ಮಂಜೇಶ್ವರ: ರೈಲು ಎಂಜಿನ್ ಢಿಕ್ಕಿ:ತಾಯಿ, ಮಗು ಸಹಿತ ಮೂವರ ಸಾವು
Team Udayavani, Feb 1, 2018, 9:33 AM IST
ಮಂಜೇಶ್ವರ: ಇಲ್ಲಿನ ರೈಲು ನಿಲ್ದಾಣ ಬಳಿ ಹಳಿ ದಾಟುತ್ತಿದ್ದ ವೇಳೆ ರೈಲು ಎಂಜಿನ್ ಢಿಕ್ಕಿ ಹೊಡೆದು ಇಬ್ಬರು ಮಹಿಳೆ ಯರು ಹಾಗೂ ಮಗುವೊಂದು ಸಾವಿಗೀಡಾದ ಘಟನೆ ಬುಧವಾರ ಸಂಭವಿಸಿದೆ.
ಬುಧವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಈ ದುರಂತ ಸಂಭವಿಸಿದ್ದು, ಮಂಜೇಶ್ವರ ಪೊಸೋಟು ಸತ್ಯಡ್ಕ ಆದರ್ಶ ನಗರದ ಕೆ.ಟಿ. ಅಬೂಬಕ್ಕರ್ ಹಾಜಿ ಅವರ ಪುತ್ರಿಯರಾದ ಆಮೀನಾ (45), ಆಯಿಷಾ (42) ಮತ್ತು ಆಯಿಷಾ ಅವರ ಪುತ್ರ ತಾಮಿಲ್ (3) ಮೃತಪಟ್ಟವರು.
ಬೆಳಗ್ಗೆ ಮನೆಯಿಂದ ಮಂಜೇಶ್ವರದ ಒಳ ಪೇಟೆ ಯಲ್ಲಿರುವ ಬ್ಯಾಂಕಿಗೆಂದು ತೆರ ಳಿದ್ದ ಸಹೋದರಿಯರು ಬಳಿಕ ಅಲ್ಲಿಂದ ಮಗುವಿಗೆ ಬಟ್ಟೆಬರೆ ಹಾಗೂ ಔಷಧವನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮಂಜೇಶ್ವರದಲ್ಲಿ ಉಭಯ ಹಳಿಗಳಿದ್ದು, ಎರಡೂ ಬದಿ ಯಿಂದ ಏಕಕಾಲದಲ್ಲಿ ರೈಲುಗಳು ಸಾಗು ತ್ತವೆ. ಕಾಸರ ಗೋಡು ಭಾಗದಿಂದ ಆಗಮಿಸಿದ ರೈಲು ತೆರಳಿದ ಕೂಡಲೇ ಮಹಿಳೆಯರು ಹಳಿ ದಾಟಲಾರಂಭಿಸಿದ್ದು, ಆಗ ಮಂಗಳೂರಿ ನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ರೈಲು ಎಂಜಿನ್ ಢಿಕ್ಕಿ ಹೊಡೆದು ಮೂವರೂ ಸ್ಥಳದಲ್ಲೇ ಸಾವಿಗೀಡಾದರು.
ಢಿಕ್ಕಿ ಹೊಡೆದ ರೈಲು ಮೂವರನ್ನು ಸುಮಾರು 100 ಮೀಟರ್ ತನಕ ಎಳೆದೊಯ್ದ ದೃಶ್ಯ ಭೀಕರವಾಗಿತ್ತು. ಹಲವಾರು ಮಂದಿಯ ಕಣ್ಣೆದುರೇ ಈ ದುರಂತ ಸಂಭವಿ ಸಿದೆ. ಮಂಗಳೂರಿನತ್ತ ತೆರಳುತ್ತಿದ್ದ ರೈಲಿನ ಸದ್ದಿಗೆ ಇನ್ನೊಂದು ಹಳಿಯಲ್ಲಿ ಸಾಗಿಬಂದ ರೈಲು ಎಂಜಿನ್‌ನ ಸದ್ದು ಇವರಿಗೆ ಕೇಳಿಸದೇ ಇರುವುದು ಅವಘಡಕ್ಕೆ ಕಾರಣವಾಯಿತು.
ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಮಂಜೇ ಶ್ವರ ಪೊಲೀಸರು ಮೃತದೇಹಗಳ ಪಂಚ ನಾಮೆ ನಡೆಸಿದರು. ಮಂಗಲ್ಪಾಡಿ ಸಾಮಾ ಜಿಕ ಆರೋಗ್ಯ ಕೇಂದ್ರದಲ್ಲಿ ಶವ ಮಹಜರು ನಡೆಸಲಾಯಿತು. ಬಳಿಕ ಪೊಸೋಟು ಮಸೀದಿಯ ದಫನಭೂಮಿ ಯಲ್ಲಿ ಅಂತ್ಯ ಕ್ರಿಯೆ ನಡೆಸ ಲಾಯಿತು. ಅಪಾರ ಸಂಖ್ಯೆ ಯಲ್ಲಿ ಸ್ಥಳೀಯರು ಸ್ಥಳಕ್ಕಾಗಮಿಸಿದ್ದರು.
ಆಮೀನಾಳ ಪತಿ ಮೊದಿನ್ ಮಂಗಳೂರಿನ ಹೊಟೇಲಿನಲ್ಲಿ ವೃತ್ತಿ ಯಲ್ಲಿದ್ದು ಐವರು ಮಕ್ಕಳು. ಆಯಿಷಾ ಪತಿ ಅಬ್ದುಲ್ಲ ಕೊಲ್ಲಿ ರಾಷ್ಟ್ರದಲ್ಲಿದ್ದು ಅವರಿಗೂ ಐವರು ಮಕ್ಕಳು. ಈ ಪೈಕಿ ತಾಮಿಲ್ ಅಮ್ಮ ನೊಂದಿಗೆ ಮೃತಪಟ್ಟಿದೆ.
ಮೇಲ್ಸೇತುವೆ ಇಲ್ಲದಿರುವುದೇ ಕಾರಣ
ಘಟನಾ ಸ್ಥಳ ಅಪಘಾತಗಳ ಆಗರವಾಗಿದ್ದು, ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಹಲವು ಬಾರಿ ಮನವಿ ನೀಡಿ ದರೂ ಯಾವುದೇ ಫಲಶ್ರುತಿ ಕಂಡಿರಲಿಲ್ಲ. ಹೆದ್ದಾರಿಯಿಂದ ಒಳಪೇಟೆಗೆ ತೆರಳಬೇಕಾದರೆ ರೈಲು ಹಳಿಯನ್ನು ದಾಟಿಯೇ ಸಾಗಬೇಕಾಗಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಈ ಅಪಾಯಕಾರಿ ಹಾದಿಯನ್ನೇ ಬಳಸುತ್ತಿದ್ದಾರೆ. ರೈಲು ಪ್ರಯಾ ಣಿಕರಿಗೆ ರೈಲು ನಿಲ್ದಾಣವನ್ನು ದಾಟಲು ಮೇಲ್ಸೇತುವೆ ಇದೆ. ಒಳಪೇಟೆಯಿಂದ ಬರುವ ರಸ್ತೆಯಿಂದ ಸುಮಾರು 250 ಮೀಟರ್ ದೂರದಲ್ಲಿ ಈ ಮೇಲ್ಸೇತುವೆ ಇದ್ದು, ದಾರಿಹೋಕರು ಅದರ ಮೇಲಿನಿಂದ ದಾಟಿ ಹೆದ್ದಾರಿಯಲ್ಲಿರುವ ಬಸ್‌ನಿಲ್ದಾಣ ತಲುಪುವಾಗ ಒಂದು ಕಿ.ಮೀ. ಆಗುತ್ತದೆ. ಆದ್ದರಿಂದ ದಾರಿಹೋಕರು ಅಪಾಯಕಾರಿಯಾದರೂ ರೈಲು ಹಳಿಯನ್ನು ದಾಟಿಯೇ ಹೋಗುತ್ತಾರೆ.
ರೈಲಿನ ಅಡಿಯಿಂದಲೂ ನುಸುಳುತ್ತಾರೆ!
ಇದೇ ಸ್ಥಳದಲ್ಲಿ ಕೆಲವೊಮ್ಮೆ ಗೂಡ್ಸ್ ರೈಲು ಗಾಡಿಯನ್ನು ವಾರಗಟ್ಟಲೇ ನಿಲ್ಲಿಸಲಾಗುತ್ತಿದ್ದು, ಅದರ ಅಡಿಯಿಂದಲೇ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ನುಸುಳಿಕೊಂಡು ಸಾಗುತ್ತಾರೆ. ಇಲ್ಲಿ ಅವಘಡಗಳಿಂದ ಮುಕ್ತಿ ಹೊಂದಲು ಮೇಲ್ಸೇತುವೆ ನಿರ್ಮಾಣ ಅತೀ ಅಗತ್ಯವಾಗಿದೆ. ಸಂಸದರು, ಜಿ.ಪಂ. ಅಧ್ಯಕ್ಷರು, ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.