‘ಭಾರತ ಸುರಕ್ಷಿತ ದೇಶ ‘ ಸಂದೇಶ
Team Udayavani, Jan 21, 2018, 11:23 AM IST
ಮಹಾನಗರ: ಆರೋಗ್ಯಯುತ ಜೀವನ ಶೈಲಿ ಅಳವಡಿಕೆ ಹಾಗೂ ನಮ್ಮ ದೇಶವು ಅತ್ಯಂತ ಸುರಕ್ಷಿತ ದೇಶ ಎಂಬ ಸಂದೇಶವನ್ನು ಸಾರುವ ಸಲುವಾಗಿ ಸಚಿನ್‌ದೇವಾ ಅವರು ಒಬ್ಬಂಟಿಯಾಗಿ ಹೊಸದಿಲ್ಲಿಯಿಂದ ಬೆಂಗಳೂರಿಗೆ 2,200 ಕಿ.ಮೀ. ಸೈಕಲ್ ಪ್ರಯಾಣ ನಡೆಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಚಿನ್ ದೇವಾ ಅವರು ತನ್ನ ಸೈಕಲ್ ಪ್ರಯಾಣದ ಉದ್ದೇಶ ಹಾಗೂ ಅನುಭವಗಳನ್ನು ವಿವರಿಸಿದರು. ಗ್ವಾಲಿಯರ್‌ನ ಪ್ರತಿಷ್ಠಿತ ಸಿಂಧಿಯಾ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಸಚಿನ್ ದೇವಾ ಅವರು ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಬ್ಯಾಂಕೊಂದರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಮಂಗಳೂರು ಮೂಲದ ಯುವತಿಯನ್ನು ವಿವಾಹವಾಗಿದ್ದಾರೆ.
ಸುರಕ್ಷಿತ ದೇಶದ ಸಂದೇಶ
ಈ ಹದಿಮೂರು ದಿನಗಳ ಪ್ರಯಾಣದಲ್ಲಿ ಹಲವಾರು ಅನುಭವಗಳನ್ನು ಪಡೆದಿದ್ದೇನೆ. ಸೈಕಲ್ ಪ್ರಯಾಣದಿಂದ ಆರೋಗ್ಯ ಕಾಪಾಡಬಹುದು, ವಾಯು ಮಾಲಿನ್ಯ ತಡೆಯಬಹುದು ಹಾಗೂ ನಮ್ಮ ದೇಶ ಅತ್ಯಂತ ಸುರಕ್ಷಿತ ದೇಶ ಎಂಬ ಸಂದೇಶವನ್ನು ಸಾರುವುದು ನನ್ನ ಸೈಕಲ್ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು. ಪ್ರಯಾಣದುದ್ದಕ್ಕೂ ಜನರು, ಸಂಘ-ಸಂಸ್ಥೆಗಳು ಸ್ವಾಗತ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದರು.
ಲಡಾಖ್‌ನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ
‘ಬಾಲ್ಯದಿಂದಲೇ ಸಾಹಸ ಮಾಡುವ ಹಂಬಲ ನನ್ನಲ್ಲಿತ್ತು. ಬೈಕ್ ರ‍್ಯಾಲಿ , ಕಾರು ರ‍್ಯಾಲಿ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೆ. ಈಗ 2200 ಕಿ.ಮೀ. ಸೈಕಲ್ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ಮುಂದಿನ ಹಂತದಲ್ಲಿ ಲಡಾಖ್‌ನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ ಹಮ್ಮಿಕೊಳ್ಳಲು ನಿರ್ಧರಿಸಿದ್ದೇನೆ ‘ ಎಂದು ತಿಳಿಸಿದರು.
‘ನಾವು ಸರಕಾರ ಹಾಗೂ ಜನಪ್ರತಿ ನಿಧಿಗಳನ್ನು ದೂರುವ ಬದಲು ನಮ್ಮನ್ನು ನಾವು ಬದಲಾಯಿಸಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ನನ್ನ ಪ್ರಯಾಣದ ಯಶಸ್ಸಿಗೆ ಸಹದ್ಯೋಗಿಗಳ, ಮಿತ್ರರ, ಕುಟುಂಬದ ಸಹಕಾರವನ್ನು ಸ್ಮರಿಸುತ್ತೇನೆ’ ಎಂದರು.
ರೋಟರಿ ಕ್ಲಬ್‌ನ ವಿಕ್ರಂದತ್ತ, ವಿನಾಯಕ ಪ್ರಭು ಉಪಸ್ಥಿತರಿದ್ದರು.
7 ರಾಜ್ಯಗಳಲ್ಲಿ ಪ್ರಯಾಣ
‘ನವೆಂಬರ್ 30ರಂದು ಹೊಸ ದಿಲ್ಲಿಯ ಇಂಡಿಯಾಗೇಟ್‌ನಿಂದ ತನ್ನ ಸೈಕಲ್ ಪ್ರಯಾಣವನ್ನು ಆರಂಭಿಸಿದ್ದು ಡಿ. 12ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಂಡಿದೆ. ಒಟ್ಟು 13 ದಿನಗಳಲ್ಲಿ ಈ ಕಠಿನ ಸೈಕಲ್ ಪ್ರಯಾಣವನ್ನು ಪೂರ್ತಿಗೊಳಿಸಿದ್ದೇನೆ. 7 ರಾಜ್ಯಗಳಲ್ಲಿ ಸಾಗಿಬಂದಿದ್ದು ದಿನವೊಂದಕ್ಕೆ 170 ರಿಂದ 200 ಕಿ.ಮೀ.ಯಂತೆ ಒಟ್ಟು 2,200 ಕಿ.ಮೀ. ದೂರ ಕ್ರಮಿಸಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.