ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಆಗ್ರಹ 


Team Udayavani, Jul 8, 2017, 2:45 AM IST

Bantwal-Protest-7-7.jpg

ಬಂಟ್ವಾಳ: ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು ಎಂಬ ಬಲವಾದ ಆಗ್ರಹ ಬಿ.ಸಿ.ರೋಡ್‌ನ‌ಲ್ಲಿ ಜು.7ರಂದು ನಡೆದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಕೇಳಿಬಂದಿದೆ. ದೌರ್ಜನ್ಯ ನಿಯಂತ್ರಿಸಬೇಕು, ಆರ್‌ಎಸ್‌ಎಸ್‌ ಕಾರ್ಯಕರ್ತ ಉದಯ ಲಾಂಡ್ರಿ ಮಾಲಕ ಶರತ್‌ ಮೇಲಿನ ಮಾರಣಾಂತಿಕ ಹಲ್ಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿ.ಸಿ. ರೋಡ್‌ನ‌ಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ದೌರ್ಜನ್ಯದ ವಿರುದ್ಧ ಒಕ್ಕೊರಲ ದನಿ ಎತ್ತಿದರು.

ಹರಿಯಿತು ಜನಸಾಗರ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ನಿಯೋಜನೆ ಮಾಡಲಾಗಿತ್ತು. ಆದರೆ ದೌರ್ಜನ್ಯದ ವಿರುದ್ಧ ದನಿ ಎತ್ತುವುದಕ್ಕಾಗಿ ಬಿ.ಸಿ. ರೋಡ್‌ ಮತ್ತು ಸುತ್ತಲಿನ ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪ್ರತಿಭಟನೆಯನ್ನು ತಡೆಯಲು ಪೊಲೀಸರು  ವಿವಿಧ ರೀತಿಯಲ್ಲಿ ಪ್ರಯತ್ನಿಸಿದರೂ ಫ‌ಲ ನೀಡಲಿಲ್ಲ. ತುರ್ತು ಪರಿಸ್ಥಿತಿ ನಿಭಾವಣೆಗೆ ವಜ್ರ ಪಡೆ, ವಿವಿಧ ಜಿಲ್ಲೆಗಳ ಹೆಚ್ಚುವರಿ ಪೊಲೀಸ್‌ ಪಡೆಯನ್ನು ತರಿಸಿಕೊಳ್ಳಲಾಗಿತ್ತು. ಲಾಠಿಚಾರ್ಜ್‌ಗೂ ಪೊಲೀಸರು ಸಿದ್ಧಗೊಂಡಿದ್ದರು. ಬಿ.ಸಿ.ರೋಡ್‌ ಬಿಜೆಪಿ ಕಚೇರಿಯಲ್ಲಿ,  ಬಸ್‌ ನಿಲ್ದಾಣದಲ್ಲಿ, ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ತಂಡಗಳಾಗಿ ಸೇರಿಕೊಂಡಿದ್ದ ಕಾರ್ಯಕರ್ತರು ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಬಸ್‌ಸ್ಟಾಂಡ್‌ ಪ್ರದೇಶಕ್ಕೆ ಏಕಕಾಲದಲ್ಲಿ  ಬಂದು ಸೇರ್ಪಡೆಗೊಂಡರು.


ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ಪ್ರಮುಖರಾದ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಕೆ. ಪದ್ಮನಾಭ ಕೊಟ್ಟಾರಿ ಮತ್ತಿತರರು ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದಿದ್ದರು. ಉಳಿದಂತೆ  ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಶಾಸಕರಾದ ಸುನಿಲ್‌ ಕುಮಾರ್‌, ಎಸ್‌.ಅಂಗಾರ ಮೊದಲಾದವರು ನೇರವಾಗಿ ಬಂದು ಸೇರಿಕೊಂಡರು.

ಮುಚ್ಚಿದ ಅಂಗಡಿ
ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಬಿ.ಸಿ.ರೋಡ್‌ನ‌ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದ್ದವು. ಖಾಸಗಿ ಸರ್ವಿಸ್‌ ಬಸ್‌ ಮತ್ತು ವಾಹನಗಳು ಬಸ್‌ಸ್ಟಾಂಡ್‌ ತೆರವು ಮಾಡಿದವು. ಅಟೋರಿಕ್ಷಾಗಳು ಬಸ್‌ ನಿಲ್ದಾಣ ಪಕ್ಕದಲ್ಲಿ ಇರಲಿಲ್ಲ.  ಪ್ರತಿಭಟನೆಗೆ ಜನ ಸೇರುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ನಿಲುಗಡೆ ಮಾಡಿದರು. ಬಿ.ಸಿ.ರೋಡ್‌ನಿಂದ ಫರಂಗಿಪೇಟೆ ತನಕ, ಪಾಣೆಮಂಗಳೂರಿಂದ ಮೆಲ್ಕಾರ್‌ ಕಲ್ಲಡ್ಕ ತನಕ, ಬಿ.ಸಿ.ರೋಡ್‌ ಧರ್ಮಸ್ಥಳ ರಸ್ತೆಯಲ್ಲಿ ಜಕ್ರಿಬೆಟ್ಟು ತನಕ ವಾಹನಗಳ ಸರತಿಸಾಲು ನಿಲುಗಡೆ ಆಗಿತ್ತು. ಮೆಲ್ಕಾರ್‌ ಮೂಲಕ ಮಂಗಳೂರಿಗೆ ಹೋಗುವಂತೆ ಬದಲಿ ರಸ್ತೆಯನ್ನು ಸೂಚಿಸಲಾಗಿತ್ತು.

ರಾ.ಸ್ವ. ಸೇ. ಸಂಘದ ಪ್ರಮುಖ ಡಾ| ಪ್ರಭಾಕರ ಭಟ್‌, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್‌ ಕುಮಾರ್‌, ಎಸ್‌. ಅಂಗಾರ, ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು,  ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ರಾಜ್ಯ ಬಿಜೆಪಿ ವಕ್ತಾರೆ ಸುಲೋಚನಾ ಜಿ.ಕೆ. ಭಟ್‌, ಜಿಲ್ಲಾ ಮಹಿಳಾಮೋರ್ಚಾ ಪ್ರ. ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್‌, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ,  ವಿಧಾನಪರಿಷತ್‌ ಸದಸ್ಯರಾದ ಕ್ಯಾ| ಗಣೇಶ್‌ ಕಾರ್ಣಿಕ್‌,  ಮಾಜಿ ಸದಸ್ಯರಾದ ಬಾಲಕಷ್ಣ ಭಟ್‌, ಮೋನಪ್ಪ ಭಂಡಾರಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಪ್ರಮುಖರಾದ ಜಗದೀಶ ಶೇಣವ, ದಿನೇಶ್‌ ಅಮೂrರು, ರವಿರಾಜ್‌ ಬಿ.ಸಿ.ರೋಡ್‌, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ, ರಾಮ್‌ದಾಸ್‌ ಬಂಟ್ವಾಳ, ಜಿ. ಆನಂದ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ  ಶಾಂತಿಗೋಡು,  ಸಂತೋಷ್‌ ರೈ ಬೊಳಿಯಾರು,  ಪಿ.ಎಸ್‌. ಪ್ರಕಾಶ್‌, ಕ್ಯಾ| ಬ್ರಿಜೇಶ್‌ ಚೌಟ, ಕಿಶೋರ್‌ ರೈ, ಹರೀಶ್‌ ಪೂಂಜ, ಮುರಳಿಕೃಷ್ಣ  ಹಸಂತಡ್ಕ, 
ಶರಣ್‌ ಪಂಪ್‌ವೆಲ್‌, ಸತ್ಯಜಿತ್‌ ಸುರತ್ಕಲ್‌, ದಿನೇಶ್‌ ಭಂಡಾರಿ,  ಚೆನ್ನಪ್ಪ  ಕೋಟ್ಯಾನ್‌,  ನಾರಾಯಣ ಸೋಮಯಾಜಿ, ರೊನಾಲ್ಡ್‌ ಡಿ’ಸೋಜಾ, ಪುರುಷೋತ್ತಮ ಸಾಲ್ಯಾನ್‌ ದಿಂಡಿಕೆರೆ, ಮೋನಪ್ಪ ದೇವಸ್ಯ,  ಡಾ| ಕಮಲಾ ಪ್ರ. ಭಟ್‌, ಆಶಾಪ್ರಸಾದ್‌ ರೈ,  ರಾಧಾಕೃಷ್ಣ ಅಡ್ಯಂತಾಯ ಸಹಿತ  ಅನೇಕ ಕಾರ್ಯಕರ್ತರನ್ನು ಬಂಧಿಸಲಾಯಿತು.

ಪ್ರತಿಭಟನಕಾರರ ಬಂಧನ
ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಕೆಲವು ಮಂದಿ ಕುಳಿತು, ನೆಲದಲ್ಲಿ ಹೊರಳಾಡಿ ಪ್ರತಿಭಟಿಸಿದಾಗ ಅವರನ್ನು ಎತ್ತಿಕೊಂಡು ಬಸ್ಸಿಗೆ ತಳ್ಳಿದ್ದು, ಕೆಲವರನ್ನು  ಪುತ್ತೂರು ನಗರ, ಗ್ರಾಮಾಂತರ, ಬೆಳ್ತಂಗಡಿ ಠಾಣೆಗೆ ಸಾಗಿಸಿದ್ದರು. ಸಂಸದರು, ಶಾಸಕರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಂಧನದ ಬಳಿಕ ಅವರು ಜಾಮೀನು ಪಡೆದು ಬಿಡುಗಡೆ  ಹೊಂದಿದ್ದಾರೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

1-aaa

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.