ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಮೇಯರ್‌ ಕರಾಟೆ ಅಭ್ಯಾಸ


Team Udayavani, Jun 29, 2017, 6:34 PM IST

Sanil-29-6.jpg

ಮಹಾನಗರ: ಒಂದೆಡೆ ನಗರಾದ್ಯಂತ ಇರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕಾದ ಒತ್ತಡ, ಇನ್ನೊಂದೆಡೆ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ, ಸಂಸಾರ ನಿಭಾಯಿಸಬೇಕಾದ ಹೊಣೆ- ಇದೆಲ್ಲದರ ಮಧ್ಯೆ ಮನಪಾ ಮೇಯರ್‌ ಕವಿತಾ ಸನಿಲ್‌ ಅವರೀಗ ಕರಾಟೆ ಅಭ್ಯಾಸಕ್ಕೆ ತೊಡಗಿದ್ದಾರೆ! ಕರಾಟೆಯಲ್ಲಿ ಬರೋಬ್ಬರಿ 58 ಚಿನ್ನದ ಪದಕಗಳನ್ನು ಪಡೆದು ಹಳೆಯ ಹುಲಿ ಎನಿಸಿರುವ ಇವರು ಮತ್ತೆ ಅಖಾಡಕ್ಕೆ ಧುಮುಕಲು ಚಿಂತನೆ ನಡೆಸಿದ್ದಾರೆ. ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಕರಾಟೆಯನ್ನು ಆಯೋಜಿಸಲು ಚಿಂತನೆ ನಡೆದಿದೆ. ಒಂದುವೇಳೆ ಮಂಗಳೂರಿನಲ್ಲೇ ರಾಷ್ಟ್ರಮಟ್ಟದ ಸ್ಪರ್ಧೆ ನಡೆದರೆ ಅದರಲ್ಲಿ ಮೇಯರ್‌ ಮಹಿಳಾ ವಿಭಾಗದಲ್ಲಿ ಸ್ಪರ್ಧಿಯಾಗಲಿದ್ದಾರೆ.

ಮೇಯರ್‌ ಹಳೆಯ ಹುಲಿ
ಕವಿತಾ ಸನಿಲ್‌ ಅವರು ಕರಾಟೆಯಲ್ಲಿ ಹಳೆಯ ಹುಲಿ. 2008ಕ್ಕೆ ಮೊದಲು ಎಲ್ಲೇ ಕರಾಟೆ ಸ್ಪರ್ಧೆ ನಡೆಯುವುದಾದರೂ ಅಲ್ಲಿ ಅವರು ಸ್ಪರ್ಧಿಯಾಗಿರುತ್ತಿದ್ದರು. ಕವಿತಾ ಇದುವರೆಗೆ 58 ಚಿನ್ನ ಹಾಗೂ 18 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ದೇಶದ ವಿವಿಧೆಡೆ ಸೇರಿದಂತೆ ಆಸ್ಟ್ರೇಲಿಯಾ, ಮಲೇಶಿಯಾ, ಸ್ವಿಜರ್‌ಲ್ಯಾಂಡ್‌ ಮೊದಲಾದ ದೇಶಗಳ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕಟಾ ಹಾಗೂ ಕುಮಿಟೆ ಎರಡೂ ವಿಭಾಗಗಳಲ್ಲೂ ಇವರು ಚಾಂಪಿಯನ್‌. 1992ರಿಂದ 2006ರ ವರೆಗೆ ನಿರಂತರವಾಗಿ ರಾಷ್ಟ್ರಮಟ್ಟದಲ್ಲಿ ಸ್ವರ್ಣ ಪದಕ ಪಡೆದವರು.

2007ರಲ್ಲಿ ಅವರು ಮದುವೆಯಾದ ಕಾರಣ ಆ ವರ್ಷ ಸ್ಪರ್ಧೆಯಿಂದ ಹೊರಗಿದ್ದರು. ಆದರೆ 2008 ರಲ್ಲಿ ಮತ್ತೆ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್‌ ಎನಿಸಿಕೊಂಡಿದ್ದರು. ಅಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರೂ ಸಂಸಾರದ ಕಾರಣದಿಂದ ಭಾಗವಹಿಸಲಿಲ್ಲ. ಅದು ಅವರ ಕೊನೆಯ ಸ್ಪರ್ಧೆ. ವಿಶೇಷವೆಂದರೆ 1999ರಲ್ಲಿ ಮುಂಬಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನವನ್ನು ಗೆದ್ದು ಕೊಟ್ಟಿದ್ದರು.

ಏಕಮಾತ್ರ ಮಹಿಳೆ
ಸಾಮಾನ್ಯವಾಗಿ ಕರಾಟೆಪಟುಗಳೆಂದರೆ ಅವರು ಇಂಡಿಯನ್‌ ಅಥವಾ ಬುಡೊಕಾನ್‌ ಶೈಲಿಯಲ್ಲಿ ಚಾಂಪಿಯನ್‌ಗಳಾಗಿರುತ್ತಾರೆ. ಆದರೆ ಕವಿತಾ ಎರಡೂ ಶೈಲಿಗಳಲ್ಲೂ ಬ್ಲ್ಯಾಕ್‌ ಬೆಲ್ಟ್ ಪಡೆದಿರುವ ಏಕಮಾತ್ರ ಮಹಿಳೆ ಎಂಬ ಗೌರವಕ್ಕೆ ಪಾತ್ರರು. 1997-98ರಲ್ಲಿ ಮೇ ಡೇಯ ಸಂದರ್ಭದಲ್ಲಿ ನೆಹರೂ ಮೈದಾನದಲ್ಲಿ ತನ್ನ ಹೊಟ್ಟೆಯಿಂದ 360 ಸಿಸಿಯ ಬುಲೆಟ್‌ ಬೈಕ್‌ ಪಾಸ್‌ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇಂಡಿಯನ್‌ ಶೈಲಿಯಲ್ಲಿ ಸುರೇಂದ್ರ, ಸುರೇಶ್‌, ಈಶ್ವರ ಕಟೀಲ್‌ ಇವರು ಮಾಸ್ಟರ್‌ಗಳಾಗಿದ್ದು, ನರಸಿಂಹನ್‌ ಗ್ರ್ಯಾಂಡ್‌ ಮಾಸ್ಟರ್‌ ಆಗಿದ್ದಾರೆ. ಬುಡೋಕಾನ್‌ನಲ್ಲಿ ಪದ್ಮನಾಭ ಮಾಸ್ಟರ್‌ ಆಗಿದ್ದು, ಪರಮೇಶ್ವರ್‌ ಗ್ರ್ಯಾಂಡ್‌ಮಾಸ್ಟರ್‌ ಹಾಗೂ ಆಸ್ಟ್ರೇಲಿಯಾದ ರಿಚ್ಚಾರ್ಡ್‌ ಚೂ ಅವರು ಮೈನ್‌ ಗ್ರ್ಯಾಂಡ್‌ಮಾಸ್ಟರ್‌.

ಯಶಸ್ಸಿನ ಗುಟ್ಟೇನು?
ಮೇಯರ್‌ ಅವರು ಕರಾಟೆಯಲ್ಲಿ ಇಷ್ಟು ಸಾಧನೆ ಮಾಡಲು ಕಾರಣವಾದ ಅಂಶವೆಂದರೆ, ಅವರು ಕರಾಟೆ ಕಲಿಯುತ್ತಿದ್ದ ವೇಳೆ ಹುಡುಗಿಯರು ಕರಾಟೆ ಕಲಿಯಲು ಬಂದರೂ ಅರ್ಧದಲ್ಲಿ ಬಿಡುತ್ತಿದ್ದರು. ಹೀಗಾಗಿ ಇವರು ಪುರುಷರೊಂದಿಗೆ ಕರಾಟೆ ಅಭ್ಯಾಸ ಮಾಡಬೇಕಿತ್ತು. ಇದೇ ನನ್ನ ಯಶಸ್ಸಿನ ಗುಟ್ಟು ಎನ್ನುತ್ತಾರೆ ಮೇಯರ್‌. ಇವರ ಜತೆಗೆ ಪವರ್‌ ಲಿಫ್ಟಿಂಗ್‌, ವೈಟ್‌ ಲಿಫ್ಟಿಂಗ್‌ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ.

ಭಾಗವಹಿಸಲು ಸಂತೋಷ
2008ರಲ್ಲಿ ಕೊನೆಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಇದೀಗ ಮಂಗಳೂರಿನಲ್ಲೇ ದೊಡ್ಡಮಟ್ಟದ ಸ್ಪರ್ಧೆಯೊಂದು ಆಯೋಜನೆಗೊಳ್ಳುತ್ತಿರುವುದರಿಂದ ಭಾಗವಹಿಸಬೇಕೆಂಬ ಇಚ್ಛೆ ಇದೆ. ಈಗಾಗಲೇ ಬೆಳಗ್ಗೆ 5ರಿಂದ 7ರ ವರೆಗೆ ಅಭ್ಯಾಸ ಮಾಡುತ್ತಿದ್ದೇನೆ. ರವಿವಾರ ಕರಾಟೆ ತರಗತಿಗೆ ಹೋಗುತ್ತೇನೆ. ಹೀಗಾಗಿ ಇದರಿಂದ ನನ್ನ ಮೇಯರ್‌ ಹೊಣೆಗೆ ಯಾವುದೇ ತೊಂದರೆಯಾಗದು. ಮತ್ತೂಮ್ಮೆ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಭಾಗವಹಿಸಲು ಸಂತೋಷವಾಗುತ್ತದೆ. 
– ಕವಿತಾ ಸನಿಲ್‌, ಮೇಯರ್‌
 
ಅವರು ಗಟ್ಟಿ ಮಹಿಳೆ
ನಾಲ್ಕನೇ ತರಗತಿಯಲ್ಲಿರುವಾಗ ಕವಿತಾ, ಕರಾಟೆ ಕಲಿಯಲು ನನ್ನಲ್ಲಿ ಸೇರಿದ್ದರು. ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದರು. ಅವರು ಗಟ್ಟಿ ಮಹಿಳೆಯಾಗಿರುವುದರಿಂದ ಸಾಧ್ಯವಾಗಿದೆ. ಹೊಟ್ಟೆಯ ಮೂಲಕ ಬುಲೆಟ್‌ ಪಾಸ್‌ ಮಾಡಿದ ಏಕಮಾತ್ರ ಮಹಿಳೆ ಅವರು. ಇದರೊಂದಿಗೆ ಮಾನವೀಯ ಗುಣವೂ ಅವರಲ್ಲಿದೆ. ಅವರ ಗುರುಗಳು ಎನಿಸುವುದಕ್ಕೆ ಹೆಮ್ಮೆ ಇದೆ. ಒಂದು ತಿಂಗಳು ಅಭ್ಯಾಸ ಮಾಡಿದರೆ ಮಾತ್ತೂಮ್ಮೆ ಸ್ಪರ್ಧಿಸಬಹುದು. 
– ಸುರೇಂದ್ರ ಬಿ., ಮೇಯರ್‌ ಅವರ ಕರಾಟೆ ಮಾಸ್ಟರ್‌

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.