ಗೈರಾದ ಸದಸ್ಯರು, ಭಾಗವಹಿಸದ ಸಾರ್ವಜನಿಕರು


Team Udayavani, Jan 12, 2018, 3:37 PM IST

12-Jan-22.jpg

ಪುತ್ತೂರು: ನಗರಸಭೆ ಆಡಳಿತ 2018- 19ನೇ ಸಾಲಿನ ಆಯವ್ಯಯ ಮಂಡನೆ ಕುರಿತ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಪೂರ್ವಭಾವಿ ಸಭೆ ಗುರುವಾರ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ ಸಾರ್ವಜನಿಕ ವಲಯ ದಿಂದ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಯಿತು. ಅರ್ಧಕ್ಕಿಂತ ಹೆಚ್ಚು ಸದಸ್ಯರೇ ಸಭೆಯಲ್ಲಿ ಭಾಗವಹಿಸಲಿಲ್ಲ. 

ಸಾರ್ವಜನಿಕರು ಹಾಗೂ ವಿವಿಧ ಸಂಘ -ಸಂಸ್ಥೆಗಳ ಅಭಿಪ್ರಾಯ ಪಡೆದು ಆಯವ್ಯಯ ಮಾಡುವ ಕುರಿತ ಸಭೆಯನ್ನು ಕರೆಯಲಾಗಿದೆ ಎಂದು ವಿಷಯ ಪ್ರಸ್ತಾಪಿಸಿದಾಗ, ನಾಮನಿರ್ದೇಶಿತ ಸದಸ್ಯ ಜೋಕಿಂ ಡಿ’ಸೋಜಾ, ನಗರಸಭಾ ವ್ಯಾಪ್ತಿಯಲ್ಲಿ ಇಷ್ಟೇ ಜನರಿರುವುದೇ? ಎಂದು ಪ್ರಶ್ನಿಸಿದರು. ಸದಸ್ಯ ಎಚ್‌. ಮಹಮ್ಮದಾಲಿ ಮಾತನಾಡಿ, ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಬಜೆಟ್‌ ಮಂಡನೆ ಮಾಡುವ ತೀರ್ಮಾನ ಮಾಡಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟನೆ ನೀಡಲಾಗಿದೆ. ಆದರೂ ಸಾರ್ವಜನಿಕರು ಬಂದಿಲ್ಲ ಎಂದರು.

ಸಾರ್ವಜನಿಕರಿಂದ ಅಸಹಕಾರ
ಕಳೆದ ಬಾರಿ ಬೈಲಾ ಸಿದ್ಧಪಡಿಸುವ ಕುರಿತು ಪುತ್ತೂರು ನಗರದ ವರ್ತಕರು, ಸಾರ್ವಜನಿಕರ ಸಭೆ ಕರೆಯಲಾಗಿತ್ತು.
ಅದಕ್ಕಾಗಿ 1,500 ಆಹ್ವಾನ ಪತ್ರಿಕೆಗಳನ್ನು ಹಂಚಲಾಗಿತ್ತು. ಆದರೆ ಬೆರಳೆಣಿಕೆಯ ವರ್ತಕರು, ಸಾರ್ವಜನಿಕರು ಸಭೆಗೆ ಹಾಜರಾಗಿದ್ದರು. ಈ ಸಭೆಯಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಅಸಹಕಾರ ತೋರಿಸುತ್ತಿದ್ದಾರೆ. ಅವರು ತಮ್ಮ ಜವಾಬ್ದಾರಿ ಅರಿಯಬೇಕು ಎಂದರು.

ಸದಸ್ಯ ರಮೇಶ್‌ ರೈ ಮೊಟ್ಟೆತ್ತಡ್ಕ ಮಾತನಾಡಿ, ಸಾರ್ವಜನಿಕರಿಗೆ ನಗರಸಭೆಯಿಂದ ನೀಡುವ ಮಾಹಿತಿ ಅರ್ಥವಾಗುತ್ತಿಲ್ಲ. ಸಭೆ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರ ಸ್ಪಂದನೆ ಇಲ್ಲವಾಗಿದೆ ಎಂದರು. ಇದಕ್ಕೆ ಸದಸ್ಯ ಸುಜೀಂದ್ರ ಪ್ರಭು ಧ್ವನಿಗೂಡಿಸಿದರು.

ಬಂದವರನ್ನು ಕುಳ್ಳಿರಿಸಿದರು
ಸಭೆಯಲ್ಲಿ ಸಾರ್ವಜನಿಕರು ಇಲ್ಲದ ಹಿನ್ನೆಲೆಯಲ್ಲಿ ತಮ್ಮ ವೈಯುಕ್ತಿಕ ಕೆಲಸಕ್ಕೆಂದು ನಗರಸಭೆ ಕಚೇರಿಗೆ ಆಗಮಿಸಿದವರನ್ನು ಸಭೆಗೆ ಕರೆತಂದು ಕೂರಿಸಲಾಯಿತು. ಉದ್ದೇಶ ತಿಳಿಯದೆ ಅವರಲ್ಲಿ ಗೊಂದಲ ಮೂಡಿತು. ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ನಗರಸಭೆಯ ಬಜೆಟ್‌ ಮಂಡನೆ ಮಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಅಭಿಪ್ರಾಯ ಪಡೆಯುವ ಸಭೆಯನ್ನು ಕರೆಯಲಾಗಿತ್ತು. ಆದರೆ ಸಾರ್ವಜನಿಕರು ಸ್ಪಂದನೆ ನೀಡಿಲ್ಲ. ನೀವೂ ಸಾರ್ವಜನಿಕರು ಆಗಿರುವ ಕಾರಣದಿಂದ ನಿಮ್ಮನ್ನು ಸಭೆಗೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೂ ತಮ್ಮ ಕೆಲಸಕ್ಕಾಗಿ ನಗರಸಭೆ ಕಚೇರಿಗೆ ಬಂದಿದ್ದು, ಅರ್ಥವಾಗದ ವಿಷಯದ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯಿಲ್ಲ ಎಂದು ಕೆಲವರು ಗೊಣಗಿದರು.

ರೋಹಿತ್‌ ಎಂಬುವರು ಮಾತನಾಡಿ, ಪಾರ್ಕಿಂಗ್‌ ಶುಲ್ಕ ವಸೂಲಿಯಿಂದ ನಗರ ಸಭೆಗೆ ಎಷ್ಟು ಆದಾಯ ಬರುತ್ತಿದೆ ಎಂಬ ಮಾಹಿತಿ ನೀಡಿ, ಪಾರ್ಕಿಂಗ್‌ ವ್ಯವಸ್ಥೆಯ ವಿವರ ಕೊಡಿ ಎಂದರು. ಪೌರಾಯುಕ್ತೆ ರೂಪಾ ಶೆಟ್ಟಿ ಉತ್ತರಿಸಿ, ಆದಾಯವನ್ನು ಹೇಗೆ ಸಂಗ್ರಹಿಸಬಹುದು? ಮುಂದಿನ ಮುಂಗಡಪತ್ರ ಹೇಗಿರಬೇಕು ಎಂಬ ಕುರಿತು ಅಭಿಪ್ರಾಯ ಸಂಗ್ರಹಿಸುವುದು ಈ ಸಭೆಯ ಉದ್ದೇಶ ಎಂದರು.

ನಗರಸಭೆ ಉಪಾಧ್ಯಕ್ಷ ಬಿ. ವಿಶ್ವನಾಥ ಗೌಡ, ಸದಸ್ಯರಾದ ವಾಣಿ ಶ್ರೀಧರ್‌, ಯಶೋದಾ ಹರೀಶ್‌, ಮುಖೇಶ್‌ ಕೆಮ್ಮಿಂಜೆ, ಶಕ್ತಿ ಸಿನ್ಹಾ, ಜೆಸಿಂತಾ ಮಸ್ಕರೇನಸ್‌, ಉಷಾ ಆಚಾರ್ಯ, ಅನ್ವರ್‌ ಖಾಸಿಂ, ನಾಮ ನಿರ್ದೇಶಿತ ಸದಸ್ಯ ದಿಲೀಪ್‌ ಕುಮಾರ್‌ ಉಪಸ್ಥಿತರಿದ್ದರು.

ಅನುದಾನದ ಮಾಹಿತಿ ನೀಡಿ
ಸಭೆಯಲ್ಲಿ ಭಾಗವಹಿಸಿದ ಪುರಸಭೆ ಮಾಜಿ ಸದಸ್ಯ ಸಂಕಪ್ಪ ಗೌಡ, ಆದಾಯದ ಮೂಲ ಹೇಳುವ ಬದಲು ನೀವು ಕಳೆದ ಬಜೆಟ್‌ನಲ್ಲಿ ಯಾವುದಕ್ಕೆ ಅನುದಾನ ನೀಡಿದ್ದೀರಿ? ಯಾವ ಮೂಲಗಳಿಂದ ಆದಾಯ ಕ್ರೋಡೀಕರಣ ನಡೆದಿದೆ? ಅದನ್ನು ತಿಳಿಸಿ ಎಂದರು. ಉತ್ತರಿಸಿದ ಪೌರಾಯುಕ್ತೆ, ಈ ಸಾಲಿನ ಬಜೆಟ್‌ನಲ್ಲಿ ಆದಾಯದ ಮೂಲಕ್ಕಾಗಿ, ಸಾರ್ವಜನಿಕರ ಸಲಹೆ ಸೂಚನೆ ತಿಳಿದು ಕೊಳ್ಳಲು ಸಭೆ ಕರೆಯಲಾಗಿದೆ ಎಂದರು.

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.