ಪವಿತ್ರ ಗ್ರಂಥ ಕುರ್‌ಆನ್ ಸಂದೇಶ ಸಾರ್ವಕಾಲಿಕ
Team Udayavani, Jan 17, 2017, 3:45 AM IST
ಮಂಗಳೂರು: ಕುರ್‌ಆನ್ ವಿಶ್ವಕ್ಕೆ ಸಾರ್ವಕಾಲಿಕ ಸಂದೇಶ ನೀಡಿದ ಪವಿತ್ರ ಗ್ರಂಥ. ಕುರ್‌ಆನ್‌ನಲ್ಲಿ ತಿಳಿಸಿದ ವಿಚಾರ ಅನುಸರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಐ ಪ್ಲಸ್ ಟಿವಿಯ ನಿರ್ದೇಶಕ ಝೈದ್ ಪಟೇಲ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಸಲಫಿ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ “ದಿ ಮಿರಾಕಲ್ ಎಕ್ಸಿಬ್ಯುಷನ್ ಆನ್ ಇಸ್ಲಾಂ’ನ ಸಮಾರೋಪ ಸಮಾರಂಭದಲ್ಲಿ “ಕುರ್‌ಆನ್‌ನ ನೈಜ ಸಂದೇಶ’ದ ಕುರಿತು ಪ್ರವಚನ ನೀಡಿದರು.
ಸೃಷ್ಟಿಕರ್ತನಿಂದ ವ್ಯವಸ್ಥಿತ ಹಾಗೂ ಯೋಜನಾಬದ್ಧವಾಗಿ ಸೃಷ್ಟಿಸಲ್ಪಟ್ಟ ಸಮಸ್ತ ಭೂಮಂಡಲ, ಖಗೋಳ ಹಾಗೂ ಸಮಸ್ತ ಜೀವಸಂಕುಲದ ಬಗ್ಗೆ ಇಂದಿನ ವೈಜ್ಞಾನಿಕ ಯುಗಕ್ಕೂ ಪ್ರಸ್ತುತವಾಗುವ ಸಂದೇಶ ನೀಡಿದೆ ಎಂದರು.
ನೌಫಲ್ ಮದನಿ, ಯು.ಎಂ. ಮೊದಿನ್ ಕುಂಞಿ, ಕರ್ನಾಟಕ ಸಲಫಿ ಅಸೋಸಿ ಯೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್, ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುರ್ರಹ್ಮಾನ್ ಉಳ್ಳಾಲ, ಕಾರ್ಯ ದರ್ಶಿ ಮೊಹಮ್ಮದ್ ಅಶ್ರಫ್ ನಝೀರ್ ಸಲಫಿ, ವಿದೇಶ ಪ್ರತಿನಿಧಿ ಹೈದರ್ ಉಳ್ಳಾಲ, ಉದ್ಯಮಿ ಸಯ್ಯದ್ ಕರ್ನಿರೆ ಮೊದಲಾದವರು ಉಪಸ್ಥಿತರಿದ್ದರು.
ಈ ಪ್ರದರ್ಶನಕ್ಕೆ ಸಚಿವರಾದ ಯು.ಟಿ. ಖಾದರ್ ಮತ್ತು ರಮಾನಾಥ ರೈ, ಶಾಸಕರಾದ ಮೊದಿನ್ ಬಾವಾ ಮತ್ತು ಜೆ.ಆರ್. ಲೋಬೋ, ಮುಖ್ಯ ಸಚೇತಕರಾದ ಐವನ್ ಡಿ’ಸೋಜಾ, ಮೇಯರ್ ಹರಿನಾಥ್, ಕಾರ್ಪೊರೇಟರ್‌ಗಳಾದ ಸುಧೀರ್, ಶಶಿಧರ್ ಹೆಗ್ಡೆ ಹಾಗೂ ಎ.ಬಿ. ಇಬ್ರಾಹಿಂ, ವಿನಾಯಕ್ ಪೈ, ಮಹಾಬಲ ಮಾರ್ಲ ಮೊದಲಾದವರು ಭೇಟಿ ನೀಡಿದರು.
ಹವಾನಿಯಂತ್ರಿತ ಪೆವಿಲಿಯನ್ ಒಳಗೆ ಸಿದ್ಧಪಡಿಸಿ ಇಡಲಾದ ವಿವಿಧ ಪ್ಯಾನಲ್‌ಗಳು ಸೃಷ್ಟಿಕರ್ತನ ಸೃಷ್ಟಿ ವೈಭವದ ಕಡೆಗೆ ಜನರ ಗಮನ ಸೆಳೆಯುವಂತಿದ್ದವು. ಧರ್ಮಬಾಹಿರ ಕಾರ್ಯಗಳಿಂದ ದೂರವಿರಿ ಕೇರಳದ ವಿಸ್ಡಂ ಗ್ಲೋಬಲ್ ಇಸ್ಲಾಮಿಕ್ ಮಿಷನ್‌ನ ಪ್ರಮುಖ ಹಾಗೂ ಶಾರ್ಜಾ ಇಂಡಿಯನ್ ಇಸ್ಲಾಹಿ ಸೆಂಟರ್‌ನ ಅಧ್ಯಕ್ಷ ಹುಸೈನ್ ಸಲಫಿ ಮಾತನಾಡಿ, ಭ್ರೂಣ ಹತ್ಯೆ, ಮದ್ಯಪಾನ, ಅಮಲು ಪದಾರ್ಥ ಸೇವನೆ, ವ್ಯಭಿಚಾರ, ಬಡ್ಡಿ ಮೊದಲಾದ ಅನಾಚಾರಗಳಿಂದ ಜನರು ಅಧಃಪತನಕ್ಕೀಡಾಗುತ್ತಿದ್ದಾರೆ. ಅದಕ್ಕಾಗಿ ಇಸ್ಲಾಂ ಧರ್ಮ ಅವೆಲ್ಲವನ್ನೂ ನಿಷೇಧಿಸಿದೆ. ಇಂತಹ ಧರ್ಮಬಾಹಿರ ಕೆಲಸಗಳಿಂದ ದೂರವಿರುವುದು ಒಳಿತು ಎಂದರು.
ಇಸ್ಲಾಂ ಧರ್ಮ ಎಂದಿಗೂ ಭಯೋತ್ಪಾದನೆಯನ್ನು ಪ್ರೇರೇಪಿಸುವುದಿಲ್ಲ. ಎಲ್ಲ ಧರ್ಮದವರೊಂದಿಗೆ ಶಾಂತಿ ಸೌಹಾರ್ದದಿಂದ ಬದುಕುವುದನ್ನು ತಿಳಿಸುತ್ತದೆ. ಕುರ್‌ಆನ್ ಅಲ್ಲಾಹನ ಪವಾಡಗಳಲ್ಲಿ ಒಂದು. ಅದರ ವಚನಗಳು ಸೃಷ್ಟಿ
ಕರ್ತನ ವಚನಗಳು ಎಂಬುದನ್ನು ಸಾಬೀತು ಪಡಿಸುತ್ತವೆ.
ಇಸ್ಲಾಂ ಧರ್ಮ ಶಾಂತಿಗಾಗಿಯೇ ನೆಲೆನಿಲ್ಲುತ್ತದೆ. ಭಯೋತ್ಪಾದನೆ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು ಹಾಗೂ ಅದನ್ನು ನಿರ್ನಾಮ ಮಾಡಬೇಕು ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.