ಮೂಡಬಿದಿರೆ ಗಂಟಾಲ್ಕಟ್ಟೆ : ವಿವಾಹಿತೆ ಆತ್ಮಹತ್ಯೆ
Team Udayavani, Apr 12, 2018, 10:58 AM IST
ಮೂಡಬಿದಿರೆ: ಗಂಟಾಲ್ಕಟ್ಟೆ ನೀರಲ್ಕೆಯ ಅಸ್ಲಾಂ ಅವರ ಪತ್ನಿ ಖೈರುನ್ನೀಸಾ (22) ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ವಾಸವಾಗಿರುವ ಗಂಟಾಲ್ಕಟ್ಟೆಯ ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಕಟ್ಟಡದ ಎದುರಿನ ಬಾಡಿಗೆ ಮನೆಯಲ್ಲಿ ಬುಧವಾರ ಅಪರಾಹ್ನ ಕಂಡುಬಂದಿದೆ.
ವಾಹನದಲ್ಲಿ ಹಣ್ಣು, ತರಕಾರಿ ಮಾರುತ್ತಿರುವ ಅಸ್ಲಾಂ ಎರಡೂವರೆ ವರ್ಷ ಹಿಂದೆ ಅಮ್ಮುಂಜೆಯ ಖೈರು ನ್ನೀಸಾರನ್ನು ವಿವಾಹವಾಗಿದ್ದರು.
ಎಂಟು ತಿಂಗಳ ಹಿಂದಷ್ಟೇ ಗಂಟಾಲ್ಕಟ್ಟೆಯಲ್ಲಿ ದಂಪತಿ ನೆಲೆಸಿದ್ದರು. ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಬುಧವಾರ ಮನೆಯಲ್ಲಿ ನಿರಂತರವಾಗಿ ಮಗು ಅಳುತ್ತಿರುವ ಕಾರಣಕ್ಕೆ ಮನೆಯ ಮಾಲಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತೆನ್ನಲಾಗಿದೆ.
ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತಹಶೀಲ್ದಾರ್ ಸಮಕ್ಷಮ ಮೃತದೇಹದ ಮಹಜರು ನಡೆಸಲಾಗಿದೆ.
ಸಂಪರ್ಕಕ್ಕೆ ಸಿಗದ ಪತಿ
ಘಟನೆಯ ಬಳಿಕ ಪತಿ ಮತ್ತು ಆತನ ಮನೆಯವರು ಸಂಪರ್ಕಕ್ಕೆ ಅಲಭ್ಯರಾಗಿದ್ದು, ಇದೊಂದು ಸಂಶ ಯಾಸ್ಪದ ಪ್ರಕರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.