ವಿಧಾನಪರಿಷತ್ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು
ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರ
Team Udayavani, Dec 4, 2021, 4:55 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ವಿಧಾನಪರಿಷತ್ ಚುನಾವಣೆಯ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣೆಯಲ್ಲಿ ದ.ಕ.ದಲ್ಲಿ ಬಂಟ್ವಾಳ ಅತೀ ಹೆಚ್ಚು 59 ಹಾಗೂ ಉಡುಪಿಯಲ್ಲಿ ಕುಂದಾಪುರ ತಾಲೂಕು ಗರಿಷ್ಠ 45 ಮತಗಟ್ಟೆಗಳನ್ನು ಹೊಂದಿದೆ.
ದ.ಕ.ದ ಮೂಡುಬಿದಿರೆ 13 ಮತ್ತು ಉಡುಪಿ ಜಿಲ್ಲೆಯ ಹೆಬ್ರಿ 9 ಮತಗಟ್ಟೆಗಳನ್ನು ಹೊಂದಿದ್ದು ಇದು ಉಭಯ ಜಿಲ್ಲೆಗಳಲ್ಲಿ ತಾಲೂಕು ಹೊಂದಿರುವ ಅತಿ ಕಡಿಮೆ ಮತಗಟ್ಟೆಯಾಗಿದೆ. ದ.ಕ.ದ ಮಂಗಳೂರು 40, ಬೆಳ್ತಂಗಡಿ 49, ಪುತ್ತೂರು 23, ಸುಳ್ಯ 26, ಕಡಬ ತಾಲೂಕು 21 ಮತಗಟ್ಟೆಗಳನ್ನು ಹೊಂದಿದ್ದು ಒಟ್ಟು ಜಿಲ್ಲೆಯಲ್ಲಿರುವ ಮತಗಟ್ಟೆಗಳ ಸಂಖ್ಯೆ 231 ಆಗಿದೆ.
ಉಡುಪಿಯ ಬೈಂದೂರು 15, ಬ್ರಹ್ಮಾವರ 28, ಉಡುಪಿ 17, ಕಾಪು 16, ಕಾರ್ಕಳ 28 ಮತಗಟ್ಟೆಗಳನ್ನು ಹೊಂದಿದ್ದು ಜಿಲ್ಲೆಯಲ್ಲಿ ಒಟ್ಟು 158 ಮತಗಟ್ಟೆಗಳಿವೆ. ಒಟ್ಟು ಕ್ಷೇತ್ರದಲ್ಲಿರುವ ಮತಗಟ್ಟೆಗಳ ಸಂಖ್ಯೆ 389. ದ.ಕ.ದಲ್ಲಿ 3,535 ಹಾಗೂ ಉಡುಪಿ ಜಿಲ್ಲೆಯಲ್ಲಿ 2,505 ಸೇರಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 6,041.
2015ರ ಡಿ. 27ರಂದು ನಡೆದಿದ್ದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 410 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆಗ ಕ್ಷೇತ್ರ ದ.ಕ.ದಲ್ಲಿ 3,844 ಹಾಗೂ ಉಡುಪಿಯಲ್ಲಿ 2,715 ಮತದಾರರು ಸೇರಿ 6,559 ಮತದಾರರನ್ನು ಹೊಂದಿತ್ತು.
ಇದನ್ನೂ ಓದಿ:ಕೆರೆಗಳು ರೈತರ ಜೀವನಾಡಿ: ತಾಪಂ ಇಒ ಸಿ.ಆರ್. ಕೃಷ್ಣಕುಮಾರ್
ಮತದಾರರಿಗೆ ಸಹಾಯಕರ ಅವಕಾಶ
ವಿಧಾನಪರಿಷತ್ ಚುನಾವಣೆಯಲ್ಲಿ ಅನಕ್ಷರಸ್ಥ, ಅಂಧ ಮತದಾರರಿದ್ದರೆ ಅವರಿಗೆ ಸಹಾಯಕರನ್ನು ಕರೆದುಕೊಂಡು ಬರಲು ಅವಕಾಶ ನೀಡಲಾಗಿದೆ. ಅವರು ಸಹಾಯಕರ ನೆರವು ಪಡೆದು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆ ಮಾಡಬಹುದಾಗಿದೆ.
ಕೇಂದ್ರ ಚುನಾವಣ ಆಯೋಗವು ಚುನಾವಣೆ ನಡೆಸುವ ನಿಯಮಾವಳಿ, 1961ರ ನಿಯಮ 40ಎಗೆ ತಂದಿರುವ ತಿದ್ದುಪಡಿಯಂತೆ ಈ ಅವಕಾಶ ನೀಡಲಾಗಿದ್ದು ಇಂತಹ ಮತದಾರರು ಜಿಲ್ಲಾಧಿಕಾರಿ ಕಚೇರಿಗೆ ಡಿ. 7ರೊಳಗೆ ಈ ಬಗ್ಗೆ ಕೋರಿಕೆ ಸಲ್ಲಿಸಬೇಕಾಗಿದೆ.
ಕ್ಷೇತ್ರದ ಮತದಾರರ ಪೈಕಿ ಯಾರಾದರೂ ಅನಕ್ಷರಸœರು, ಅಂಧರಿದ್ದಲ್ಲಿ ಮತಪತ್ರದಲ್ಲಿ 1, 2, 3 ಇತ್ಯಾದಿ ಅಂಕೆಗಳಲ್ಲಿ ಪ್ರಾಶಸ್ತ್ಯ ಮತವನ್ನು ನಮೂದಿಸುವಲ್ಲಿ ಅಸಹಾಯಕರಾಗಿದ್ದಲ್ಲಿ ಅವರಿಗೆ ಮತ ಚಲಾಯಿಸಲು ಜತೆಗಾರರನ್ನು ನೇಮಿಸಿಕೊಳ್ಳುವಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ವ್ಯಕ್ತಿಯು 18 ವರ್ಷ ತುಂಬಿದವರಾಗಿರಬೇಕು ಹಾಗೂ ಅವರನ್ನು ಒಬ್ಬ ಮತದಾರನಿಗೆ ಮಾತ್ರ ಜತೆಗಾರರಾಗಿ ನೇಮಿಸಿಕೊಳ್ಳುವಲ್ಲಿ ಅವಕಾಶವಿರುತ್ತದೆ. ಈ ಬಗ್ಗೆ ಡಿ. 7ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಕೋರಿಕೆ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.