ನೇತ್ರಾವತಿಯಲ್ಲಿ ಮರೀನಾ, ಫಲ್ಗುಣಿಯಲ್ಲಿ 3 ದ್ವೀಪ ಅಭಿವೃದ್ಧಿ
Team Udayavani, Jun 24, 2021, 4:20 AM IST
ಮಹಾನಗರ: ನೇತ್ರಾವತಿ ಹಾಗೂ ಫಲ್ಗುಣಿ ನದಿಯಲ್ಲಿ ಪ್ರವಾಸೋ ದ್ಯಮಕ್ಕೆ ಪೂರಕವಾಗುವ, ನದಿಯಲ್ಲಿ ರೋರೋ (ಸರಕು ಸಾಗಾಟ) ಸೇವೆ ಆರಂಭಿ ಸುವ ಬಹುದಿನಗಳ ಆಶಯ ಕೈಗೂಡುವ ಲಕ್ಷಣ ಕಂಡುಬಂದಿದೆ.
ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಸಾಗರಮಾಲಾ ಯೋಜನೆ, ಇನ್‌ಲಾÂಂಡ್ ವಾಟರ್‌ವೆàಸ್ ಅಥಾರಿಟಿ ಆಫ್ ಇಂಡಿಯಾ (ಐಡಬ್ಲ್ಯುಎಐ) ಸಹಯೋಗದೊಂದಿಗೆ ಜಿಲ್ಲೆಯ ಎರಡೂ ನದಿಯಲ್ಲಿ ಒಟ್ಟು 340 ಕೋ.ರೂ.ಗಳ 4 ಯೋಜನೆಗಳಿಗೆ ನಿರ್ಧರಿಸಲಾಗಿದೆ. ಸದ್ಯ ಇಲಾಖೆ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲು ದ.ಕ. ಜಿಲ್ಲಾಡಳಿತ ನಿರ್ಧರಿಸಿದೆ. ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಎಸ್. ಅಂಗಾರ ಅವರು ಈ ಬಗ್ಗೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ಹಳೆ ಬಂದರು-ಕೂಳೂರು ರೋರೋ:
ನೇತ್ರಾವತಿ, ಫಲ್ಗುಣಿ ನದಿ ಮಾರ್ಗದಲ್ಲಿ ರೋರೋ ಸೇವೆ ಆರಂಭಿಸುವ ಯೋಜನ ವರದಿಯನ್ನು ತಯಾರಿಸಲಾಗಿದೆ. 30 ಕೋ.ರೂ. ವೆಚ್ಚದಲ್ಲಿ ಇದು ಜಾರಿಯಾ ಗಲಿದೆ. ಇದನ್ನು ಮೊದಲ ಹಂತದಲ್ಲಿ ನಗರದ ಹಳೆಬಂದರುವಿನಿಂದ ಕೂಳೂರು ಸೇತುವೆಯವರೆಗೆ ಎಂದು ಗುರುತಿಸ ಲಾಗಿದೆ. ಅಂದರೆ, ಬಂದರಿಗೆ ಆಗಮಿಸಿದ ಘನ ವಾಹನಗಳಲ್ಲಿ ವಸ್ತುಗಳನ್ನು ತುಂಬಿಸಿ ಕೊಂಡು ಕೂಳೂರುವರೆಗೆ ನೀರಿನಲ್ಲಿ ಬಾರ್ಜ್ ಸಹಾಯದಿಂದ ಕೊಂಡೊಯ್ಯಬಹುದು.
ಲಕ್ಷದ್ವೀಪ ಹಡಗು; ಮಂಗಳೂರಲ್ಲಿ ಹೊಸ ಜೆಟ್ಟಿ :ಲಕ್ಷದ್ವೀಪದ ಹಾಯಿ ಹಡಗುಗಳು, ಪ್ರಯಾಣಿಕರ ಹಡಗುಗಳಿಗೆ ಪೂರಕ ಸೌಲಭ್ಯಗಳೊಂದಿಗೆ ಮಂಗಳೂರಿನಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಇದೀಗ ಮತ್ತೂಮ್ಮೆ ಯೋಜನೆ ರೂಪಿಸಲಾಗುತ್ತಿದೆ. ಬಹುಕಾಲದಿಂದ ಬೇಡಿಕೆಯಾಗಿದ್ದ ಈ ಯೋಜನೆ ಒಮ್ಮೆ ಕಾರ್ಯಗತವಾಗುವ ಹಂತಕ್ಕೆ ಬಂದಿದ್ದರೂ ತಾಂತ್ರಿಕ ನೆಪದಿಂದಾಗಿ ಕೈಬಿಡಲಾಗಿತ್ತು. ಇದೀಗ ಸಾಗರಮಾಲಾ ಯೋಜನೆಯಡಿ 45 ಕೋ.ರೂ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಹೊಸ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಗಿದೆ. ಈ ಪೈಕಿ 35 ಕೋ.ರೂ ವೆಚ್ಚದಲ್ಲಿ 300 ಮೀ. ಉದ್ದದ ಬರ್ತ್ ನಿರ್ಮಾಣ, 4 ಕೋ.ರೂ ವೆಚ್ಚದಲ್ಲಿ ಬೇಸಿನ್‌ನಲ್ಲಿ -7ಮೀ. ಆಳಕ್ಕೆ ಹೂಳೆತ್ತುವುದು, 3 ಕೋ.ರೂ ವೆಚ್ಚದಲ್ಲಿ ಪ್ಯಾಸೆಂಜರ್ ಲಾಂಚ್ ನಿರ್ಮಾಣ, 3 ಕೋ.ರೂ ವೆಚ್ಚದಲ್ಲಿ ಇತರ ಪೂರಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಸರಕು ವಾಹನ ರಾ.ಹೆ.ಗೆ ಸಂಚರಿಸ ಬಹುದು. ಈ ಮೂಲಕ ನಗರದ ರಸ್ತೆಯಲ್ಲಿ ವಾಹನದಟ್ಟನೆ ಕಡಿಮೆ ಮಾಡಬಹುದು. ಇದಕ್ಕಾಗಿ 2 ಬಾರ್ಜ್ ಅಗತ್ಯವಿದೆ. ಕೂಳೂರಿ ನಲ್ಲಿ ಜೆಟ್ಟಿ ನಿರ್ಮಾಣವೂ ಆಗಬೇಕಿದೆ. ಇದಕ್ಕಾಗಿ 30 ಕೋ.ರೂ. ಅಂದಾಜಿಸಲಾಗಿದೆ. ಇದು ಯಶಸ್ಸಾದ ಅನಂತರ ಬಳಿಕ ನೇತ್ರಾವತಿಯಲ್ಲಿ ತುಂಬೆ ಡ್ಯಾಂವರೆಗೂ ರೋರೋ ಸೇವೆ ಆರಂಭಿ ಸುವ ಯೋಜನೆಯಿದೆ.
ಜಪ್ಪಿನಮೊಗರು, ಹೊಗೆಬಜಾರ್; ಮರೀನಾ:
ಮಂಗಳೂರಿನ ಹಳೆಬಂದರು ಮಂಡಳಿಯ ದಕ್ಷಿಣ ಭಾಗಕ್ಕೆ ಇರುವ ನೇತ್ರಾವತಿ ಸೇತುವೆ ಸಮೀಪ 100 ಕೋ.ರೂ. ವೆಚ್ಚದಲ್ಲಿ ಮರೀನಾ ಸಾಕಾರವಾಗಲಿದೆ. ಮೀನುಗಾರಿಕೆ, ವಾಣಿಜ್ಯ ಬೋಟ್, ನಾಡದೋಣಿ ನಿಲುಗಡೆಗೆ ಪೂರಕವಾಗುವ ಸುಂದರ ಜೆಟ್ಟಿ ಇಲ್ಲಿ ನಿರ್ಮಾಣವಾಗಲಿದೆ. ಪ್ರವಾಸೋದ್ಯಮ ನೆಲೆಯಲ್ಲಿಯೂ ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ದ್ವೀಪದಲ್ಲಿ ರೆಸಾರ್ಟ್! :
ಫಲ್ಗುಣಿ ನದಿಯಲ್ಲಿರುವ 3 ದ್ವೀಪಗಳ ಒಟ್ಟು 103 ಎಕ್ರೆ ಭೂಮಿಯನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 50 ಕೋ.ರೂ.ಗಳನ್ನು ಮೀಸಲಿರಿ ಸಲಾಗಿದೆ. ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ಧಿಪಡಿ ಸಲಾಗುತ್ತದೆ. ಪಾರ್ಕ್, ಟ್ರೀ ಪಾರ್ಕ್ ನಿರ್ಮಾಣವಾಗಲಿದೆ. ಇದೇ ರೀತಿ ಬೆಂಗ್ರೆ ಯಲ್ಲಿ 80 ಎಕ್ರೆ ಭೂಮಿಯಲ್ಲಿ ಪ್ರವಾಸೋದ್ಯ ಮಕ್ಕಾಗಿ ಐಶಾರಾಮಿ ಬೀಚ್ ರೆಸಾರ್ಟ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ನೇತ್ರಾವತಿ, ಫಲ್ಗುಣಿ ನದಿಯಲ್ಲಿ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸುವ ರೋರೋ ಸೇವೆ, ಮೂರು ದ್ವೀಪಗಳ ಅಭಿವೃದ್ಧಿ ಸಹಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು 340 ಕೋ.ರೂ. ವೆಚ್ಚದಲ್ಲಿ ಸಾಗರಮಾಲಾ ಯೋಜನೆಯಡಿ ಕೈಗೊಳ್ಳುವ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಕೇಂದ್ರ ಸರಕಾರಕ್ಕೆ ಇದನ್ನು ಕಳುಹಿಸಲು ನಿರ್ಧರಿಸಲಾಗಿದೆ. –ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.