ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಮೆಗಾ ವ್ಯಾಕ್ಸಿನೇಶನ್ : 2832 ಮಂದಿಗೆ ಲಸಿಕೆ
Team Udayavani, Jul 20, 2021, 7:15 PM IST
ಮೂಡುಬಿದಿರೆ : ಸಮುದಾಯ ಆರೋಗ್ಯ ಕೇಂದ್ರ ಮತ್ತು ಪುರಸಭೆ ಮೂಡುಬಿದಿರೆ ಇವುಗಳ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ ಮಂಗಳವಾರ 18 ವರ್ಷ ಮೇಲ್ಪಟ್ಟ ಆದ್ಯತಾ ವಲಯದವರಿಗೆ ಆಯೋಜಿಸಲಾದ ಬೃಹತ್ ಕೋವಿಡ್ ಲಸಿಕಾ ಅಭಿಯಾನದಲ್ಲಿ ೨,೮೩೨ ಮಂದಿ ಕೋವಿಡ್ ಲಸಿಕೆ ಪಡೆದುಕೊಂಡರು.
ಹೋಟೆಲ್, ಬೇಕರಿ, ಗ್ಯಾರೇಜ್, ಟೇಲರಿಂಗ್, ಸೆಲೂನು, ಬ್ಯೂಟಿಪಾರ್ಲರ್ ಸಹಿತ ವಿವಿಧ ರಂಗಗಳ ಕಾರ್ಮಿಕರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಯಿತು. ಈ ನಡುವೆ ಸಾರ್ವಜನಿಕರೂ ಆಗಮಿಸಿದ್ದ ಕಾರಣ ನಿಗದಿತ 2500 ಮಂದಿಯ ಕೋಟಾ ಮೀರಿ 2,832 ಮಂದಿಗೆ ಲಸಿಕೆ ನೀಡುವಂತಾಯಿತು ಎಂದು ತಿಳಿದುಬಂದಿದೆ.
ಆದ್ಯತಾ ರಂಗಗಳ ಮಂದಿ ತಮ್ಮ ಪಂಚಾಯತ್ ಇಲ್ಲವೇ ಪುರಸಭೆಯಿಂದ `ಅನೆಕ್ಸರ್೩’ನ್ನು ಹಾಜರು ಪಡಿಸಬೇಕೆಂದಿದ್ದರು ಸಮಯಾವಕಾಶದ ಕೊರತೆಯಿಂದಾಗ ಎಷ್ಟೋ ಮಂದಿ ನೇರವಾಗಿ ವಿದ್ಯಾಗಿರಿಗೆ ಬಂದು ಪರದಾಡುವಂತಾಯಿತಾದರೂ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಾಧ್ಯವಿರುವ ಕ್ರಮ ಜರಗಿಸಿ ಲಸಿಕೆಗೆ ಅವಕಾಶ ಮಾಡಿಕೊಡಲು ಸೂಚಿಸಿದರು.ಹೀಗಾಗಿ 18 ವರ್ಷ ಮೇಲ್ಪಟ್ಟ, ಆದ್ಯತೆ ಇರುವ, ಇಲ್ಲದ ಸಾರ್ವಜನಿಕರು ಮೊದಲನೇ ಇಲ್ಲವೇ ಎರಡನೇ ಡೋಸ್ ಲಸಿಕೆ ಪಡೆದರು.
ಮೂಡುಬಿದಿರೆ ತಾಲೂಕು: ಇದುವರೆಗೆ 60,000 ಮಂದಿಗೆ ಲಸಿಕೆ
ಮೆಗಾ ವ್ಯಾಕ್ಸಿನೇಶನ್ ಶಿಬಿರ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮೂಡುಬಿದಿರೆ ತಾಲ್ಲೂಕಿನಲ್ಲಿ ಇದುವರೆಗೆ 60,000 ಮಂದಿಗೆ ಲಸಿಕೆ ನೀಡಲಾಗಿದ್ದು ಇಂದಿನ ಗುರಿ ಸೇರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಸುಮಾರು ಹನ್ನೆರಡು ಸಾವಿರ ಮಂದಿ ಫಲಾನುಭವಿಗಳಾಗಿದ್ದಾರೆ’ ಎಂದು ಹೇಳಿದರು.
ಪ್ರಾರಂಭದಲ್ಲಿ ಲಸಿಕೆ ಸುಲಭವಾಗಿ ಲಭಿಸುತ್ತಿರುವಾಗ ಯಾರಿಗೂ ಇದರ ಮಹತ್ವದರಿವಾಗಿರಲಿಲ್ಲ. ಬಳಿಕ ಜನ ಲಸಿಕೆಗಾಗಿ ಮುಗಿಬೀಳುತ್ತಿದ್ದಾರೆ. ಸರಕಾರ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಂಡಿದೆ ಎಂದ ಅವರು ಆರೋಗ್ಯಕಾರ‍್ಯಕರ್ತೆಯರು, ಆಳ್ವಾಸ್‌ನಂಥ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣಕ್ಕೆ ನಡೆಸುತ್ತಿರುವ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಅಳ್ವ ಮಾತನಾಡಿ, `ಕನ್ನಡ ಭವನದಲ್ಲಿ ಕೋವಿಡ್ ಸೋಂಕಿತರಿಗೆ ನಿರಂತರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಮುಂದೆಯೂ ದೊಡ್ಡ ಪ್ರಮಾಣದ ಲಸಿಕೆ ಅಭಿಯಾನಕ್ಕೆ ಆಳ್ವಾಸ್ ಸಂಸ್ಥೆ ಸಹಕಾರ ಇದೆ’ ಎಂದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್ ದಿನೇಶ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ನೋಡೆಲ್ ಅಽಕಾರಿ ಸುಭಾಸ್ ಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ. ಬಾಹುಬಲಿ ಪ್ರಸಾದ್, ಕ್ಷೇತ್ರ ಆರೋಗ್ಯ ಶಿಕ್ಷಣಾಽಕಾರಿ ಸುಶೀಲಾ ಕೆ. , ಉದ್ಯಮಿ ಕೆ. ಶ್ರೀಪತಿ ಭಟ್, ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.