Manipur ಅಫೀಮು, ವಲಸಿಗರ ಕುಮ್ಮಕ್ಕಿನಲ್ಲಿ ದಾಳಿ

ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ ಸಂವಾದದಲ್ಲಿ ಮೇ| ಮೋತಿಮಾಲಾ

Team Udayavani, Aug 18, 2023, 10:57 PM IST

manipurManipur ಅಫೀಮು, ವಲಸಿಗರ ಕುಮ್ಮಕ್ಕಿನಲ್ಲಿ ದಾಳಿ

ಮಂಗಳೂರು: ಮೈತೇಯಿ ಸಮುದಾಯದ ಮೇಲೆ ಕುಕಿಗಳು ನಿರಂತರ ಹಲ್ಲೆ, ಅತ್ಯಾಚಾರ ನಡೆಸು ತ್ತಿದ್ದಾರೆ, ಇನ್ನೊಂದೆಡೆ ಮಣಿಪುರದ ಗುಡ್ಡಗಾಡು ಪ್ರದೇಶವನ್ನು ಅಫೀಮಿಗೆ ಬೇಕಾಗುವ ಪೋಪ್ಪಿ ಎನ್ನುವ ಗಿಡ ಬೆಳೆಸುವುದಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದನ್ನು ವಿದೇಶಗಳಿಗೆ ಕಳ್ಳಸಾಗಾಟ ಮಾಡಲಾಗುತ್ತಿದೆ, ಯುವಜನತೆ ಅದಕ್ಕೆ ದಾಸರಾಗುತ್ತಿದ್ದಾರೆ ಎಂದು ಮಣಿಪುರದ ಪ್ರಥಮ ರಕ್ಷಾ ಮಂತ್ರಿ ಮೇಜರ್‌ ಮೋತಿಮಾಲಾ ಗ್ಯಾಂಗೋಮ್‌ ಹೇಳಿದರು.

ನಮೋ ಬ್ರಿಗೇಡ್‌ 2.0 ವತಿಯಿಂದ ಡೊಂಗರ ಕೇರಿಯಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ನಡೆದ “ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ’ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೈತೇಯಿ ಸಮುದಾಯದ ಸಂಪ್ರದಾಯ ಮತ್ತು ಸಂಸ್ಕೃತಿಗಳ ಮೇಲೆ ಕೂಡ ದಾಳಿ ಮಾಡಲಾ ಗುತ್ತಿದೆ. ಮಣಿಪುರವು ಮ್ಯಾನ್ಮಾರ್‌ ದೇಶ ದೊಂದಿಗೆ ಗಡಿ ಹಂಚಿಕೊಂಡಿದೆ. ಅಲ್ಲಿನವರೂ ಸುಲಭವಾಗಿ ಗಡಿ ಯೊಳಗೆ ಅತಿಕ್ರಮಣ ಮಾಡಿ ಬಂದು ಕುಕಿಗಳ ಜತೆ ಸೇರಿ ಮಣಿಪುರದ ಮೂಲ ನಿವಾಸಿಗಳಾದ ಮೈತೇಯಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದರು.

ವಿದೇಶಿ ಮಾಧ್ಯಮಗಳಿಂದ ಏಕಮುಖಿ ಸುದ್ದಿ
ಮಣಿಪುರ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಡಾ|ಊರ್ಮಿಕಾ ಮಯ್ಬಾಮಾ ಅವರು ಮಾತನಾಡಿ ಮೈತೇಯಿ ಸಮುದಾಯದ ಬಳಿ ಹಣ, ಸಂಪತ್ತು ಇಲ್ಲ. 2011ರ ಜನಗಣತಿ ಆಧಾರದಲ್ಲಿ 30 ಲಕ್ಷ ಜನಸಂಖ್ಯೆ ಇತ್ತು. ಹತ್ತು ವರ್ಷಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಕುಕಿ ಸಮುದಾಯ ದವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ ಎಂದರು.

ಮೇ 3ರ ಮೊದಲೇ ಅಂತಾರಾಷ್ಟ್ರೀಯ ವರದಿಗಾರರು ಆಗಮಿಸಿದ್ದರು. ಮೊದಲೇ ಸರಕಾರಿ ಹುದ್ದೆಯಲ್ಲಿರುವ ಕುಕಿ ಅಧಿಕಾರಿಗಳು ರಜೆ ಮೇಲೆ ಹೋಗಿದ್ದಾರೆ. 10 ಕುಕಿ ಶಾಸಕರೂ ಮಿಜಾರಾಂಗೆ ಹೋಗಿ ಸೇರಿಕೊಂಡಿದ್ದರು. ಈ ಮೂಲಕ ಮೇ 3ರಂದು ನಡೆದ ಘಟನೆ, ಮೈತೇಯಿಗಳ ಮೇಲೆ ನಡೆದ ಹಲ್ಲೆ, ಸುವ್ಯವಸ್ಥಿತವಾಗಿ ರೂಪಿತವಾದದ್ದು, ಮಾಧ್ಯಮಗಳೂ ಏಕಪಕೀÒಯವಾಗಿ ವರದಿ ಮಾಡುತ್ತಿವೆ ಎಂದರು.

ಶೇ. 10ರಷ್ಟು ಬಯಲು ಪ್ರದೇಶದಲ್ಲಿ ಮಾತ್ರ ಮೈತೇಯಿಗಳು ಹಾಗೂ ಇತರ ಸಮುದಾಯ ನೆಲೆಸಿದ್ದರೆ ಮಣಿಪುರದ ಉಳಿದ ಶೇ. 90ರಷ್ಟು ಭೂಭಾಗವಾದ ಗುಡ್ಡಗಳಲ್ಲಿ ಕುಕಿಗಳಿದ್ದಾರೆ. ಭೂ ಸುಧಾರಣ ಕಾಯಿದೆಯ ಪ್ರಕಾರ ಮೈತೇಯಿಗಳು ಗುಡ್ಡಗಾಡು ಪ್ರದೇಶದಲ್ಲೆಲ್ಲೂ ನೆಲೆಸುವಂತಿಲ್ಲ, ಅಲ್ಲಿ ನೆಲೆಸಿದವರ ಮೇಲೆ ನಿರಂತರ ಹಲ್ಲೆ ನಡೆದಿದೆ ಎಂದರು.

ಭಾರತಿ ಸಂಜಯ್‌ ಪ್ರಭು ಸ್ವಾಗತಿಸಿ ಪ್ರಸ್ತಾವಿಸಿದರು. ಗೋಪಾಲಕೃಷ್ಣ ಭಟ್‌ ಪ್ರಾರ್ಥಿಸಿದರು. ಅರುಣ್‌ ಜಿ. ಶೇಟ್‌ ನಿರೂಪಿಸಿ ವಂದಿಸಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.