ಲಿ ದೇಗುಲದ ಪುರೋಹಿತ ಗಜಾನನ ಜೋಯಿಸ್ ಧಾರ್ಮಿಕ ವಿಧಿ ನೆರವೇರಿಸಿದರು.
ಸುಬ್ರಹ್ಮಣ್ಯದಲ್ಲಿ
ಜಟ್ಟಿಪಳ್ಳದ ಪ್ರಮೋದ್-ಬಾಳುಗೋಡಿನ ವಿದ್ಯಾ ಪಿ., ಸುಬ್ರಹ್ಮಣ್ಯದ ನೂಚಿಲದ ಲೋಕೇಶ್ ಎನ್.-ಗೋಳಿತೊಟ್ಟಿನ ಸುಮಲತಾ ಎಸ್.ವಿ., ಸೋಣಂಗೇರಿಯ ಲೋಕೇಶ್-ದೊಡ್ಡತೋಟದ ನವ್ಯಾ ಎಂ., ಉಬರಡ್ಕ ಕುತ್ತುಮೊಟ್ಟೆಯ ಜಯಂತ- ಬೆಟ್ಟಂಪಾಡಿ ಗುಂಡಿಯಡ್ಕದ ಸರಸ್ವತಿ, ಮರಟಗೆರೆ ರೂಪನಗರದ ವಿನಯ ಎಸ್. ನಾಯಕ್-ಹೊಸಪೇಟೆ ಕಲ್ಲಹಳ್ಳಿಯ ಪೆರಿ ಬಾಯಿ, ಬಳ್ಪ ಎಣ್ಣೆಮಜಲಿನ ದಿವಾಕರ ಎ.-ನಾಲ್ಕೂರು ಗ್ರಾಮದ ಚತ್ರಪ್ಪಾಡಿಯ ವಿದ್ಯಾ ಸಿ.ಎಲ್. ಹಸೆಮಣೆಯೇರಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿ ಕಾರಿ ರಾಜಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಲೂರಿನಲ್ಲಿ
ಕಂಬದಕೋಣೆಯ ಸುಬ್ರಹ್ಮಣ್ಯ ಪೂಜಾರಿ – ಆಲೂರಿನ ಅಶ್ವಿನಿ, ಹೆಂಗವಳ್ಳಿಯ ಅಜಿತ್ – ಹೊಂಬಾಡಿ ಮಂಡಾಡಿಯ ಮೂಕಾಂಬು, ಹೊಂಬಾಡಿ ಮಂಡಾಡಿಯ ವಿಟ್ಠಲ – ಹೆಂಗವಳ್ಳಿಯ ಅನಿತಾ, ಹಳ್ಳಿಹೊಳೆಯ ದೇವರಬಾಳು ನಿವಾಸಿ ಅನಿಲ್ – ಹಳ್ಳಿಹೊಳೆಯ ವಸಂತಿ, ಹಕ್ಲಾಡಿಯ ಚಂದ್ರಶೇಖರ – ಕುಂದಾಪುರದ ಜಲಜಾ ಹಸೆಮಣೆಯೇರಿದರು.
ದೇಗುಲದ ಸಿಇಒ ಪ್ರಶಾಂತ ಕುಮಾರ್ ಶೆಟ್ಟಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಉಪ ಕಾರ್ಯನಿರ್ವಹಣಾಧಿ ಕಾರಿ ಪುಷ್ಪಲತಾ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷೆ ವನಿತಾ ಸೇರುಗಾರ್, ಬೈಂದೂರು ತಹಶೀಲ್ದಾರ್ ನಾಗರಾಜ್, ಮೊದಲಾದವರು ಉಪಸ್ಥಿತರಿದ್ದರು.
ವಧುವಿಗೆ 10 ಸಾವಿರ ರೂ., ವರನಿಗೆ 5 ಸಾವಿರ ರೂ., ವಧುವಿಗೆ ತಾಳಿಗುಂಡು, ಸಹಿತ ವಧೂವರರಿಗೆ ಸೀರೆ ಪಂಚೆ ಮುಂತಾದವುಗಳನ್ನು ದೇಗುಲದ ವತಿಯಿಂದ ಪ್ರಸಾದ ರೂಪದಲ್ಲಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.