ಮಾಣಿ-ಮೈಸೂರು ರಸ್ತೆ: ಬಸ್ ಸಂಚಾರ ಇನ್ನೂ ಇಲ್ಲ
Team Udayavani, Nov 12, 2018, 9:40 AM IST
ಅರಂತೋಡು: ಮಾಣಿ – ಮೈಸೂರು ರಸ್ತೆಯಲ್ಲಿ ಲಾರಿಗಳು ಸಂಚರಿಸುತ್ತಿದ್ದರೂ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಪ್ರಕೃತಿ ವಿಕೋಪದಿಂದಾಗಿ ಗುಡ್ಡ ಕುಸಿದು ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಸ್ತೆ ದುರಸ್ತಿ ಕಾಮಗಾರಿ ನಡೆಸಿ ಮಡಿಕೇರಿಯಿಂದ ಜೋಡುಪಾಲ ತನಕ ಕೆಎಸ್ಸಾರ್ಟಿಸಿ ಮಿನಿ ಬಸ್ ಸಂಚಾರ ಆರಂಭಿಸಲಾಯಿತು.
ಸದ್ಯ ಮಂಗಳೂರು, ಪುತ್ತೂರು, ಸುಳ್ಯ ಕಡೆಯ ಬಸ್‌ಗಳಿಗೆ ಜೋಡುಪಾಲ ತನಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿಳಿದ ಪ್ರಯಾಣಿಕರು ಮಡಿಕೇರಿ ತನಕ ಮಿನಿ ಬಸ್ಸಿನಲ್ಲಿ ಸಂಚರಿಸಬೇಕು. ಒಂದೂವರೆ ತಿಂಗಳಿನಿಂದ ಈಚೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಲಾರಿಗಳ ಸಂಚಾರಕ್ಕೆ ಅನುಮತಿ ಇಲ್ಲವಾದರೂ ರಾತ್ರಿ ವೇಳೆ ಓಡಾಡುತ್ತಿವೆ. ಇದರಿಂದ ಸಂಬಂಧಪಟ್ಟ ಇಲಾಖೆಯ ಮೇಲೆ ಪ್ರಯಾಣಿಕರು ಸಂಶಯ ವ್ಯಕ್ತಪಡಿಸ ಲಾರಂಭಿಸಿದ್ದು, ಬಸ್ ಸಂಪರ್ಕಕ್ಕೆ ಯಾಕೆ ಅವಕಾಶ ನೀಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
ಬಸ್‌ಗಳಲ್ಲಿ ನೂಕುನುಗ್ಗಲು
ಜೋಡುಪಾಲದಿಂದ ಮಡಿಕೇರಿವರೆಗೆ ಸದ್ಯ ಸಂಚರಿಸುತ್ತಿರುವುದು ಮಿನಿ ಬಸ್‌ಗಳು. ಇದರಿಂದ ಪ್ರಯಾಣಿಕರ ನೂಕುನುಗ್ಗಲು ಉಂಟಾಗುತ್ತಿದೆ. ಆಸನಗಳು ಕೂಡ ಇಕ್ಕಟ್ಟಾಗಿದ್ದು, ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಕಷ್ಟವಾಗಿದೆ. ಕಿಸೆಗಳ್ಳರಿಗೆ ವರವಾಗಿದೆ. ಪ್ರಯಾಣಿಕರ ದಟ್ಟಣೆಯ ದುರ್ಲಾಭ ಪಡೆದು ಕೆಲವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ದೂರುಗಳು ಕೇಳಿಬರುತ್ತಿವೆ.
ಬಸ್ ಸಂಚರಿಸಬಹುದು
ಮಡಿಕೇರಿಯಿಂದ ಜೋಡುಪಾಲದವರೆಗೆ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಸ್ ಸಂಚರಿಸಬಹುದು. ರಾತ್ರಿ ಲಾರಿ, ಘನ ವಾಹನಗಳು ಓಡಾಡುತ್ತವೆ. ಇದಕ್ಕೆ ಅವಕಾಶ ಕಲ್ಪಿಸುವವರು ಯಾರು ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಸೀಮಿತ ಕೆಎಸ್ಸಾರ್ಟಿಸಿ ಬಸ್‌ಗಳು ಸುಳ್ಯದಿಂದ ಮಡಿಕೇರಿ ತನಕ ಸಂಚರಿಸಲಿ. ಇದರಿಂದ ಜನರಿಗೆ ಅನುಕೂಲವಾಗಲಿದೆ.
ಬಾಲಚಂದ್ರ ಕಳಗಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷರು
ಸಮಸ್ಯೆ ಹೆಚ್ಚಿದೆ
ರಸ್ತೆಯಲ್ಲಿ ನೇರ ಬಸ್ ಸಂಪರ್ಕಕ್ಕೆ ಅವಕಾಶ ಕಲ್ಪಿಸದೆ ಇರುವುದರಿಂದ ಅನೇಕರಿಗೆ ಸಮಸ್ಯೆಯಾಗುತ್ತಿದೆ. ಜೋಡುಪಾಲದಲ್ಲಿ ಪ್ರಯಾಣಿಕರು ಬಸ್ ಕಾಯಬೇಕು. ಅಲ್ಲಿ ಬಸ್ ನಿಲ್ದಾಣವೂ ಇಲ್ಲ. ಹೊಟೇಲ್, ಶೌಚಾಲಯದ ವ್ಯವಸ್ಥೆಯೂ ಇಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆಗೊಳಗಾಗುತ್ತಿದ್ದಾರೆ.
ತಿರುಮಲ ಸೋನ ಕೊಯಿನಾಡು, ಸ್ಥಳೀಯ ಪ್ರಯಾಣಿಕ
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.