ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಆರಂಭ
Team Udayavani, Jun 7, 2018, 2:40 AM IST
ಬೆಳ್ತಂಗಡಿ: ಮಣಿಪಾಲ ಆರೋಗ್ಯ ಕಾರ್ಡ್ 2018 ಯೋಜನೆಗೆ ಚಾಲನೆ ನೀಡಲಾಗಿದ್ದು, ಸಾಮಾನ್ಯ ಜನತೆಗೂ ಕಡಿಮೆ ವೆಚ್ಚದ ಚಿಕಿತ್ಸಾ ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ 18 ವರ್ಷಗಳಿಂದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ಸೌಲಭ್ಯ ನೀಡ ಲಾಗುತ್ತಿದೆ ಎಂದು ಕೆ.ಎಂ.ಸಿ ಆಸ್ಪತ್ರೆ ರೀಜನಲ್ ಚೀಫ್ ಆಪರೇಟಿಂಗ್ ಆಫಿಸರ್ ಸಗೀರ್ ಸಿದ್ಧಿಕಿ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಡಿನ ಸದಸ್ಯತ್ವ ಪಡೆದವರು 2018ರ ಆ. 1ರಿಂದ 12 ತಿಂಗಳ ಕಾಲಾವಧಿವರೆಗೆ ಸೌಲಭ್ಯ ಪಡೆಯಬಹುದು. ಇನ್ನೂ ಒಂದು ಹಂತದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಮಣಿಪಾಲ ಸಮೂಹದ ಐದು ಆಸ್ಪತ್ರೆ ಗಳಾದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ, ಅತ್ತಾವರ ಕೆಎಂಸಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಉಡುಪಿ ಡಾ| ಟಿ.ಎಂ.ಎ. ಪೈ ಆಸ್ಪತ್ರೆ ಮತ್ತು ಕಾರ್ಕಳ ಡಾ| ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಹಾಗೂ ಮಣಿಪಾಲ, ಮಂಗಳೂರಿನ ಎರಡು ಡೆಂಟಲ್ ಕಾಲೇಜುಗಳಾದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಇಲ್ಲಿ ರಿಯಾಯತಿ ಅನ್ವಯ ವಾಗುತ್ತದೆ. ಮಣಿಪಾಲ ಆರೋಗ್ಯ ಕಾರ್ಡ್‌ನ ನೊಂದಾವಣೆ ಪ್ರಕ್ರಿಯೆಗೆ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ಸದಸ್ಯತನ ಶುಲ್ಕ ವ್ಯಕ್ತಿಗತ ಕಾರ್ಡ್‌ಗೆ 250 ರೂ. ಮತ್ತು ಕೌಟುಂಬಿಕ ಕಾರ್ಡ್‌ಗೆ 520 ರೂ. ಆಗಿದೆ ಎಂದರು.
ಕುಟುಂಬದಲ್ಲಿ- ಕಾರ್ಡ್‌ದಾರರು, ಅವರ ಸಂಗಾತಿ ಮತ್ತು 25 ವರ್ಷ ವಯಸ್ಸಿಗಿಂತ ಕೆಳಗಿನ ಎಲ್ಲ ಅವಲಂಬಿತ ಮಕ್ಕಳು ಒಳಗೊಳ್ಳುತ್ತಾರೆ. ಕೌಟುಂಬಿಕ ಕಾರ್ಡ್ ಯೋಜನೆಯಡಿ ಹೆತ್ತವರನ್ನು ಸೇರಿಸಲು ಒಬ್ಬರಿಗೆ 100 ರೂ.ನಂತೆ ಇಬ್ಬರನ್ನು ಈ ಯೋಜನೆಯಲ್ಲಿ ನೋಂದಾಯಿಸಬಹುದು. ನವೀಕರಿಸುವ ಕಾರ್ಡ್ ಗಳಿಗೆ, ಸದಸ್ಯತ್ವ ಶುಲ್ಕದಲ್ಲಿ ಶೇ. 10 ರಿಯಾಯಿತಿ ಇರಲಿದೆ ಎಂದರು.
ಸಾರ್ವಜನಿಕ ಸಂಪರ್ಕ ವಿಭಾಗದ ರಾಕೇಶ್ ಮಾಹಿತಿ ನೀಡಿ, ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ನೀಡಲಾಗುವ ಪ್ರಯೋಜನಗಳು ಮತ್ತು ರಿಯಾಯತಿ ಪ್ರಸಕ್ತ ವರ್ಷದಲ್ಲಿ ಯಾವುದೇ ತಜ್ಞ ವೈದ್ಯರ ಜತೆಗಿನ ಕನ್ಸಲ್ಟೆàಶನ್‌ಗೆ ಶೇ. 50 ರಿಯಾಯಿತಿ, ಪ್ರಯೋಗಾಲಯದ ತಪಾಸಣೆಗೆ ನೇರ ಶೇ. 25, ಸಿಟಿ/ಎಂಆರ್‌ಐ/ಅಲ್ಟ್ರಾಸೌಂಡ್‌ಗೆ ಶೇ. 20, ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಹೊರರೋಗಿ ಪ್ರೊಸೀಜರ್‌ಗೆ ಶೇ. 25 ಹಾಗೂ ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ವೃತ್ತದಲ್ಲಿ ಶೇ. 10, ಜನರಲ್ ವಾರ್ಡ್‌ನಲ್ಲಿ ಒಳರೋಗಿಯಾಗಿ ದಾಖಲಾದಲ್ಲಿ ರೋಗಿಯ ಬಿಲ್ ನಲ್ಲಿ (ಕನ್ಸುಮೇಬಲ್ಸ್ ಮತ್ತು ಫಾರ್ಮೆಸಿ ಹೊರತುಪಡಿಸಿ) ಶೇ. 25, ಅಂಬೇಡ್ಕರ್ ವೃತ್ತ ಕೆಎಂಸಿ ಆಸ್ಪತ್ರೆಯಲ್ಲಿ ಶೇ. 10, ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಜನರಲ್ ವಾರ್ಡ್‌ನಲ್ಲಿ ನಾರ್ಮಲ್ ಮತ್ತು ಸಿಸೇರಿಯನ್ ಡೆಲಿವರಿ ಆದಲ್ಲಿ ಬಿಲ್ಲಿನಲ್ಲಿ (ಕನ್ಸುಮೇಬಲ್ ಮತ್ತು ಫಾರ್ಮೆಸಿ ಹೊರತುಪಡಿಸಿ) ಶೇ. 50 ರಿಯಾಯಿತಿ ನೀಡಲಾಗುತ್ತದೆ. ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ವೃತ್ತದ ನೂತನ ಕಟ್ಟಡದಲ್ಲಿ ಅಡ್ಮಿಷನ್ ಶುಲ್ಕ, ಬೆಡ್ ಮತ್ತು ನರ್ಸಿಂಗ್ ಶುಲ್ಕದಲ್ಲಿ ಶೇ. 20, ಅಲ್ಟ್ರಾ ವಾರ್ಡ್‌ಗಳಲ್ಲಿ (ಸೆಮಿ ಪ್ರೈವೇಟ್, ಸೆಮಿಸ್ಪೆಷಲ್, ಸ್ಪೆಷಲ್) ಶಸ್ತ್ರಚಿಕಿತ್ಸೆಗಳಿಗೆ ಶೇ. 10, ಹೊರರೋಗಿಗಳು ಆಸ್ಪತ್ರೆಯಿಂದ ಖರೀದಿಸುವ ಔಷಧಗಳ ಮೇಲೆ ಶೇ. 10 ರಿಯಾಯಿತಿ ಸೌಲಭ್ಯ ಇರುತ್ತದೆ. ಹೆಚ್ಚಿನ ವಿವರಗಳಿಗೆ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು 7022078005, 7022078002 ಇವರನ್ನು ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಹರ್ಬರ್ಟ್ ಪೆರೇರಾ, ಸಾಧಿಕ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.