ಮಳೆಗಾಗಿ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ
Team Udayavani, May 18, 2019, 5:50 AM IST
ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ಕೊರತೆಯುಂಟಾಗಿದ್ದು ಶೀಘ್ರವಾಗಿ ಮಳೆ ಬಂದು ಜನರ ಸಂಕಷ್ಟಗಳು ಪರಿಹಾರವಾಗಲಿ ಎಂದು ಕೋರಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಮನವಿಯ ಮೇರೆಗೆ ನಗರದ ವಿವಿಧ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿತ್ತು.
ಬೋಳಾರ ಶ್ರೀ ಮುಖ್ಯಪ್ರಾಣ ದೇವಸ್ಥಾನ
ಬೋಳಾರದ ಶ್ರೀ ಮುಖ್ಯಪ್ರಾಣ ದೇವ ಸ್ಥಾನದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಮಂಗಳೂರು ನಗರ ದಕ್ಷಿಣ ಮಂಡಲದ ಉಪಾಧ್ಯಕ್ಷ ರವೀಂದ್ರ ಕುಮಾರ್, ಕಾರ್ಯದರ್ಶಿಗಳಾದ ದೀಪಕ್ ಪೈ, ಲಲ್ಲೇಶ್ ಕುಮಾರ್, ಶ್ಯಾಮ ಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್, ಸುಧೀಂದ್ರ ಬೋಳಾರ, ಗುರುಪ್ರಸಾದ್, ಗಂಗೇಶ್ ಬೋಳಾರ, ಗೀತಾ ಜೆ. ರಾವ್, ದೇವಸ್ಥಾನದ ಟ್ರಸ್ಟಿಗಳಾದ ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ಉರ್ವ ಶ್ರೀ ಮಾರಿಯಮ್ಮ
ಉರ್ವ ಶ್ರೀ ಮಾರಿಯಮ್ಮ ದೇವರಿಗೆ ಮಳೆಗಾಗಿ ವಿಶೇಷ ಪ್ರಾಥನೆ ಸಲ್ಲಿಸಲಾಯಿತು.ಈ ಪೂಜೆಯಲ್ಲಿ ಮಂಗಳೂರು ದಕ್ಷಿಣದ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆತ್ತು ದೇರೆಬೈಲ್ ನೈರುತ್ಯ 26ನೇ ವಾರ್ಡನ ಅಧ್ಯಕ್ಷರಾದ ಅರುಣ್ ಕುಮಾರ್ ಗಣೇಶ್, ಸುಬೋಧ್,ಭಾಸ್ಕರ್, ಅಜಿತ್, ಯಾದವ ಮತ್ತು ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಬಜಾಲ್ ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ
ಬಜಾಲ್ ಕಾವುಬೈಲ್ ಶ್ರೀ ಪಂಚಲಿಂ ಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಬಿಜೆಪಿ ಮಂಗಳೂರು ನಗರದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಚಂದ್ರ ಶೆಟ್ಟಿ, ಖಜಾಂಚಿ ಕಿರಣ್ ರೈ, ಸ್ನೇಹಾ, ಸುಜಾತಾ ಕೊಟ್ಟಾರಿ, ಸುಮತಿ, ಮಾನಸಾ, ಮಂಜುನಾಥ್ ರೈ, ಕೃಷ್ಣ, ಚಂದ್ರ ಶೇಖರ, ವಿಕ್ರಂ ಶೆಟ್ಟಿ ಮತ್ತು ಶ್ರೀ ಕ್ಷೇತ್ರದ ಪ್ರಮುಖರಾದ ರಾಮಚಂದ್ರ ಆಳ್ವ, ಜಯ ಬಜಾಲ್, ಲೋಕೇಶ್ ಕೊಟ್ಟಾರಿ, ಲೋಕೇಶ್ ಕುಡ್ತಡ್ಕ, ಸುರೇಶ್ ಪೂಜಾರಿ, ವಿಶಾಲಾಕ್ಷಿ ನಾಯ್ಕ, ಆರತಿ ಆಳ್ವ, ದೇವಕಿ ಅಚ್ಯುತ ಗೌಡ, ಸುಜಾತಾ ಆಚಾರ್ಯ, ಹೈಮಾವತಿ, ಹರಿಣಾಕ್ಷಿ ಪಾಲ್ಗೊಂಡಿದ್ದರು.
ಶ್ರೀ ಬಬ್ಬುಸ್ವಾಮಿ ಕ್ಷೇತ್ರ
ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.ಶ್ರೀ ಕ್ಷೇತ್ರದಲ್ಲಿ ನಡೆದ ಸಂಕ್ರಮಣ ಪೂಜೆ ಸಂದರ್ಭ ದೈವಸ್ಥಾನದ ಗುರಿಕಾರರಾದ ಎಸ್. ರಾಘವೇಂದ್ರ ಅವರು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.