ಮಠ – ದೇಗುಲ ವಿವಾದ: ಸುಬ್ರಹ್ಮಣ್ಯ ಬಂದ್ ಯಶಸ್ವಿ
Team Udayavani, Mar 8, 2019, 1:00 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಆಡಳಿತಕ್ಕೆ ಒಪ್ಪಿಸುವಂತೆ ಮಠದ ಪರ ವಕೀಲರೊಬ್ಬರು ಸರಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ನೋಟಿಸ್ ನೀಡಿರುವ ಕ್ರಮ ವಿರೋಧಿಸಿ ಮತ್ತು ದೇವಸ್ಥಾನವನ್ನು ಮಠಕ್ಕೊಪ್ಪಿಸದಂತೆ ಸರಕಾರ ವನ್ನು ಆಗ್ರಹಿಸಿ ಕುಕ್ಕೆ ದೇವಸ್ಥಾನ ಭಕ್ತರ ಹಿತಾರಕ್ಷಣಾ ವೇದಿಕೆ ಗುರುವಾರ ನೀಡಿದ್ದ ಸುಬ್ರಹ್ಮಣ್ಯ ಬಂದ್ ಶಾಂತಿಯುತವಾಗಿ ನಡೆಯಿತು.
ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬೆಳಗ್ಗೆ 6ರಿಂದ ಸಂಜೆ 5ರ ತನಕ ಮುಚ್ಚಿದ್ದವು. ಬಂದ್‌ಗೆ ಆಟೋ ಚಾಲಕ-ಮಾಲಕರು, ಟ್ಯಾಕ್ಸಿ ಮೊದಲಾದ ಖಾಸಗಿ ಬಾಡಿಗೆ ವಾಹನಗಳ ಪೈಕಿ ಹೆಚ್ಚಿನವರು ಬೆಂಬಲ ವ್ಯಕ್ತಪಡಿಸಿದರು. ಸರಕಾರಿ ಬಸ್ ಓಡಾಟ ಸಹಜ ಸ್ಥಿತಿಯಲ್ಲಿತ್ತು. ರಾಷ್ಟ್ರೀಯ ಬ್ಯಾಂಕ್, ಸರಕಾರಿ ಕಚೇರಿ, ಸರಕಾರಿ ಮತ್ತು ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯಾಚರಿಸಿದವು. ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳು ಮಧ್ಯಾಹ್ನದ ತನಕ ಕಾರ್ಯಾಚರಿಸಿದವು. ಮಧ್ಯಾಹ್ನ ಬಳಿಕ ಕೆಲವು ವಿದ್ಯಾರ್ಥಿಗಳು ರಜೆಯ ಮೇಲೆ ತೆರಳಿದರು.
ಗೊಂದಲ
ಬಂದ್‌ಗೆ ಅವಕಾಶ ನೀಡದಂತೆ ಮಠದ ಪರ ವಕೀಲರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯವು ಬಂದ್ ತಡೆ ಬೇಡಿಕೆಯನ್ನು ನಿರಾಕರಿಸಿತ್ತು. ಬಲಾತ್ಕಾರದ ಬಂದ್‌ಗೆ ಅವಕಾಶ ನೀಡದಂತೆ ಸರಕಾರಕ್ಕೆ ಸೂಚಿಸಿತ್ತು. ಅದರಂತೆ ಶಾಂತಿಯುತ ಬಂದ್ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಹೀಗಾಗಿ ಬುಧವಾರ ರಾತ್ರಿ ಯಿಂದ ಗೊಂದಲ ಏರ್ಪಟ್ಟಿತ್ತು. ಶಾಂತಿಯುತ ಬಂದ್ ನಡೆಸುವಂತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಗಳಿಗೆ ತೊಂದರೆ ಆಗಿ ಅಶಾಂತಿ ಸೃಷ್ಟಿಯಾದಲ್ಲಿ ಸಂಘಟಕರ ಮೇಲೆ ಕಾನೂನು ಕ್ರಮ ಜರಗಿಸುವ ಎಚ್ಚರಿಕೆಯನ್ನು ಬುಧವಾರ ರಾತ್ರಿಯೇ ಪೊಲೀಸರು ನೀಡಿದ್ದರು. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಮತ್ತು ಗೃಹ ರಕ್ಷಕ ಸಿಬಂದಿಯನ್ನು ನಿಯೋಜಿಸಲಾಗಿತ್ತು.
ಮಠಕ್ಕೆ ಭದ್ರತೆ
ಸಂಪುಟ ಶ್ರೀ ಮಠ ಹಾಗೂ ಮಠದ ಆಡಳಿತದ ಹೊಟೇಲು, ಅಂಗಡಿಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.