ಬದುಕಿನೊಂದಿಗೆ ಗಣಿತ ಬೆಸುಗೆ
Team Udayavani, Apr 4, 2018, 5:11 PM IST
ಕರ್ನಾಟಕ- ಕಾಸರಗೋಡು ಗಡಿಭಾಗದ ಸುಳ್ಯಮೆ ನಿವಾಸಿ ಆಶಾ ದಿಲೀಪ್ ಕೊಡ್ಲಮೊಗರು ವಾಣಿ ವಿಜಯ ಪ್ರೌಢಶಾಲೆಯಲ್ಲಿ ಗಣಿತದ ಶಿಕ್ಷಕಿ. ವೇದಗಣಿತದಲ್ಲಿ ಪರಿಣತಿಯನ್ನು ಪಡೆದಿರುವ ಇವರು ಕಾಸರಗೋಡು, ದ.ಕ. ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಶಾಲೆಗಳಲ್ಲಿ ವೇದಗಣಿತದ ಕರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.
ಗಣಿತಕ್ಕೂ ಬದುಕಿಗೂ ಸಂಬಂಧ ಕಲ್ಪಿಸುವುದು ಹೇಗೆ?
ಬದುಕು ಮತ್ತು ಗಣಿತಕ್ಕೆ ಅವಿನಾಭಾವ ಸಂಬಂಧವಿದೆ. ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವು ಗಣಿತವನ್ನೇ ಅವಲಂಬಿಸಿದೆ. ವ್ಯಕ್ತಿಯ ಜೀವನದ ದೈನಂದಿನ ಕಾರ್ಯಗಣಿತದ ಆಧಾರದಲ್ಲೇ ನಡೆಯುತ್ತದೆ.
ಗಣಿತದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು?
ಸತತ ಪ್ರಯತ್ನ, ಆಸಕ್ತಿ, ಒಲವು ಮತ್ತು ಗಣಿತ ಸುಲಭ ಎನ್ನುವ ಕಲ್ಪನೆಯ ಜತೆಗೆ ಅದಕ್ಕೆ ಪೂರಕವಾದ ಪರಿಸರವಿದ್ದರೆ ಗಣಿತದಲ್ಲಿ ಯಶಸ್ವಿಯಾಗಲು ಸಾಧ್ಯ.
ಗಣಿತ ಆಸಕ್ತಿಯ ಭಾಗವೇ; ಹವ್ಯಾಸದ ನೆಲೆಯೇ?
ಹವ್ಯಾಸ ಎನ್ನುವುದು ಆಸಕ್ತಿಯನ್ನು ಅವಲಂಬಿಸಿರುವುದರಿಂದ ಗಣಿತ ಆಸಕ್ತಿಯ ಒಂದು ಭಾಗವಾಗಿದೆ. ಆಸಕ್ತಿಯಿದ್ದರೇ ಮಾತ್ರ ಅದನ್ನು ಹವ್ಯಾಸವಾಗಿ ಬೆಳೆಸಲು ಸಾಧ್ಯ.
ಗಣಿತ ಬಹಳ ಸುಲಭ ಎನ್ನುವವರು ಅದನ್ನು ನೋಡುವ ಬಗೆ ಹೇಗೆ?
ಗಣಿತದ ಸಮಸ್ಯೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಮತ್ತು ದೈನಂದಿನ ಬದುಕಿಗೆ ಅದನ್ನು ಅನ್ವಯಿಸುವ ಬಗೆ ತಿಳಿದವರು ಗಣಿತವನ್ನು ಆನಂದಿಸಬಲ್ಲರು ಹಾಗೂ ಅದು ಅವರಿಗೆ ಸುಲಭವಾಗುತ್ತದೆ.
ನಿಮ್ಮ ದೃಷ್ಟಿಯಲ್ಲಿ ಗಣಿತ ಎಂದರೇನು? ಕೇವಲ ಒಂದು ವಿಷಯವೇ?
ಗಣಿತ ಎನ್ನುವುದು ಜೀವನಕ್ಕೆ ಅತ್ಯಾವಶ್ಯಕವಾಗಿರುವ ಒಂದು ಕಲೆ. ವಿಷಯವೆಂದರೆ ಕಲಿಕೆ. ಅದು ಜೀವನದೊಂದಿಗೆ ಬೆಸೆದಿರುವುದು.
ವೇದ ಗಣಿತವನ್ನು ಸುಲಭವಾಗಿ ಹೇಗೆ ಪರಿಚಯಿಸಬಹುದು ?
ವೇದ ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಕಡಿಮೆ. ಇದನ್ನು ಅರಿತರೆ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಅತೀ ಕಡಿಮೆ ಸಮಯದಲ್ಲಿ ಉತ್ತರ ಪಡೆಯಲು ಸಾಧ್ಯ. ಅದರ ಸೂತ್ರಗಳನ್ನು ಕಲಿಯುವುದರಿಂದ ಭಾಷೆಯ ಶುದ್ಧಿಯಾಗುತ್ತದೆ.
ಜಾಣ್ಮೆಯ ಲೆಕ್ಕಗಳು ಗಣಿತದ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯೇ ?
ಸತತವಾಗಿ ಜಾಣ್ಮೆಯ ಲೆಕ್ಕವನ್ನು ಪರಿಹರಿಸುವುದರಿಂದ ಗಣಿತದಲ್ಲಿ ಕೌಶಲ ಬೆಳೆಯಲು ಸಾಧ್ಯವಿದೆ. ಗಣಿತದ ಹಲವಾರು ತಂತ್ರಗಳ ಬಗ್ಗೆ ಅರಿವು ಮೂಡುತ್ತದೆ.
ಗಣಿತ ಕಷ್ಟವಾಗುವುದು ಏಕೆ ?
ಗಣಿತದ ಬಗ್ಗೆ ಆರಂಭಿಕ ಜ್ಞಾನದ ಕೊರತೆ, ಪೂರ್ವಗ್ರಹ ಚಿಂತನೆಗಳು, ಮಾತೃಭಾಷೆಯಲ್ಲಿ ಶಿಕ್ಷಣವಿರದ ಕಾರಣ ಗಣಿತವನ್ನು ಸರಿಯಾಗಿ ಗ್ರಹಿಸುವಲ್ಲಿ ಎಡವುದರಿಂದ ಗಣಿತ ಕಷ್ಟ ಎನ್ನುವ ಕಲ್ಪನೆ ಬಂದಿದೆ.
ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.