ನವರಾತ್ರಿಗೆ ಮೇಯರ್‌ ಉಪವಾಸ ವ್ರತ!


Team Udayavani, Sep 22, 2017, 3:24 PM IST

22-Mng-2.jpg

ಮಹಾನಗರ : ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟು ಹಾಗೂ ಕ್ರಿಯಾಶೀಲ ಮೇಯರ್‌ ಎಂದೇ ಹೆಸರು ಪಡೆದಿರುವ ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಕವಿತಾ ಸನಿಲ್‌ ನವರಾತ್ರಿ ಸಮಯದಲ್ಲಿ ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಪೂರ್ಣ ಪ್ರಮಾಣದ ವ್ರತ ಕೈಗೊಳ್ಳುತ್ತಾರೆ. ನವರಾತ್ರಿಯ ಒಂಬತ್ತು ದಿನವೂ ಬರೀ ನೀರನ್ನೇ ಕುಡಿದು ದಿನ ಕಳೆಯುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನವರಾತ್ರಿ ಸಮಯದಲ್ಲಿ ಬರೀ ನೀರು ಸೇವಿಸುತ್ತಾರೆ ಎನ್ನುವ ವಿಚಾರ ಜಗತ್ತಿನಾದ್ಯಂತ ಸುದ್ದಿ ಮಾಡಿರುವ ಬೆನ್ನಲ್ಲೇ ಮೇಯರ್‌ ಕೂಡ ಹಬ್ಬವನ್ನು ಅದೇ ರೀತಿಯಲ್ಲಿ ಆಚರಿಸುತ್ತಿರುವುದು ವಿಶೇಷ. ದೇವಿಯ ಆರಾಧಕಿ ಯಾಗಿರುವ ಮೇಯರ್‌ 2009ರಿಂದ ನವರಾತ್ರಿಯ ಒಂಬತ್ತು ದಿನ ಅನ್ನ, ಆಹಾರ, ಫಲವಸ್ತುಗಳನ್ನು ತ್ಯಜಿಸಿ ಕೇವಲ ನೀರನ್ನು ಸೇವಿಸುತ್ತಿದ್ದಾರೆ. ನವ ರಾತ್ರಿಯ ಮೊದಲ ದಿನ ಮನೆಯಲ್ಲಿ ಪೂಜೆ ಮಾಡಿ ವ್ರತ ಪ್ರಾರಂಭಿಸಿದರೆ, ಕೊನೆಯ (ವಿಜಯ ದಶಮಿ) ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅನ್ನ ಸೇವಿಸಿ ವ್ರತ ಬಿಡುತ್ತಾರೆ. ಈ ಮಧ್ಯೆ ಅವರು ನೀರು ಹೊರತುಪಡಿಸಿ ಯಾವುದೇ ಫಲ ವಸ್ತುಗಳನ್ನು ಸೇವಿಸುವುದಿಲ್ಲ. ತಮ್ಮ ನಿವಾಸ ಬಿಜೈಯಿಂದ ಕಟೀಲು ದೇಗುಲಕ್ಕೆ ಪಾದ ಯಾತ್ರೆ ಮಾಡಿ, ದೇವಿಯ ದರ್ಶನ ಪಡೆಯುತ್ತಾರೆ. ನಿತ್ಯ ಎರಡು ಸಲ ಮನೆಯಲ್ಲೇ ದೇವಿ ಪೂಜೆ ಮಾಡುವ ಕವಿತಾ, ನಿತ್ಯವೂ ಒಂದು ದೇವಾಲಯಕ್ಕೆ ತೆರಳಿ ಪ್ರಾರ್ಥಿಸುತ್ತಾರೆ.

ಕುಟುಂಬದ ಸಹಕಾರ
ಮೇಯರ್‌ ಅವರ ಈ ವ್ರತಕ್ಕೆ ಪತಿ ಹಾಗೂ ಮಕ್ಕಳು ಪೂರ್ಣ ಸಹಕಾರ ನೀಡುತ್ತಾರೆ. ಪತಿ ಜಿ. ಅರುಣ್‌ ಕುಮಾರ್‌ ಕಳೆದ ಬಾರಿ ಒಂದು ಹೊತ್ತಿನ ಊಟ ಸೇವಿಸಿ ವ್ರತ ಆಚರಿಸಿದ್ದರು. ಆದರೆ ಈ ಬಾರಿ ಅವರು ವ್ರತ ಮಾಡುತ್ತಿಲ್ಲ. ಆದರೆ, ಮಗಳು ಪ್ರಿಶಾ (9) ಅಮ್ಮನೊಂದಿಗೆ ಈ ಬಾರಿ ವ್ರತದಲ್ಲಿ ಭಾಗಿಯಾಗುತ್ತೇನೆ ಎಂದು ಹಠ ಹಿಡಿದರೂ ಮೇಯರ್‌ ಅನುಮತಿ ನೀಡಿಲ್ಲ. 

ದೈನಂದಿನ ಕೆಲಸಕ್ಕೆ ಅಡ್ಡಿ ಇಲ್ಲ
ಒಂಬತ್ತು ದಿನಗಳ ಯಾವುದೇ ಆಹಾರ ಸೇವಿಸದೆ ಬರೀ ನೀರು ಕುಡಿಯುತ್ತಿದ್ದರೂ ಮೇಯರ್‌ ತಮ್ಮ ನಿತ್ಯದ ಕೆಲಸಗಳಲ್ಲಿ ಯಾವುದೇ ಬದಲಾವಣೆ ಮಾಡಿ ಕೊಂಡಿಲ್ಲ. ಮನೆಗೆಲಸ ಮುಗಿಸಿ ಅಧಿಕಾರಿಗಳೊಂದಿಗೆ ಸಭೆ, ಉಳಿದ ಕಾರ್ಯಕ್ರಮಗಳಲ್ಲಿ ಎಂದಿನಂತೆ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿರುವುದರಿಂದ ದಿನನಿತ್ಯ ಎರಡು ಗಂಟೆ ತಯಾರಿ ನಡೆಸುತ್ತಿದ್ದ ಮೇಯರ್‌, ಈ ಒಂಬತ್ತು ದಿನಗಳಲ್ಲಿ ಅಭ್ಯಾಸ ಮಾಡುವ ಸಮಯಗಳಲ್ಲಿ ಬದ ಲಾವಣೆ ಆಗಬಹುದು ಎನ್ನುತ್ತಾರೆ.

ಪೂಜೆಯೊಂದಿಗೆ ವ್ರತಾರಂಭ
9 ದಿನವೂ ನೀರು ಮಾತ್ರ ಸೇವನೆ
ಕೆಲಸಕ್ಕೆ  ಏನೂ ಅಡ್ಡಿಯಿಲ್ಲ

ದೇವರ ಕೃಪೆಯಿಂದ 
ಜನಸೇವೆ ಮಾಡಲು ಸಾಧ್ಯವಾಗಿದೆ
ನಾನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೀರು ಮಾತ್ರ ಸೇವಿಸುತ್ತೇನೆ. ನನ್ನ ವ್ರತದಿಂದ ಜನಸೇವೆಗೆ ಯಾವುದೇ ರೀತಿಯ ಧಕ್ಕೆಯಾಗದು. ದೇವರ ಆಶೀರ್ವಾದದಿಂದಲೇ ನಾನು ಜನಸೇವೆ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ಒಂಬತ್ತು ದಿನ ಅನ್ನ ತ್ಯಜಿಸಿದರೆ ಏನೂ ಆಗದು. ವ್ರತ ದಿಂದಾಗಿ ಯಾವುದೇ ಆರೋಗ್ಯ ಸಮಸ್ಯೆ ನನ್ನನ್ನು ಕಾಡಿಲ್ಲ.
ಕವಿತಾ ಸನಿಲ್‌ , ಮೇಯರ್‌

ಪ್ರಜ್ಞಾ  ಶೆಟ್ಟಿ

ಟಾಪ್ ನ್ಯೂಸ್

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.