ರಸ್ತೆ ಮಧ್ಯೆ ಮ್ಯಾನ್ ಹೋಲ್ ಕಾಮಗಾರಿ
Team Udayavani, Jun 28, 2018, 3:00 AM IST
ಮಹಾನಗರ: ಬಂಟ್ಸ್ ಹಾಸ್ಟೆಲ್ನಿಂದ ಕದ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂರು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಒಳಚರಂಡಿ ಮ್ಯಾನ್ ಹೋಲ್ ತೆರೆದಿಟ್ಟು ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಪ್ರದೇಶದ ಅಭಿಮಾನ್ ರೆಸಿಡೆನ್ಸಿ ಪಕ್ಕದಲ್ಲಿ ಇರುವಂತಹ ಮ್ಯಾನ್ ಹೋಲ್ ಒಂದರಲ್ಲಿ ಕಳೆದ ತಿಂಗಳು ಕಬ್ಬಿಣ ತುಂಡು ಸೇರಿಕೊಂಡಿತ್ತು. ಇದೇ ಕಾರಣಕ್ಕೆಂದು ಮಹಾನಗರ ಪಾಲಿಕೆ ಈ ಮ್ಯಾನ್ ಹೋಲ್ ಕಾಮಗಾರಿ ನಡೆಸಿ ಕೆಲಸ ಪೂರ್ಣಗೊಳಿಸುತ್ತು. ಈಗ ಪುನಃ ಇದೇ ರಸ್ತೆಯ ಮೂರು ಕಡೆಗಳಲ್ಲಿ ಮ್ಯಾನ್ ಹೋಲ್ ತೆರೆದಿಟ್ಟು ಕಾಮಗಾರಿ ಆರಂಭಿಸಲಾಗಿದೆ.
ಬ್ಲಾಕ್ ತೆರವು ಕಾಮಗಾರಿ
ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ವಿನಯ್ರಾಜ್ ಪ್ರತಿಕ್ರಿಯಿಸಿ, ಬಂಟ್ಸ್ ಹಾಸ್ಟೆಲ್ ಬಳಿಯ ಕೆಲವು ಮ್ಯಾನ್ ಹೋಲ್ ಗಳು ಬ್ಲಾಕ್ ಆಗಿ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಈ ಕಾರಣದಿಂದ ಮಳೆ ಬಂದಾಗ ಮ್ಯಾನ್ ಹೋಲ್ ನಿಂದ ನೀರು ರಸ್ತೆಗೆ ಬರುತ್ತದೆ. ಅಲ್ಲದೆ, ಪಕ್ಕದಲ್ಲಿಯೇ ಕೆಲವು ಹೊಟೇಲ್ಗಳಿದ್ದು, ಎಣ್ಣೆ ಮಿಶ್ರಿತ ನೀರು ಒಳಚರಂಡಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಪೈಪ್ ಗಾತ್ರ ಕಿರಿದಾಗಿದೆ. ಈ ಕಾರಣಕ್ಕೆ ಮ್ಯಾನ್ ಹೋಲ್ ಬ್ಲಾಕ್ ಆಗಿದೆ. ನೀರು ಸರಾಗವಾಗಿ ಹೋಗುತ್ತಿಲ್ಲ. ಆದ್ದರಿಂದ ಕಾಮಗಾರಿ ಪ್ರಾರಂಭಿಸಿದ್ದೇವೆ ಎಂದಿದ್ದಾರೆ. ಬಂಟ್ಸ್ ಹಾಸ್ಟೆಲ್ನಿಂದ ಕದ್ರಿ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಮಧ್ಯೆ ನಡೆಯುವ ಕಾಮಗಾರಿಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಸಧ್ಯ ಮಳೆ ಬರುವ ಕಾರಣದಿಂದಾಗಿ ಮ್ಯಾನ್ ಹೋಲ್ ಕಾಮಗಾರಿ ಕೂಡ ನಿಧಾನಗತಿಯಲ್ಲಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.