ಕರಾವಳಿಯಲ್ಲಿ ಗುರಿಮುಟ್ಟುವತ್ತ ಮುಂಗಾರು : ಉಡುಪಿ ಜಿಲ್ಲೆಯಲ್ಲಿ ದಾಖಲೆ ಮಳೆ
Team Udayavani, Sep 3, 2022, 9:36 AM IST
ಮಂಗಳೂರು: ಮುಂಗಾರು ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿ ಇದ್ದು, ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲೇ ದಾಖಲೆಯ ಮಳೆ ಉಡುಪಿ ಜಿಲ್ಲೆಯಲ್ಲಿ ಸುರಿದಿದೆ.
ಸಾಮಾನ್ಯವಾಗಿ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಜಾಸ್ತಿ. ಸದ್ಯ ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂದರೆ 4,022 ಮಿ.ಮೀ. ವಾಡಿಕೆ ಮಳೆ ಪ್ರಮಾಣವನ್ನು ಹವಾಮಾನ ಇಲಾಖೆ ನಿರ್ಧರಿಸಿದೆ. ಅಂತೆಯೇ ಉಡುಪಿಯಲ್ಲಿ 3,521 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ 3,444 ಮಿ.ಮೀ. ಮಳೆಯಾಗಿತ್ತು.
ಮೇ ಅಂತ್ಯದಲ್ಲಿ ಕೇರಳಕ್ಕೆ ಕಾಲಿಟ್ಟ ಮುಂಗಾರು ಜೂನ್ 1ರಂದು ರಾಜ್ಯ ಕರಾವಳಿಗೆ ತಲುಪಿತ್ತು. ದ.ಕ., ಉಡುಪಿ ಜಿಲ್ಲೆಗಳಲ್ಲಿ ಒಂದು ದಿನ ಬಿರುಸಾಗಿ ಸುರಿದು ಬಳಿಕ ತಗ್ಗಿತ್ತು. ಆದರೆ ಬಳಿಕ ಮುಂಗಾರು ಅಬ್ಬರ ಜೋರಾಗಿತ್ತು. ಅದರಲ್ಲೂ ಹವಾಮಾನ ವೈಪರೀತ್ಯದ ಪರಿಣಾಮ ಜಿಲ್ಲೆಯ ಹೋಬಳಿ, ತಾಲೂಕು ವ್ಯಾಪ್ತಿಯೊಳಗೇ ವ್ಯಾಪಕ ಮಳೆಯಾಗಿತ್ತು.
ಉಡುಪಿ ಜಿಲ್ಲೆಯ ಬಳಿಕ ಅತೀ ಹೆಚ್ಚು ಮಳೆ ದ.ಕ. ಜಿಲ್ಲೆಯಲ್ಲಿ ಸುರಿದಿದೆ.
ಇದನ್ನೂ ಓದಿ : ಕರಾವಳಿ ಕಾವಲು ಪೊಲೀಸ್ ಪಡೆ : ತುರ್ತುಸೇವೆಯ ಸೀ ಆ್ಯಂಬುಲೆನ್ಸ್ ಪ್ರಸ್ತಾವನೆ ಮೂಲೆಗುಂಪು!
ಎಲ್ಲೆಲ್ಲಿ ಎಷ್ಟು ಮಳೆ?
ಜೂನ್ 1ರಿಂದ ಆ. 27ರ ವರೆಗೆ ಕರಾವಳಿಯಲ್ಲಿ ವಾಡಿಕೆಯಂತೆ 2,733 ಮಿ.ಮೀ. ಮಳೆ ಸುರಿಯಬೇಕು. ಸದ್ಯ 2,683 ಮಿ.ಮೀ. ಮಳೆಯಾಗಿ ಶೇ. 2ರಷ್ಟು ಕಡಿಮೆ ಇದೆ. ದ.ಕ.ದಲ್ಲಿ 2,982 ಮಿ.ಮೀ. ವಾಡಿಕೆ ಮಳೆಯಲ್ಲಿ 3,086 ಮಿ.ಮೀ. ಮಳೆಯಾಗಿ ಶೇ. 3ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ 4,022 ಮಿ.ಮೀ. ವಾಡಿಕೆ ಮಳೆ ಪೈಕಿ 3,521 ಮಿ.ಮೀ. ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2,339 ಮಿ.ಮೀ. ವಾಡಿಕೆ ಮಳೆಯಲ್ಲಿ 2,196 ಮಿ.ಮೀ. ಮಳೆಯಾಗಿ ಶೇ. 6ರಷ್ಟು ಮಳೆ ಕೊರತೆ ಇದೆ.
ಕರಾವಳಿಯಲ್ಲಿ ಕಳೆದ ವರ್ಷ ಶೇ. 13ರಷ್ಟು ಮಳೆ ಕಡಿಮೆಯಾಗಿತ್ತು. ನೈಋತ್ಯ ಮಾನ್ಸೂನ್ ಅವಧಿ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿ ಇರುವುದರಿಂದ ಅಷ್ಟರಲ್ಲಿ ವಾಡಿಕೆಯ ಗುರಿ ತಲುಪುವ ನಿರೀಕ್ಷೆ ಇದೆ.
– ಸುನಿಲ್ ಗವಾಸ್ಕರ್, ಕೆಎಸ್ಎನ್ಡಿಎಂಸಿ ವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.