6 ಸಾವು ಸಂಭವಿಸಿದರೂ ಎಚ್ಚೆತ್ತಿಲ್ಲ ಪ್ರಾಧಿಕಾರ
ಅಪಾಯಕಾರಿಯಾಗುತ್ತಿದೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ
Team Udayavani, Dec 20, 2019, 5:27 AM IST
ಅರಂತೋಡು: ಅರಂತೋಡು ಸಮೀಪದ ಆರ್ತೋಟಿ ಎಂಬಲ್ಲಿಯ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಅಘಾತ ವಲಯವಿದ್ದು, 2 ಸಾವು ಹಾಗೂ ಪಕ್ಕದ ಕಡೆಪಾಲ ಸಮೀಪ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾಗಿದ್ದರೂ ಹೆದ್ದಾರಿ ಪ್ರಾಧಿಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಅಪಘಾತ ತಡೆಯುವುವಂತೆ ತಾತ್ಕಾಲಿಕ ಕ್ರಮವನ್ನು ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಪಕ್ಕದ ಮನೆಮಂದಿ ನಿದ್ದೆಯಲ್ಲೂ ಭಯದ ಭೀತಿ ಪಡುವಂತಾಗಿದೆ. ಅರಂತೋಡು ಪೇಟೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಯು.ಪಿ. ಭಾಸ್ಕರ ಅವರ ಮನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪಕ್ಕ ಇದೆ. ಇಲ್ಲಿ ರಸ್ತೆ ವಿಸ್ತರಣೆ ಸಂದರ್ಭ ಈ ದೊಡ್ಡ ತಿರುವನ್ನು ನೇರಗೊಳಿಸದ ಪರಿಣಾಮ ಇಂದು ಇಲ್ಲಿ ಅಪಘಾತಗಳು ಹೆಚ್ಚುತ್ತಿವೆ.
ಗೇಟು ಹಾಕುವುದನ್ನೇ ಬಿಟ್ಟರು!
ರಸ್ತೆ ವಿಸ್ತರಣೆಯ ಮೊದಲು ಇಲ್ಲಿ ಅಪ ಘಾತಗಳು ನಡೆದಿರುವುದು ಬಹಳ ಕಡಿಮೆ. ಇಲ್ಲಿ ಅಪ ಘಾತ ಸಂಭವಿಸಿ ಎರಡು ಸಾವು ಸಂಭವಿಸಿದೆ. ಅನೇಕರು ಗಾಯಗೊಂಡು ಅಪಾಯದಿಂದ ಪಾರಾಗಿ ದ್ದಾರೆ. ವಾಹನಗಳು ಅಪಘಾತಗೀಡಾಗಿದ್ದಾಗ ಪಕ್ಕದ ಮನೆಯ ಮೇಲ್ಛಾ ವಣಿಯತ್ತ ವಾಹನ ಗಳು ನುಗ್ಗಿ ಬಂದಿದೆ. ವಾಹನಗಳು ಗುದ್ದಿ ರಸ್ತೆ ಬದಿ ಹಾಕಿರುವ ತಡೆಬೇಲಿಯೂ ನಜ್ಜುಗುಜ್ಜಾಗಿದೆ. ಮನೆಯ ಗೇಟ್‌ಗೆ ವಾಹನನಗಳು ಬಂದು ನುಗ್ಗುತ್ತಿದೆ. ಮನೆಯವರು ಐದಾರು ಬಾರಿ ಗೇಟ್ ಬದಲಾಯಿಸಿದ್ದಾರೆ. ಆದರೂ ಮತ್ತೆ ಮತ್ತೆ ವಾಹನಗಳು ಬಂದು ಗುದ್ದುತ್ತಿರುವುದರಿಂದ ಈಗ ಗೇಟ್ ಹಾಕುವುದನ್ನೇ ಮನೆ ಯವರು r ಬಿಟ್ಟಿ ದ್ದಾರೆ. ಆದರೆ ಇಲ್ಲಿನ ಮನೆ ಯವರಿಗೆ ಈಗ ರಾತ್ರಿ ಸರಿಯಾಗಿ ನಿದ್ದೆಯೇ ಬರುತ್ತಿಲ್ಲ. ವಾಹನ ಸದ್ದು ಜೋರಾಗಿ ಕೇಳಿಸಿ ದರೆ ಮನೆಮಂದಿಯ ಎದೆ ಝಲ್ ಎನ್ನುತ್ತದೆ.
ಅವೈಜ್ಞಾನಿಕ ರಸ್ತೆ
ಸುಮಾರು 7 ವರ್ಷಗಳ ಹಿಂದೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಲಾಯಿತು.
ಈ ಸಂದರ್ಭ ಕಾಮಗಾರಿಯ ನಿಧಾನಗತಿ ಹಾಗೂ ಎಸ್ಟಿಮೇಟ್ ಪ್ರಕಾರ ತಿರುವು ರಸ್ತೆಗಳನ್ನು ನೇರಗೊಳಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಿರುವುದರ ಹಿನ್ನೆಲೆಯಲ್ಲಿ ಅನೇಕ ಬಾರಿ ಪ್ರತಿಭಟನೆಗಳು ನಡೆದು ಹೋಗಿದ್ದವು. ಅಲ್ಲದೆ ಕಲ್ಲುಗುಂಡಿಯಲ್ಲಿ ಒಂದು ಸಂದರ್ಭದಲ್ಲಿ ಹೊಡೆದಾಟವೂ ನಡೆದು ಹೋಗಿತ್ತು.ಆದರೂ ರಸ್ತೆ ಅಭಿವೃದ್ಧಿಯ ಗುತ್ತಿಗೆಯನ್ನು ಪಡೆದು ಕೊಂಡ ಗುತ್ತಿಗೆದಾರರು ತನ್ನ ಚಾಳಿಯನ್ನು ಬಿಡದೆ ಅವೈಜ್ಞಾನಿಕ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಇಂದು ಮಾಣಿ – ಮೈಸೂರು ರಸ್ತೆಯ ಸಂಪಾಜೆಯಿಂದ ಮಾಣಿಯ ತನಕ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ.
ಅಸಮರ್ಪಕ ಚರಂಡಿ
ಸಂಪಾಜೆಯಿಂದ ಮಾಣಿ ತನಕ ಈ ರಸ್ತೆ ಅಭಿವೃದ್ಧಿ ಸಂದರ್ಭ ಇಲ್ಲಿ ಸಮರ್ಪಕವಾಗಿ ಚರಂಡಿಯನ್ನೂ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ಮಳೆ ನೀರೆಲ್ಲ ರಸ್ತೆಯ ಮೇಲೆ ಹೊಳೆ ಯಾಗಿ ಹರಿದು ಹೋಗುತ್ತಿವೆ. ಈ ರಸ್ತೆ ಅಭಿವೃದ್ಧಿಯ ಅವೈಜ್ಞಾನಿಕ ಕಾಮ ಗಾರಿಯ ವಿರುದ್ಧ ಸ್ಥಳೀಯ ಜನರು ಸಂಬಂಧಪಟ್ಟವರಿಗೆ ಇಂದಿಗೂ ಹಿಡಿಶಾಪ ಹಾಕುತ್ತಿದ್ದಾರೆ.
ಪತ್ರ ಬರೆದರೂ
ಪ್ರಯೋಜನವಿಲ್ಲ
ಅರಂತೋಡು ನಿವಾಸಿ ಯು.ಪಿ. ಭಾಸ್ಕರ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಸ್ಥಳೀಯ ಆಡಳಿತಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ ಈ ತನಕ ಯಾವುದೇ ಪ್ರಯೋಜನವಾಗಿಲ್ಲ.
ಭೀತಿ ಕಾಡುತ್ತಿದೆ
ನಮ್ಮ ಮನೆ ಪಕ್ಕದಲ್ಲಿ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಇಲ್ಲಿ ಅಪಘಾತ ಸಂಭವಿಸಿ ಅನೇಕ ಸಾವು-ನೋವು ಸಂಭವಿಸಿದೆ. ಇಲ್ಲಿ ರಸ್ತೆ ನೇರಗೊಳಿಸದೆ ತಿರುವು ಮಾಡಿದ್ದಾರೆ. ಅಲ್ಲದೆ ನನಗೆ ವೈಯಕ್ತಿಕವಾಗಿ ನಷ್ಟ ಉಂಟಾಗಿದೆ. ಮನೆಯ ಮೇಲ್ಛಾವಣಿಯವರೆಗೆ ವಾಹನಗಳು ಬಂದು ನುಗ್ಗಿವೆ. ಅದೃಷ್ಟವಶಾತ್ ನಾವು ಅಪಾಯದಿಂದ ಪಾರಾಗಿದ್ದೇವೆ. ಯಾವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ನಮ್ಮ ಕುಟುಂಬಕ್ಕೆ ಏನಾಗುತ್ತದೆಯೋ ಎಂದು ಹೇಳಲು ಅಸಾಧ್ಯ. ನಮಗೆ ಭಯದ ಭೀತಿ ಇದೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಯು.ಪಿ. ಭಾಸ್ಕರ ಉಳುವಾರು
ಅರಂತೋಡು
-ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.