ಕದ್ರಿ ಪಾರ್ಕ್‌ನಲ್ಲೀಗ ಹಣ್ಣುಗಳ ರಾಜ ಮಾವಿನ ಸಾಮ್ರಾಜ್ಯ

ವೈವಿಧ್ಯಮಯ ತಳಿಯ ಮಾವುಗಳ ಪ್ರದರ್ಶನ, ಮಾರಾಟ

Team Udayavani, May 26, 2019, 6:00 AM IST

2505MLR7-MAVU

ಮಹಾನಗರ: ಮಲ್ಗೋವಾ, ದಶಹರಿ, ಸಕ್ಕರೆಗುತ್ತಿ, ಪೈರಿ, ಮುಂಡಾ, ಬೇಗನ್‌ಪಲ್ಲಿ, ಸಿಂಧೂರ, ಶುಗರ್‌ ಬೇಬಿ, ಕೇಸರ್‌, ಆಪೂಸ್‌, ಹಿಮಾ ಯತ್‌, ಮಲ್ಲಿಕಾ, ರಸಪೂರಿ, ಬಾದಾಮಿ, ಸೇಂದೂರು, ಸೋತಾಪುರಿ, ಸುವರ್ಣ ರೇಖ ಸೇರಿದಂತೆ 10ರಿಂದ 15ಕ್ಕೂ ಅಧಿಕ ವೈವಿಧ್ಯಮಯ ತಳಿಯ ಮಾವುಗಳು ಕದ್ರಿ ಪಾರ್ಕ್‌ನಲ್ಲಿ ಕಣ್ಮಣ ಸೆಳೆಯುತ್ತಿದೆ.

ದ.ಕ. ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಸಹಯೋಗದಲ್ಲಿ ಬೆಳೆಗಾರರಿಂದ ಬಳಕೆದಾರರಿಗೆ ನೇರ ಮಾವು ಮಾರಾಟ ಮೇ 24ರಿಂದ 26ರ ತನಕ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.

ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವುಗಳು ಸಿಗುತ್ತವೆ. ಖರೀದಿಸಲು ಹೋದರೆ ಎಲ್ಲವೂ ರಾಸಾಯನಿಕ ಮುಕ್ತವೇ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಮಾವು ಮಾರಾಟದಲ್ಲಿ ಕೇವಲ ನೈಸರ್ಗಿಕವಾಗಿ ಮಾಗಿಸಿದ ಮಾವುಗಳು 18 ಸ್ಟಾಲ್ಗಳಲ್ಲಿ ಕಾಣಸಿಗುತ್ತವೆ. ರಾಜ್ಯದಲ್ಲಿ ಬೆಳೆಯುವ ಸುಮಾರು 15ಕ್ಕೂ ಹೆಚ್ಚು ಪ್ರಮುಖ ಮಾವಿನ ತಳಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ರಾಮನಗರ, ಶ್ರೀನಿವಾಸಪುರ, ಕೋಲಾರ, ಕನಕಪುರ ಮೊದಲಾದ ಕಡೆಯಿಂದ ಮಾವು ಬೆಳೆಗಾರರು ಆಗಮಿಸಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಧ್ಯವರ್ತಿ ಹಾವಳಿ ತಪ್ಪಿಸಲು ಮೇಳ
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ಹಾಗೂ ನೈಸಗಿಕವಾಗಿ ಮಾಗಿಸಿದ ಮಾವುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಾವು ಮೇಳ ಗಳನ್ನು ಆಯೋಜಿಸಲಾಗುತ್ತಿದೆ.

ಮೇಳಗಳಲ್ಲಿ ನೈಸರ್ಗಿಕವಾಗಿ ಮಾಗಿಸಿದ ಮಾವು ಮಾರಾಟ ಮಾಡುತ್ತಿದ್ದೇವೆ. ಈ ಹಣ್ಣುಗಳು ಎಂಟು ದಿನಗಳ ಕಾಲ ಇಟ್ಟರೂ ಕೆಡುವುದಿಲ್ಲ. ಎರಡು ಎಕರೆಯಲ್ಲಿ 80 ಗಿಡಗಳನ್ನು ನೆಟ್ಟಿದ್ದೇವೆ. ವರ್ಷಕ್ಕೆ 10 ಟನ್‌ ಮಾವಿನ ಹಣ್ಣು ದೊರೆಯುತ್ತದೆ ಎಂದು ರಾಮನಗರ ಜಿಲ್ಲೆಯ ಕಾನ್‌ಪುರ ತಾಲೂಕಿನ ಬಿ.ಎಸ್‌.ದೊಡ್ಡಿ ಗ್ರಾಮದ ಚೆನ್ನಗಿರಿಗೌಡ ಹೇಳುತ್ತಾರೆ.

ಮಾವಿನ ಬೆಲೆ
ಆಲೊ#àನ್ಸ್‌ (100 ರೂ.), ಮಲ್ಲಿಕಾ (90 ರೂ.), ರಸಪೂರಿ (70 ರೂ.), ಮಲ್ಗೊàವಾ (120 ರೂ.), ದಸೇರಿ (120 ರೂ.), ಸೆಂದೂರ (50 ರೂ.), ತೋತಾಪುರಿ (30- 40 ರೂ.), ಬೇಗನ್‌ಪಲ್ಲಿ (70 ರೂ.), ಶುಗರ್‌ ಬೇಬಿ (120 ರೂ.) ಸೇರಿದಂತೆ ಹಿಮಾಯತ್‌ (120).

ಪ್ರಚಾರದ ಕೊರತೆಯಿಂದ ಜನ ಕಡಿಮೆ
ನೀತಿ ಸಂಹಿತೆ ಹಾಗೂ ಚುನಾವಣೆ ಕೆಲಸಗಳಲ್ಲಿ ಅಧಿಕಾರಿಗಳು ಹೆಚ್ಚು ಸಕೀÅಯರಾಗಿದ್ದರಿಂದ ಮಾವಿನ ಮೇಳದ ಉದ್ಘಾಟನೆ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಪ್ರಚಾರ ನೀಡದೆ ಇದ್ದುದರಿಂದ ಜನರಿಗೆ ಮಾವು ಮೇಳದ ಬಗ್ಗೆ ಮಾಹಿತಿ ಇರಲಿಲ್ಲ. ಈ ಕಾರಣದಿಂದ ಮೊದಲ ದಿನ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.

ಮಾವು ಮಾರಾಟಗಾರರಿಗೆ
ವಾಸ್ತವ್ಯ ಸಮಸ್ಯೆ
ರಾಮನಗರದಿಂದ ಮಾವು ಮಾರಾಟಕ್ಕಾಗಿ ನಗರಕ್ಕೆ ಆಗಮಿಸಿದ ಮಾರಾಟಗಾರರಿಗೆ ವಾಸ್ಯವ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ತೋಟಗಾರಿಕಾ ಇಲಾಖೆ ನಿರಾಸಕ್ತಿ ವಹಿಸಿದೆ. ಆ ಹಿನ್ನೆಲೆಯಲ್ಲಿ ಮಾವು ಮಾರಾಟಗಾರರು ಕದ್ರಿ ಪಾರ್ಕ್‌ನ ಮಾವು ಮಾರಾಟ ಮಾಡುವ ಸ್ಥಳದಲ್ಲೇ ಮಲಗಿದ್ದಾರೆ. ಶುಕ್ರವಾರ ರಾತ್ರಿ ಸುರಿದ ಮಳೆಗೂ ಮಾರಾಟಗಾರರು ಇಲ್ಲೇ ಮಲಗಿದ್ದರು.ಇವರೊಂದಿಗೆ ಆರು ಮಂದಿ ಮಹಿಳೆಯರು ಇದ್ದೂ ಸಮಸ್ಯೆ ಎದುರಿಸುವಂತಾಗಿದೆ.ಚುನಾವಣೆ ಹಿನ್ನೆಲೆಯಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾವು ಮಾರಾಟಗಾರರಿಗೆ ತಿಳಿಸಿದ್ದಾರೆ.

 ಗ್ರಾಹಕರಿಂದ ಉತ್ತಮ ಸ್ಪಂದನೆ
ಪ್ರಚಾರದ ಕೊರತೆಯಿಂದ ಮೊದಲ ದಿನ ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೂ ಎರಡನೇ ದಿನ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಲಾಲ್‌ಬಾಗ್‌, ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಮಾವು ಮೇಳ ನಡೆದಿದೆ. ಅಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ ಬಾರಿ ಮಂಗಳೂರಿನಲ್ಲೂ ಆಯೋಜಿಸಿದ್ದೇವು.
 - ಮಂಜು,
ರಾಮನಗರ ಮಾವು ಬೆಳೆಗಾರರ ಸಂಘದ ಉಪಾಧ್ಯಕ್ಷ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.