ಹೊಸ ಮೇಯರ್ ಎದುರು ಹಲವು ಸವಾಲು
ನಗರ ಅಭಿವೃದ್ಧಿ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ನಾಗರಿಕರಿಗೊಂದು ವೇದಿಕೆ ಈ ಸರಣಿ
Team Udayavani, Mar 7, 2020, 5:14 AM IST
ಈ ಸರಣಿ ಇಂದಿನಿಂದ ಆರಂಭ. ನಗರದ ಕೆಲವು ಬಗೆಹರಿಸದೇ ಉಳಿದಿರುವ ಸವಾಲುಗಳು ಮತ್ತು ನಗರ ವಲಸೆಯಿಂದ ಏರ್ಪಡುತ್ತಿರುವ ಹೊಸ ಸಮಸ್ಯೆಗಳು-ಎರಡರ ಕುರಿತು ಹೊಸ ಪಾಲಿಕೆ ಆಡಳಿತಕ್ಕೆ ಮನದಟ್ಟು ಮಾಡಿಕೊಟ್ಟು ಪರಿಹಾರ ಹುಡುಕಲು ಕಾರ್ಯೋನ್ಮುಖವಾಗುವಂತೆ ಉತ್ಸಾಹ ತುಂಬುವುದೇ ಈ ಸರಣಿಯ ಉದ್ದೇಶ.
ಮಹಾನಗರ: ಮಹಾನಗರ ಪಾಲಿಕೆಗೆ ಒಂದು ವರ್ಷದ ಬಳಿಕ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳ ಆಡಳಿತಕ್ಕೆ ಚಾಲನೆ ಸಿಕ್ಕಂತಾಗಿದೆ.
ಬೆಂಗಳೂರಿನ ಬಳಿಕ ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ನಗರ ಮಂಗಳೂರು. ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಗೊಳ್ಳುತ್ತಿರುವ ನಗರದಲ್ಲಿ ನಿಧಾನಗತಿಯಲ್ಲಿರುವ ಹಾಗೂ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ವೇಗ ದೊರಕೀತೆಂಬ ನಿರೀಕ್ಷೆ ನಾಗರಿಕರದ್ದು.
ಮೇಯರ್ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ವೇದಾವತಿ ಅವರು ಈಗಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳೂ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಇದರೊಂದಿಗೆ ಜನರ/ವಾರ್ಡ್‌ನ ಸಮಸ್ಯೆ, ದೂರುಗಳಿಗೆ ಸ್ಪಂದಿಸಲು ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕೃತ ಅಧಿಕಾರ ಸಿಕ್ಕಿದೆ. ಆದರೆ ಹೊಸ ಮಹಾಪೌರ ಹಾಗೂ ಉಪ ಮಹಾಪೌರರೂ ಸಹಿತ ಎಲ್ಲ 60 ವಾರ್ಡ್‌ಗಳ ಸದಸ್ಯರ ಮುಂದೆ ಹಲವು ಸವಾಲುಗಳಿವೆ.
ಒಂದೆಡೆ ಬೇಸಗೆ ಜೋರಾಗುತ್ತಿದ್ದು, ಪ್ರತಿ ವಾರ್ಡ್ ಗಳಲ್ಲೂ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇನ್ನೊಂದೆಡೆ ಮಳೆಗಾಲ ಪ್ರಾರಂಭಕ್ಕೆ ಎರಡೂವರೆ ತಿಂಗಳಷ್ಟೇ ಬಾಕಿಯಿದ್ದು, ಆ ಸಂದರ್ಭದಲ್ಲಿ ಎದುರಾಗಬಹುದಾದ ಕೃತಕ ನೆರೆ ಪರಿಸ್ಥಿತಿಯನ್ನು ಎದುರಿಸಲೂ ಸನ್ನದ್ಧರಾಗಬೇಕಿದೆ.
ಜಿಲ್ಲಾ ಕೇಂದ್ರ, ಬಂದರು ನಗರವಾದ ಮಂಗಳೂರು ಕರ್ನಾಟಕದ ಹೆಬ್ಟಾಗಿಲು ಎಂದೂ ಗುರುತಿಸಿಕೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಬಹಳಷ್ಟು ಕಡೆ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಆದರೆ ಸಮಸ್ಯೆಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನಗರಕ್ಕೆ ಪೂರೈಸುವ ಕುಡಿಯುವ ನೀರು ಇರಬಹುದು; ಟ್ರಾಫಿಕ್ ಅಥವಾ ಕಸದ ಸಮಸ್ಯೆಗಳಿರಬಹುದು. ಹೀಗೆ ಹತ್ತಾರು ಹಳೆಯ ಸಮಸ್ಯೆಗಳೊಂದಿಗೆ ಹೊಸ ಸಮಸ್ಯೆಗಳೂ ಸೇರಿಕೊಳ್ಳುತ್ತಿವೆ. ಇವುಗಳಿಗೆ ಪರಿಹಾರಗಳನ್ನು ಹುಡುಕುವ ಹೊಣೆ ನೂತನ ಮೇಯರ್ ಒಳಗೊಂಡಂತೆ 21ನೇ ಅವಧಿಯ ಪಾಲಿಕೆ ಪರಿಷತ್ ಮುಂದಿದೆ.
ಜನಪ್ರತಿನಿಧಿಗಳ ಆಡಳಿತವಿಲ್ಲದೆ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ನಮ್ಮ ಸಮಸ್ಯೆ, ಸವಾಲುಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವೇಗ ಕುಂಠಿತಗೊಂಡಿದೆ. ಕೆಲವೆಡೆ ಕಾಮಗಾರಿಗಳು ನಡೆದಿಲ್ಲ. ಹೊಸ ಯೋಜನೆಗಳು ಬರುವಲ್ಲಿ , ಬೇಡಿಕೆ ಮಂಡಿಸುವ ಕಾರ್ಯ ಆದ್ಯತೆಯ ನೆಲೆಯಲ್ಲಿ ನಡೆದಿಲ್ಲ ಎಂಬ ಟೀಕೆ ಸಾರ್ವಜನಿಕರದ್ದು,
ನಗರ ಸ್ಥಳೀಯಾಡಳಿತದಿಂದ ಹಿಡಿದು ಕೇಂದ್ರ ಸರಕಾರದವರೆಗೆ ಒಂದೇ ಪಕ್ಷದ ಆಡಳಿತ ವ್ಯವಸ್ಥೆಯಿದ್ದು, ಹೊಸ ಯೋಜನೆಗಳ ಅನುಷ್ಠಾನ, ಅನುದಾನಗಳ ಮಂಜೂರಾತಿ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಗಿಸಲು ಒಂದು ಒಳ್ಳೆಯ ಅವಕಾಶವೂ ಹೌದು.
ಕೊಟ್ಟ ಭರವಸೆ ಈಡೇರಿಸಲು ಸಕಾಲ
ಪಾಲಿಕೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕುಡಿಯುವ ನೀರು, ತ್ಯಾಜ್ಯ, ಒಳಚರಂಡಿ,ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಮೂಲ ಅವಶ್ಯಕತೆಗಳನ್ನು ಪೂರೈಸಲು ಆರ್ಥಿಕ ಸಂಪನ್ಮೂಲದ ಕೊರತೆ ಇದೆ. ಆಸ್ತಿ ತೆರಿಗೆ, ಕಟ್ಟಡ ತೆರಿಗೆ, ನೀರಿನ ಬಿಲ್ ಸಹಿತ ಆದಾಯ ಮೂಲಗಳ ಪರಿಣಾಮಕಾರಿ ಸಂಗ್ರಹದಲ್ಲಿ ಹಿನ್ನಡೆಯಾಗಿರುವುದನ್ನು ಪಾಲಿಕೆಯ ಅಂಕಿ-ಅಂಶಗಳೇ ಹೇಳುತ್ತಿವೆ. ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸಿ ನಗರದ ಸಮಗ್ರ ಅಭಿವೃದ್ಧಿಯತ್ತ ಮುಂದಡಿಯಿಡಬೇಕಾಗಿರುವುದು ಪ್ರಮುಖ ಸವಾಲು. ಪಾಲಿಕೆಗೆ ಈ ಬಾರಿ ಆಯ್ಕೆಯಾಗಿರುವ ಸದಸ್ಯರಲ್ಲಿ ಸುಮಾರು 40 ಸದಸ್ಯರು ಹೊಸಬರು, ಪಾಲಿಕೆ ಪರಿಷತ್ ಅಧಿವೇಶನ ಅವರಿಗೆ ಹೊಸತು. ಅವರು ಪರಿಣಾಮಕಾರಿಯಾಗಿ ಪಾಲ್ಗೊಳ್ಳುವಂತಾಗಲು ಹಿರಿಯ ಸದಸ್ಯರ ಮಾರ್ಗದರ್ಶನ ಅವರಿಗೆ ಬೇಕು. ಹಿರಿಯ ಸದಸ್ಯರ ಸಹಕಾರದೊಂದಿಗೆ ಹೊಸಬರನ್ನೂ ಜತೆಗೆ ಕೊಂಡೊಯ್ಯುವ ಹೊಣೆಯೂ ನೂತನ ಮೇಯರ್ ಅವರ ಮೇಲಿದೆ.
ಪಾಲಿಕೆಯ ಇತಿಹಾಸದಲ್ಲೇ 60 ಸ್ಥಾನಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಪಡೆದು ಭಾರೀ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. ಚುನಾ ವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನಗರದ ಜನತೆಗೆ ಭರಪೂರ ಭರ ವಸೆ ಗಳನ್ನು ನೀಡಿದೆ. ಇದನ್ನು ಈಡೇರಿಸುವ ಜವಾಬ್ದಾರಿಯೂ ಮೇಯರ್ ಅವರ ಮೇಲಿದೆ.
“ಹೊಸ ಮೇಯರ್-ಹಲವು ಸವಾಲು’
ಜನರ ನಿರೀಕ್ಷೆಗೆ ಸುದಿನ ವೇದಿಕೆ ನಗರಕ್ಕೆ ಹೊಸ ಮೇಯರ್ ಮತ್ತು ಉಪಮೇಯರ್ ಬಂದಿದ್ದಾರೆ. ನಗರದ ಜ್ವಲಂತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಪಾಲಿಕೆ ಆಡಳಿತ ಕಾರ್ಯ ನಿರ್ವಹಿಸಬೇಕೆಂಬುದೇ ಸುದಿನದ ಆಶಯ. ಹೊಸ ಪರಿಷತ್ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ “ಹೊಸ ಮೇಯರ್-ಹಲವು ಸವಾಲು’ ಎನ್ನುವ ಸರಣಿ ಪ್ರಾರಂಭಿಸುತ್ತಿದ್ದೇವೆ. ನಾಗರಿಕರೂ ನಗರದ ಅಭಿವೃದ್ಧಿ ಕುರಿತಂತೆ ಸೂಕ್ತವಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ಬರೆದು ಹೆಸರು, ಫೋಟೋದೊಂದಿಗೆ ವಾಟ್ಸಾಪ್ ಮಾಡಬಹುದು.
9900567000
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.