ಸೀಮಾ ಬಲ ತುಕಡಿ ಪಥಸಂಚಲನ
Team Udayavani, Apr 16, 2018, 12:05 PM IST
ಬಂಟ್ವಾಳ : ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕೋಮು ಸೂಕ್ಷ್ಮಪ್ರದೇಶವಾದ ಕಲ್ಲಡ್ಕದಲ್ಲಿ ಸೀಮಾ ಬಲ ತುಕಡಿ ಮತ್ತು ಬಂಟ್ವಾಳ ಪೊಲೀಸರು ಎ. 14ರಂದು ಮುಸ್ಸಂಜೆ ಫ್ಲಾಗ್ ಮಾರ್ಚ್ ನಡೆಸಿದರು.
ಬ್ಯಾಂಡ್, ವಾದ್ಯ ಮೇಳದ ಜತೆಗೆ ಕಲ್ಲಡ್ಕದ ಕೆ.ಸಿ.ರೋಡ್‌ನಿಂದ ಕಲ್ಲಡ್ಕ ಪೇಟೆ, ಗೋಳ್ತಮಜಲು ತನಕ ಸಾಗಿ ಬಂದರು. ಸುರಕ್ಷಾ ಸೀಮಾ ಬಲದ ಕಮಾಂಡರ್ ಧೀರಜ್ ಸಹ, ಅಡಿಶನಲ್ ಎಸ್.ಪಿ. ಸಜಿತ್, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಎಂ. ಹಾಕೆ, ಡಿವೈಎಸ್‌ಪಿ ಶ್ರೀನಿವಾಸ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಕುಮಾರ್, ನಗರ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗ ಎಸ್‌ಐ ಹರೀಶ್, ಸಂಚಾರ ಠಾಣಾಧಿಕಾರಿ ಯಲ್ಲಪ್ಪ, ಸೀಮಾ ಬಲದ ನೂರು ಮಂದಿ ಸಿಬಂದಿ, ಬಂಟ್ವಾಳ ವೃತ್ತ ವಿಭಾಗದ 80 ಮಂದಿ ಪೊಲೀಸ್ ಸಿಬಂದಿ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.