‘ಪ್ರಕೃತಿ ವಿಕೋಪ ಕೊನೆಗಾಣುವಂತೆ ಸಾಮೂಹಿಕ ಪ್ರಾರ್ಥನೆ’
Team Udayavani, Aug 25, 2018, 11:49 AM IST
ಪುತ್ತೂರು: ತಾಲೂಕಿನ ವಿವಿಧೆಡೆ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯೊಂದಿಗೆ ಪೂಜೆಯು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ನಡೆಯಿತು. ಸುಖ, ಶಾಂತಿ, ನೆಮ್ಮದಿ, ಸಂಪತ್ತು ಕರುಣಿಸುವ ನಿಟ್ಟಿನಲ್ಲಿ ಸಂಕಲ್ಪಿಸಿ ಭಕ್ತರು ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸಿದರು. ಮುತ್ತೈದೆಯರು ಸೌಭಾಗ್ಯ, ಮಾಂಗಲ್ಯ ಭಾಗ್ಯ ಪ್ರಾಪ್ತಿಗಾಗಿ ವ್ರತಾಚರಣೆಯೊಂದಿಗೆ ದೇವಿಯ ವಿಶೇಷ ಪೂಜೆ ನಡೆಸಿದರು. ವರಮಹಾಲಕ್ಷ್ಮೀ ಪೂಜೆಗಳು ನಡೆಯುವಲ್ಲಿ ಪ್ರತ್ಯೇಕ ಪೂಜಾ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳ ಜತೆ ಸಂಘಸಂಸ್ಥೆಗಳ, ಸಾರ್ವ ಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಪೂಜೆಗಳು ನಡೆದವು.
ನಗರದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗು ಲದ ನಟರಾಜ ವೇದಿಕೆ, ಲಕ್ಷ್ಮೀದೇವಿ ಬೆಟ್ಟ, ಬಪ್ಪಳಿಗೆ ಬ್ರಹ್ಮಶ್ರೀ ಗುರುನಾರಾಯಣ ಮಂದಿರ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಚಾರ್ವಾಕ ಶ್ರೀ ಕಪಿಲೇಶ್ವರ ಸಮುದಾಯ ಭವನ, ಪಡುಮಲೆ ಶ್ರೀ ಕೂವೆಶಾಸ್ತರ ವಿಷ್ಣುಮೂರ್ತಿ ದೇವಸ್ಥಾನ, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೊಳುವಾರು ವಿಶ್ವಕರ್ಮ ಸಭಾಭವನ, ಕಲ್ಲಾರೆ ಶ್ರೀ ರಾಘವೇಂದ್ರ ಮಠ, ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕೌಡಿಚ್ಚಾರು ಶ್ರೀಕೃಷ್ಣ ಭಜನ ಮಂದಿರ, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನ, ಪುರುಷರಕಟ್ಟೆ ಗುರು ಪೂರ್ಣಾನಂದ ಮಂದಿರ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನ, ಗೋಳಿತೊಟ್ಟು ಸಿದ್ದಿವಿನಾಯಕ ಭಜನ ಮಂದಿರ, ಕೆಯ್ಯೂರು ಶ್ರೀ ಮಹಿಷಾಮರ್ದಿನಿ ದುರ್ಗಾಪರಮೇಶ್ವರಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮೊದಲಾದಡೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಿತು.
ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯಲ್ಲಿ ದಾರಗಳಿಗೆ ಪೂಜೆ ಸಲ್ಲಿಸುವುದು ವಿಶೇಷ. ಹೊಸದಾಗಿ ತಯಾರಿಸಿದ 12 ದಾರಗಳಿಗೆ 12 ಗಂಟುಗಳನ್ನು ಹಾಕಿ ಅರಶಿನ ಹಚ್ಚಿ ದೇವಿಯ ಜತೆ ಆರಾಧನೆ ನಡೆಸಿ ಬಲಗೈಗೆ ಧರಿಸಿಕೊಂಡರು. ಆನಂತರ ಮನೆಗೆ ತೆರಳಿ ಹಬ್ಬದ ಅಡುಗೆಗಳನ್ನು ಮಾಡಿ ಸಂಭ್ರಮಾಚರಣೆ ನಡೆಸಿದರು.
ಪ್ರಕೃತಿಗೆ ಪ್ರಾರ್ಥನೆ
ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿ ಸುವಂತೆ ಬೇಡಿಕೊಳ್ಳುವ ಜತೆಗೆ ಹಲವು ಶ್ರದ್ಧಾ ಕೇಂದ್ರಗಳಲ್ಲಿ ವಿಶೇಷವಾಗಿ ಪ್ರಕೃತಿ ವಿಕೋಪ ಮುಕ್ತವಾಗುವಂತೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಮಳೆಯೂ ಒಂದಷ್ಟು ವಿರಾಮ ಪಡೆಯುವ ಮೂಲಕ ಪೂಜೆಯ ಸಂಭ್ರಮಕ್ಕೆ ಸಹಕಾರ ನೀಡಿತು.
ಸುಳ್ಯ: ಪೂಜೆ ಸಂಪನ್ನ
ಸುಳ್ಯ: ತಾಲೂಕಿನಾದ್ಯಂತದ ದೇವಸ್ಥಾನ, ಸಾರ್ವಜನಿಕ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ, ಬಾಲಾವಲಿಕಾರ್ ರಾಜಪುರ ಸಾರಸ್ವತ ಸಮಾಜ, ದುರ್ಗಾಪರಮೇಶ್ವರಿ ಭಜನ ಮಂಡಳಿ ಮೊದಲಾದವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಯು ಪ್ರಧಾನ ಅರ್ಚಕ ಸುಪ್ರೀಂ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಸಿ. ಪ್ರಸನ್ನ ಬಡ್ಡಡ್ಕ, ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಆಲೆಟ್ಟಿ ಉಪಸ್ಥಿತರಿದ್ದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು ಉಪಸ್ಥಿತರಿದ್ದರು. ಐವರ್ನಾಡು ಪಾಲೆಪ್ಪಾಡಿ ಮಂಜುಶ್ರೀ ಯುವತಿ ಮಂಡಲದ ವತಿಯಿಂದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಯಿತು.
ಪಂಜ ಸೀಮಾ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ 8ನೇ ವರ್ಷದ ಪೂಜಾ ಕಾರ್ಯಕ್ರಮ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಹಾಗೂ ಜಾಲ್ಸೂರಿನ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನ ಮಂದಿರದ ಸಭಾಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.