ಎನ್ಎನ್-32 ದುರಂತಕ್ಕೆ 4 ವರ್ಷ: ನಮ್ಮೂರು ವೀರಯೋಧ ಏಕನಾಥ ಶೆಟ್ಟಿ ನೆನಪು ಅಮರ
Team Udayavani, Jul 23, 2020, 2:53 PM IST
ಬೆಳ್ತಂಗಡಿ: ಚೆನೈ ತಾಂಬರಂ ವಾಯುನೆಲೆಯಿಂದ ಅಂಡಮಾನ್ ನಿಕೋಬರ್ ನ ಪೋರ್ಟ್ ಬ್ಲೇರ್ ಗೆ ಜು.22 ರಂದು ಪ್ರಯಾಣಿಸುತ್ತಿದ್ದ ಎಎನ್- 32 ಯುದ್ಧ ವಿಮಾನ ಬಂಗಾಲಕೊಲ್ಲಿ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡು ಬುಧವಾರಕ್ಕೆ ನಾಲ್ಕು ವರ್ಷ ಸಂದಿದೆ.
ಸೇವೆಯ ನಿಮಿತ್ತ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಸೇರಿ 29 ಜನ ಭಾರತೀಯ ಸೈನಿಕರು ಇಂದಿಗೂ ಕಣ್ಮರೆಯಾಗಿಯೇ ಉಳಿದಿದ್ದಾರೆ. ಏಕನಾಥ ಶೆಟ್ಟಿ ಬರುವಿಕೆಯ ನಿರೀಕ್ಷೆಯಲಿರುವ ಕುಟುಂಬ ಸದಸ್ಯರು ಅನಾಥ ಭಾವದಲಿ ಮರುಗುತ್ತಿದ್ದಾರೆ.
ವಾಯು ಪಡೆ ಇತಿಹಾಸದಲ್ಲೇ ಕರಾಳದಿನ
ವಿಮಾನವೊಂದು ನಾಪತ್ತೆಯಾಗಿ ಕಿಂಚಿತ್ತು ಕುರಿಹು ಪತ್ತೆಯಾಗದಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲೆ ಮೊದಲ ಕರಾಳ ನೆನಪಾಗಿದೆ. ಅಂದು ವಿಮಾನ ಪತ್ತೆ ಹಚ್ಚಲು ಕೇಂದ್ರ ಸರಕಾರ ಮತ್ತು ಮಿಲಿಟರಿ ತಜ್ಞರು ಸತತ ಮೂರು ತಿಂಗಳು ಎರಡು ಪಿ.8 ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾಸೇನೆಯ 12 ನೌಕೆಗಳ ಮೂಲಕ ಪ್ರಯತ್ನಿಸಿದ್ದವು.
ಗುರುವಾಯನಕೆರೆ ವೀರ ಸೇನಾನಿ ಏಕನಾಥ ಶೆಟ್ಟಿಯವರು ಅದೇ ವಿಮಾನದಲ್ಲಿ ತಮ್ಮ ಸೇವಾ ಪಯಣ ಆರಂಭಿಸಿದ್ದರು. ಆದರೆ ಅಂದು ಬೆಳಗ್ಗೆ 9.12 ಕ್ಕೆ ಸಂಪರ್ಕ ಕಡಿತಗೊಂಡು ಮಧ್ಯಾಹ್ನ 1.50ರ ವರೆಗೂ ಸಂಪರ್ಕ ಸಿಗದೇ ಇದ್ದಾಗ ವಾಯುಸೇನೆ ಮಾಹಿತಿ ನೀಡಿತ್ತು.
ಅಂದಿನಿಂದ ಇಂದಿನವರೆಗೂ ಏಕನಾಥ ಶೆಟ್ಟಿ ನೆನಪಿನಲ್ಲೆ ಪತ್ನಿ ಜಯಂತಿ ಶೆಟ್ಟಿ, ಮಗ ಅಕ್ಷಯ್ ಶೆಟ್ಟಿ, ಪುತ್ರಿ ಅಶಿತಾ ಶೆಟ್ಟಿ ಮರುಗುವಂತಾಗಿದೆ.
ಪುತ್ರಿ ಉದ್ಯೋಗ ನಿರೀಕ್ಷೆಯೂ ಈಡೇರಿಲ್ಲ
ಮಗಳು ಅಶಿತಾ ಶೆಟ್ಟಿ ಎಂಎಚ್‌ಆರ್ ಡಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಬೆಂಗಳೂರು ಬಯೋಕಾನ್ ಲಿಮಿಟೆಡ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಗ ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಸರಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕಲ್ಲಿ ತಂದೆಯಂತೆ ದೇಶ ಸೇವೆಗೆ ಸನ್ನದ್ಧರಾಗಿದ್ದಾರೆ.
ಪತಿಯ ನೆನಪಲ್ಲಿ ವರ್ಷಗಳು ಕಳೆಯುತ್ತಿದ್ದೇವೆ. ಅಧಿಕಾರಿಗಳು, ಮಂತ್ರಿಗಳು ಮಗಳಿಗೆ ಸರಕಾರಿ ಉದ್ಯೋಗ ಭರವಸೆ ನೀಡಿದ್ದರು. ಇದೀಗ ಅವಳ ಶಿಕ್ಷಣ ಪೂರ್ಣಗೊಂಡಿದೆ. ಇನ್ನು ಭರವಸೆ ಈಡೇರಿಲ್ಲ ಎಂಬ ಬೇಸರ ಇದೆ ಎನ್ನುತ್ತಿದ್ದಾರೆ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.