![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 5, 2019, 6:00 AM IST
ಗುರುಪುರ: ಪ್ರಥಮ ಹಂತದಲ್ಲಿ ಎರಡು ಗ್ರಾಮಗಳಲ್ಲಿ ಒಟ್ಟು 53 ಕಾಮಗಾರಿಗಳಿಗೆ 7,15,189 ರೂ. ಅನುದಾನವೂ ವಿನಿಯೋಗಿಸಲಾಗಿದೆ. ಯೋಜನಾ ಸ್ಥಳ ಪರಿಶೀಲನೆ ವೇಳೆ ಎಲ್ಲ ಕಾಮಗಾರಿಗಳ ಗುಣಮಟ್ಟ ಉತ್ತಮ ವಾಗಿರುವುದು ಕಂಡು ಬಂದಿದೆ ಎಂದು ಯೋಜನೆಗಳ ಕುರಿತು ತಾಲೂಕು ಸಂಯೋಜಕಿ ಧನಲಕ್ಷ್ಮೀ ಮಾಹಿತಿ ನೀಡಿದರು.
ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಕಾರ್ಯಗತಗೊಂಡ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನ ಗ್ರಾಮಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಸಭೆಯಲ್ಲಿ ಗುರುಪುರ ಪಂಚಾಯತ್ ವ್ಯಾಪ್ತಿಗೊಳಪಟ್ಟ ಮೂಳೂರು ಮತ್ತು ಅಡೂxರು ಗ್ರಾಮಗಳಲ್ಲಿ ಬಾವಿ, ಮನೆ ನಿರ್ಮಾಣ ಯೋಜನೆಯಡಿ ಮಂಜೂರಾದ ಮಜೂರಿ, ಸಾಮಗ್ರಿಗಳ ಮೊತ್ತವನ್ನು ಪ್ರಕಟಿಸಲಾಯಿತು.
ನರೇಗಾ ಯೋಜನೆಯ ಮಜೂರಿ ಬ್ಯಾಂಕ್ ಖಾತೆಗೆ ಬಿದ್ದಿಲ್ಲ ಎಂದು ಫಲಾನುಭವಿಯೊಬ್ಬರು ಸಭೆಯಲ್ಲಿ ದೂರಿಕೊಂಡಾಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸಭೆಗೆ ದಾಖಲೆಯೊಂದಿಗೆ ಮಾಹಿತಿ ಒದಗಿಸಿದರು. ಸಂಪನ್ಮೂಲ ವ್ಯಕ್ತಿ ಸುನೀತಾ ವರದಿ ವಾಚಿಸಿ, ನಿರೂಪಿಸಿದರು. ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯ ತ್ ಅಧ್ಯಕ್ಷೆ ರುಕಿಯಾ, ಜಿಪಂ ಸದಸ್ಯ ಯು.ಪಿ. ಇಬ್ರಾಹಿಂ, ಸಚಿನ್ ಅಡಪ, ಸದಾಶಿವ ಶೆಟ್ಟಿ, ರಾಜೇಶ್ ಸುವರ್ಣ, ಮಹಮ್ಮದ್ ಅಡೂxರು, ಜಯಲಕ್ಷ್ಮೀ, ಸೇಸಮ್ಮ, ಶೋಭಾ, ಸಂಪಾ, ಗ್ಲಾಡಿಸ್ ಮೊದಲಾದವರು ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿದರು. ನಿತ್ಯಾನಂದ ಅವರು ವಂದಿಸಿದರು.
ಕಡ್ಡಾಯ ಜಿಎಸ್‌ಟಿ ಬಿಲ್ ಸಲ್ಲಿಕೆ
ನರೇಗಾ ಯೋಜನೆಯ ಹೊಸ ನಿಯಮದಂತೆ ಇನ್ನು ಮುಂದೆ ಫಲಾನುಭವಿಗಳಿಗೆ ಸಾಮಗ್ರಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗಬೇಕಿದ್ದರೆ ಪಂಚಾತ್ ಕಚೇರಿಗೆ ಜಿಎಸ್‌ಟಿ ಬಿಲ್ ಸಲ್ಲಿಸಬೇಕಾಗುತ್ತದೆ. ಸಾಮಗ್ರಿ ಜಿಎಸ್‌ಟಿ ಬಿಲ್ ಪಾವತಿಸದಿದ್ದಲ್ಲಿ ಆ ಮೊತ್ತ ಸಿಗುವುದಿಲ್ಲ. ಈ ನಿಯಮ ನರೇಗಾದ ಎಲ್ಲ ಫಲಾನುಭವಿಗಳಿಗೆ ಅನ್ವಯವಾಗುತ್ತದೆ ಎಂದು ಧನಲಕ್ಷ್ಮೀ ತಿಳಿಸಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.