ಪಿಂಚಣಿ ಹಣದಲ್ಲಿ ಅನಾಥ ಹೆಣ್ಮಕ್ಕಳ ಹೆರಿಗೆ!
Team Udayavani, Jul 30, 2019, 5:00 AM IST
ಮಹಾನಗರ: ಸಂಕಷ್ಟ ದಲ್ಲಿರುವ ಮಹಿಳೆಯರ ಆಶ್ರಯ ತಾಣ ಪ್ರಜ್ಞಾ ಸ್ವಾಧಾರ ಗೃಹಕ್ಕೆ ಒಂದೂವರೆ ವರ್ಷದಿಂದ ಸರಕಾರದಿಂದ ಅನುದಾನ ಬಾರದೆ ಇರುವುದರಿಂದ ಸುಮಾರು ಎರಡು ವಾರಗಳಲ್ಲಿ ನಾಲ್ಕು ಮಂದಿ ಅನಾಥ ಹೆಣ್ಮಕ್ಕಳ ಹೆರಿಗೆ, ಮದುವೆ, ಸಿಬಂದಿ ಸಂಬಳ, ಕೇಂದ್ರದ ಬಾಡಿಗೆ ಇವೆಲ್ಲ ವನ್ನು ಸಂಸ್ಥೆಯ ಮುಖ್ಯಸ್ಥೆಯ ಪಿಂಚಣಿ ಹಣ ಹಾಗೂ ದಾನಿಗಳ ನೆರವಿನಿಂದ ನಿರ್ವಹಿಸುವ ದುಸ್ಥಿಃತಿ ಎದುರಾಗಿದೆ.
ವಿವಿಧ ಕಾರಣಗಳಿಂದ ಮನೆಯಿಂದ ಹೊರಗುಳಿದ ಯುವತಿಯರು, ರಸ್ತೆಗಳಲ್ಲಿ ತಿರುಗಾಡುವ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಅನಾಥ ಯುವತಿಯರಿಗೆ ಆಶ್ರಯ ನೀಡುವ ನಗರದ ಪ್ರಜ್ಞಾ ಸ್ವಾಧಾರ ಗೃಹದ ನಿರ್ವಹಣೆಗೆ ಅನುದಾನದ ಕೊರತೆಯಾಗಿದೆ. ಹೀಗಾಗಿ ಇಲ್ಲಿ ಆಶ್ರಯ ಪಡೆದಿರುವ ಸುಮಾರು 40 ಮಂದಿ ಹೆಣ್ಮಕ್ಕಳು ಸಮಸ್ಯೆ ಎದುರಿಸಬೇಕಾಗಿದೆ.
ಎರಡು ವಾರಗಳಲ್ಲಿ 4 ಮಂದಿಗೆ ಹೆರಿಗೆ
ವಿವಿಧ ಕಾರಣಗಳಿಂದ ಪೊಲೀಸ್ ಠಾಣೆ ಮೆಟ್ಟಲೇರುವ ಪ್ರಕರಣಗಳು ಇತ್ಯರ್ಥವಾಗದೆ ಇರುವ ಕಾರಣಕ್ಕಾಗಿ ನೊಂದ ಮಹಿಳೆಯರನ್ನು ಪೊಲೀಸರು ಸ್ವಾಧಾರ ಗೃಹಕ್ಕೆ ತಂದು ಬಿಡುತ್ತಾರೆ. ಇಲ್ಲಿನ ಸಮಸ್ಯೆ ಬಗ್ಗೆ ಅವರಿಗೆ ಹೇಳಿದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಪೊಲೀಸರು ಹಾಗೂ ಇತರ ಅಧಿಕಾರಿಗಳು ನೊಂದ ಮಹಿಳೆಯರನ್ನು ಇಲ್ಲೇ ತಂದು ಬಿಡುತ್ತಾರೆ. ಆ ಬಳಿಕ ಅವರ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುವುದೇ ಇಲ್ಲ. ಅವರ ಲಾಲನೆ ಪಾಲನೆ ಜವಾಬ್ದಾರಿ ಸಂಸ್ಥೆಯ ಮೇಲಿರುತ್ತದೆ. ಆದರೆ ಒಂದೂವರೆ ವರ್ಷದಿಂದ ಸಂಸ್ಥೆ ನಿರ್ವಹಣೆಗೆ ಅನುದಾನ ಬಂದಿಲ್ಲ. ಆ ಕಾರಣದಿಂದ ದಾನಿಗಳ ನೆರವು ಯಾಚಿಸಿ ದಿನದೂಡಬೇಕಾಗಿದೆ. ಈ ನಡುವೆ ಸ್ವಾಧಾರ ಗೃಹದಲ್ಲಿರುವ ಗರ್ಭೀಣಿಯರ ಹೆರಿಗೆ, ಯುವತಿಯರ ಮದುವೆ ಮಾಡಬೇಕಾಗುತ್ತದೆ.
ಇದರ ಖರ್ಚನ್ನು ಸಂಸ್ಥೆಯ ಮುಖ್ಯಸ್ಥೆ ತನ್ನ ಪಿಂಚಣಿ ಹಣದಲ್ಲಿ ನಿಭಾಯಿಸಬೇಕಾದ ಸ್ಥಿತಿ ಇದೆ. ಬಾಡಿಗೆ, ಸಿಬಂದಿ ಸಂಬಳಕ್ಕೆ ಹರಸಾಹಸ ಪ್ರಜ್ಞಾ ಸ್ವಾಧಾರ ಗೃಹ ಜಪ್ಪಿನಮೊಗರಿನ ಖಾಸಗಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಇದರ ಬಾಡಿಗೆ, ಸಿಬಂದಿಗಳ ಸಂಬಳ, ಇತರ ಚಟುವಟಿಕೆಗಳಿಗಾಗಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ತಗಲುತ್ತದೆ. ಇದನ್ನು ನಿಭಾಯಿಸಲು ದಾನಿಗಳ ಮೊರೆ ಹೊಗಬೇಕಾಗುತ್ತದೆ.
ಆದರೆ ಸರಕಾರ ಮಾತ್ರ ಅನುದಾನ ನೀಡುವ ವಿಚಾರದಲ್ಲಿ ಮೌನವಹಿಸಿದೆ. ಹೀಗಾಗಿ ಅನಾಥ ಹೆಣ್ಮಕ್ಕಳ ಕಣ್ಣು ಒರೆಸುವ ಕೆಲಸದಲ್ಲಿ ತೊಡಗಿರುವ ಸಂಸ್ಥೆಯ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ ಎನ್ನುತ್ತಾರೆ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಹಿಲ್ಡಾ ರಾಯಪ್ಪನ್.
ಎಂಆರ್‌ಪಿಎಲ್‌ನಿಂದ ಸ್ವಂತ ಕಟ್ಟಡದ ಭರವಸೆ
ಪ್ರಜ್ಞಾ ಸ್ವಾಧಾರ ಗೃಹ ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಇದಕ್ಕೆ ಸ್ವಂತ ಕಟ್ಟಡದ ಆವಶ್ಯಕತೆ ಬಗ್ಗೆ ಹಲವಾರು ಬಾರಿ ಸರಕಾರದ ಗಮನಕ್ಕೆ ತಂದಿದ್ದರು. ಸುಮಾರು ವರ್ಷಗಳಿಂದ ವಿವಿಧ ಇಲಾಖೆಗಳಿದ ಅಲೆದಾಡಿದ ಬಳಿಕ ಮುಡಿಪುವಿನಲ್ಲಿ ಜಾಗ ಮಂಜೂರಾಗಿದ್ದು, ಆ ಬಳಿಕ ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿಯಿಂದ ಕಟ್ಟಡ ನಿರ್ಮಾಣ ಮಾಡುವ ಭರವಸೆ ನೀಡಿದೆ.
ಕೇಂದ್ರ ನಿರ್ವಹಣೆಗೆ ಹರಸಾಹಸ
ಒಂದೂವರೆ ವರ್ಷಗಳಿಂದ ಸ್ವಾಧಾರ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಸಿಬಂದಿ ಖರ್ಚು, ಬಾಡಿಗೆ ಸೇರಿದಂತೆ ಇತರ ಖರ್ಚು ನಿರ್ವಹಣೆ ಕಷ್ಟವಾಗುತ್ತಿದೆ. ಸದ್ಯ ನನ್ನ ಪಿಂಚಣಿ ಹಣ, ದಾನಿಗಳ ನೆರವು ನಿರ್ವಹಣೆಗೆ ಹೋಗುತ್ತಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
- ಹಿಲ್ಡಾ ರಾಯಪ್ಪನ್,ಮುಖ್ಯಸ್ಥೆ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್
– ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.